Deepavali; ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳು.. ಗಿನ್ನಿಸ್ ದಾಖಲೆ ನಿರ್ಮಾಣ

By Suvarna NewsFirst Published Nov 3, 2021, 7:07 PM IST
Highlights

* ಅಯೋಧ್ಯಯಲ್ಲಿ ಗಿನ್ನಿಸ್ ದಾಖಲೆಯ ದೀಪಾವಳಿ
* ಹನ್ನೆರಡು ಲಕ್ಷ ದೀಪಗಳು ಬೆಳಗಲಿವೆ
* ಯೋಗಿ ಸರ್ಕಾರದಿಂದ ಗಿನ್ನಿಸ್ ದಾಖಲೆಗೆ ಸಿದ್ಧತೆ
* ಪ್ರತಿ ಗ್ರಾಮದ ಮಣ್ಣಿನ ದೀಪಗಳಲ್ಲಿ ಬೆಳಕು

ಲಕ್ನೋ(ನ.03)  ರಾಷ್ಟ್ರದಲ್ಲಿ ದೀಪಾವಳಿ ಸಂಭ್ರಮ  ಮನೆ ಮಾಡಿದೆ.  ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಹಬ್ಬ ಇನ್ನಷ್ಟು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದು  ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಲಿದೆ.  ಗಿನ್ನಿಸ್ ದಾಖಲೆ ಪುಟದಲ್ಲಿ ಅಯೋಧ್ಯೆ ದೀಪಾವಳಿ ಸಾಕ್ಷಿಯಾಗಲಿದೆ.

ಒಟ್ಟು 12 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ರೆಕಾರ್ಡ್  ಬರೆಯಲು ಅಯೋಧ್ಯೆ ಸಿದ್ಧವಾಗಿದೆ.  ಅಯೋಧ್ಯೆಯ ಕೇಂದ್ರ  ರಾಮ್ ಪೌಡಿಯಲ್ಲಿ 9 ಲಕ್ಷ ಮತ್ತು ರಾಮ ಜನ್ಮಭೂಮಿ ಸಂಕೀರ್ಣ ಸೇರಿ ನಗರದ ಬೇರೆ ಬೇರೆ ಭಾಗದಲ್ಲಿ ಮೂರು ಲಕ್ಷ ದೀಪಗಳು  ಬೆಳಗಲಿವೆ.

ಈಗಾಗಲೇ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ತಂಡ ಅಯೋಧ್ಯೆಯ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ.  ಈ ಹಿಂದೆ 2017 ರಲ್ಲಿ 1,80,000, 2018 ರಲ್ಲಿ 3,01,152, 2019 ರಲ್ಲಿ 5,50,000, 2020 ರಲ್ಲಿ 5,51000 ದೀಪಗಳನ್ನು ಬೆಳಗಿದ್ದು ದಾಖಲೆಯಾಗಿತ್ತು.

ದೀಪಾವಳಿ ನಮತರ ಅದೃಷ್ಟ ಬದಲಾಗಲು ವಾಸ್ತು ಟಿಪ್ಸ್

ಯೋಗಿ ಆಡಳಿತದಲ್ಲಿ ಬದಲಾವಣೆ;  2017 ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ದೀಪೋತ್ಸವ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಆರಂಭವಾಯಿತು. 

ದಾಖಲೆ ಸೃಷ್ಟಿಗೆ ದೀಪಗಳು ಕನಿಷ್ಠ 5 ನಿಮಿಷಗಳ ಕಾಲ ಬೆಳಗಿಸಬೇಕು.  ಸಿಎಂ ಯೋಗಿ ಆದಿತ್ಯನಾಥ್ ಕೂಡ ಅಯೋಧ್ಯೆ ತಲುಪಲಿದ್ದು ರಾಮ್ ಕಿ ಪೈಡಿ ಘಾಟ್ನಲ್ಲಿ ಸರಯು ಆರತಿಯನ್ನು ನೆರವೇರಿಸಿದ್ದಾರೆ.  ಇದರ ನಂತರ ಸಂಜೆ ರಾಮ್ ಕಿ ಪೈಡಿಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. 

ಪ್ರತಿ ಗ್ರಾಮದಿಂದ 5 ಮಣ್ಣಿನ ದೀಪಗಳನ್ನು ಬೆಳಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಯೋಧ್ಯೆಯಲ್ಲಿ 5 ದಿನಗಳ ದೀಪೋತ್ಸವ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.  ಪೊಲೀಸ್ ಸಿಬ್ಬಂದಿ ನಿಯೋಜಿಸಿ  ಬ್ಯಾರಿಕೇಡ್‌ಗಳನ್ನೂ ಹಾಕಲಾಗಿದೆ. ಅಲ್ಲದೆ, ನಯಾ ಘಾಟ್‌ನಿಂದ ರಾಮ್ ಕಿ ಪೈಡಿವರೆಗಿನ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಎರಡೂ ಕಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಹೊಸ ಘಾಟ್‌ನಿಂದ ರಾಮ್ ಕಿ ಪೈಡಿಗೆ ಹೋಗಲು ಯಾರಿಗೂ ಅವಕಾಶವಿಲ್ಲ. ಸರಯು ಮೇಲಿನ ಹಳೆಯ ಸೇತುವೆಯ ಮೇಲಿನ ಸಂಚಾರವನ್ನೂ ನಿಲ್ಲಿಸಲಾಗಿದೆ.

2017 ರಲ್ಲಿ ಪ್ರಾರಂಭವಾದ ದೀಪೋತ್ಸವ:  ದೀಪೋತ್ಸವವನ್ನು 2017 ರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಆಚರಿಸಿದರು. ಆರಂಭದಲ್ಲಿ 51,000 ದಿಯಾಗಳೊಂದಿಗೆ ದೀಪೋತ್ಸವವನ್ನು ಆಯೋಜಿಸಲಾಗಿತ್ತು. ಇದರ ನಂತರ 2019 ರಲ್ಲಿ ನಡೆದ ದೀಪೋತ್ಸವವು 4 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲು ಸಾಕ್ಷಿಯಾಯಿತು. 2020 ರಲ್ಲಿ, ಸರಯು ನದಿಯ ದಡದಲ್ಲಿ 6 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಯಿತು. ಈಗ, 2021 ರಲ್ಲಿ, ಯೋಗಿ ಆದಿತ್ಯನಾಥ್ ಆಡಳಿತವು ಈ ಕಾರ್ಯಕ್ರಮಕ್ಕಾಗಿ 12 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಾಣವಾಗಲಿದೆ. 

 

click me!