ಮೇರಠ್‌ ಸಿಎಎ ಗಲಭೆ: ಪಿಎಫ್‌ಐ ಸದಸ್ಯನ ಸೆರೆ!

By Suvarna NewsFirst Published Jan 16, 2020, 9:42 AM IST
Highlights

ಮೇರಠ್‌ ಸಿಎಎ ಗಲಭೆ: ಪಿಎಫ್‌ಐ ಸದಸ್ಯನ ಸೆರೆ| ಅಣ್ಣನ ಸಾವಿನ ಪ್ರತೀಕಾರಕ್ಕೆ ಗಲಭೆ ಸೃಷ್ಟಿಸಿದ್ದ ಎಂಬ ಆರೋಪ| ಪೊಲೀಸರಿಗೆ ಗುಂಡು, ಪ್ರತಿಭಟನಾಕಾರರಿಗೆ ಶಸ್ತ್ರಾಸ್ತ್ರ ಪೂರೈಕೆ| 1987ರ ಗಲಭೆಯೊಂದರಲ್ಲಿ ಆರೋಪಿಯ ಸೋದರ ಸಾವು

ನವದೆಹಲಿ[ಜ.16]: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರಪ್ರದೇಶದ ಮೇರಠ್‌ನಲ್ಲಿ ಕಳೆದ ವರ್ಷದ ಡಿ.20ರಂದು ನಡೆದ ಹಿಂಸಾಚಾರದ ಪ್ರಮುಖ ರೂವಾರಿ ಎನ್ನಲಾದ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ದ ಸದಸ್ಯನೊಬ್ಬನನ್ನು ಬುಧವಾರ ಬಂಧಿಸಲಾಗಿದೆ. 20 ಜನರ ಸಾವಿಗೆ ಕಾರಣವಾದ ಘಟನೆ ಸಂಬಂಧ ಬಂಧಿತನನ್ನು ಅನೀಸ್‌ ಖಲೀಫಾ ಎಂದು ಗುರುತಿಸಲಾಗಿದೆ.

CAAಗೆ ಬೆಂಬಲಿಸದವರು ದೇಶದ್ರೋಹಿಗಳೇ: ಮತ್ತೊಮ್ಮೆ ಘರ್ಜಿಸಿದ ಸೋಮಶೇಖರ್‌ ರೆಡ್ಡಿ

ಅನೀಸ್‌, 1987ರಲ್ಲಿ ನಡೆದ ಕೋಮು ಗಲಭೆಯೊಂದರಲ್ಲಿ ತನ್ನ ಸೋದರನನ್ನು ಕಳೆದುಕೊಂಡಿದ್ದ. ಇದಕ್ಕಾಗಿ ಪೊಲೀಸರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಇವನು 2019ರ ಡಿ.20ರಂದು ನಡೆದ ಸಿಎಎ ವಿರುದ್ಧದ ಹೋರಾಟವನ್ನೇ ವೇದಿಕೆಯಾಗಿ ಬಳಸಿಕೊಂಡಿದ್ದ ಎಂದು ಪೊಲೀಸರು ದೂರಿದ್ದಾರೆ.

ಅಂದು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ಹಾಗೂ ಪ್ರತಿಭಟನಾಕಾರರಿಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ಪೂರೈಸಿದ್ದಾನೆ ಎಂಬ ಗಂಭೀರ ಆರೋಪವೂ ಖಲೀಫನ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಹಿಡಿದು ಕೊಟ್ಟವರಿಗೆ 20000 ರು. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.

ಪ್ರತಿಭಟನೆ ಸಾಂವಿಧಾನಿಕ ಹಕ್ಕು, ಆಜಾದ್ ಬಂಧಿಸಿದ ದೆಹಲಿ ಪೊಲೀಸರಿಗೆ ಕೋರ್ಟ್ ಏಟು!

click me!