ಡಿಡಿ, ಆಕಾಶವಾಣಿಯ ಮೂಲಸೌಕರ್ಯ ಹೆಚ್ಚಳಕ್ಕೆ 2500 ಕೋಟಿ ರೂ. ಪ್ರಕಟ

By Kannadaprabha NewsFirst Published Jan 5, 2023, 12:15 PM IST
Highlights

ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತು ಆಲ್‌ ಇಂಡಿಯಾ ರೇಡಿಯೋ ಚಾನೆಲ್‌ಗಳ ಪ್ರಸಾರ ಮೂಲಸೌಕರ್ಯ ಮತ್ತು ಜಾಲ ವಿಸ್ತರಣೆಗಾಗಿ 2500 ಕೋಟಿ ರು. ನೆರವು ನೀಡಲು ಆರ್ಥಿಕ ವ್ಯವಹಾರಗಳ ಕುರಿತಾದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತು ಆಲ್‌ ಇಂಡಿಯಾ ರೇಡಿಯೋ ಚಾನೆಲ್‌ಗಳ ಪ್ರಸಾರ ಮೂಲಸೌಕರ್ಯ ಮತ್ತು ಜಾಲ ವಿಸ್ತರಣೆಗಾಗಿ 2500 ಕೋಟಿ ರು. ನೆರವು ನೀಡಲು ಆರ್ಥಿಕ ವ್ಯವಹಾರಗಳ ಕುರಿತಾದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಎರಡು ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಗುಣಮಟ್ಟಹೆಚ್ಚಳ, ಹೊಸ ಒಬಿ ವ್ಯಾನ್‌ಗಳ ಖರೀದಿ, ಡಿಟಿಎಚ್‌ನಲ್ಲಿ ಇನ್ನಷ್ಟು ಚಾನೆಲ್‌ಗಳ ಆರಂಭಕ್ಕೆ ಅವಕಾಶ, ಸ್ಟುಡಿಯೋಗಳನ್ನು ಎಚ್‌ಡಿ (HD)ಗುಣಮಟ್ಟಕ್ಕೆ ಹೆಚ್ಚಿಸಲು ಈ ನೆರವು ಕಲ್ಪಿಸಲಾಗಿದೆ.

ದೂರದರ್ಶನ(DD)ಮತ್ತು ಆಲ್‌ ಇಂಡಿಯಾ ರೇಡಿಯೋ(AIR)ದ ಡಿಜಿಟಲ್‌ ಆವೃತ್ತಿಗೆ ಭಾರತದ (India)ನಂತರ ಅತಿ ಹೆಚ್ಚು ಶೋತೃಗಳಿರುವುದು ಪಾಕಿಸ್ತಾನದಲ್ಲಿ ಎಂಬ ಅಚ್ಚರಿಯ ವಿಷಯ ಬೆಳಕಿಗೆ 2021ರಲ್ಲಿ ಭಾರಿ ಸದ್ದು ಮಾಡಿತ್ತು.  2020ರ ವರ್ಷದಲ್ಲಿ ದೂರದರ್ಶನ ಮತ್ತು ಆಕಾಶವಾಣಿಯ (Akashavani) ಡಿಜಟಲೀಕರಣದಲ್ಲಿ (Digitalisation) ಒಂದು ಬಿಲಿಯನ್‌(100 ಕೋಟಿ)ಯಷ್ಟು ವೀಕ್ಷಣೆಯಾಗಿದೆ ಹಾಗೂ ಹಾಗೂ 6 ಬಿಲಿಯನ್‌(600 ಕೋಟಿ) ನಿಮಿಷದಷ್ಟುಆಲಿಸಲ್ಪಟ್ಟಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತಿಳಿಸಿದೆ. ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಂವಾದ, 2020ರ ಗಣರಾಜ್ಯೋತ್ಸವದ ಪರೇಡ್‌, ಶಕುಂತಲಾ ದೇವಿ ಹಾಗೂ ಸಿರ್ಸಾ 1970 ಕುರಿತಾದ ವಿಡಿಯೋಗಳು ಅತಿಹೆಚ್ಚು ಜನಪ್ರಿಯ ವಿಡಿಯೋಗಳಾಗಿದ್ದವು.

ರೇಡಿಯೋ ಜಾಕಿ ಆಗಿ ಮೂನ್‌ಲೈಟ್‌ ಮಾಡುತ್ತಿದ್ದ ದಿನಗಳನ್ನು ನೆನೆದ ಸಿಜೆಐ ಡಿವೈ ಚಂದ್ರಚೂಡ್‌!

ಬಲಗೊಳ್ಳಲಿ ಧಾರವಾಡ ಅಕಾಶವಾಣಿ ಸುದ್ದಿ ವಿಭಾಗ

click me!