ಮಧ್ಯಪ್ರದೇಶ ಸರ್ಕಾರಿ ಉದ್ಯೋಗ ಶೇ.100 ಸ್ಥಳೀಯರಿಗೇ ಮೀಸಲು, ಕಾನೂನು ಜಾರಿ!

By Kannadaprabha News  |  First Published Aug 19, 2020, 7:27 AM IST

ಮಧ್ಯಪ್ರದೇಶ ಸರ್ಕಾರಿ ಉದ್ಯೋಗ ಶೇ.100 ಸ್ಥಳೀಯರಿಗೇ ಮೀಸಲು| ಮಧ್ಯಪ್ರದೇಶದ ಸಂಪನ್ಮೂಲ ಈ ರಾಜ್ಯದ ಮಕ್ಕಳಿಗೆ ಸೇರಿದ್ದು|  ಶೀಘ್ರ ಕಾನೂನು ಜಾರಿ: ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌


ಭೋಪಾಲ್(ಆ. 19)‌: ಸರ್ಕಾರಿ ಉದ್ಯೋಗಗಳನ್ನು ಸಂಪೂರ್ಣವಾಗಿ ಸ್ಥಳೀಯರಿಗೆ ಮೀಸಲಿಡುವ ಮಹತ್ವದ ತೀರ್ಮಾನವನ್ನು ಮಧ್ಯಪ್ರದೇಶ ಸರ್ಕಾರ ತೆಗೆದುಕೊಂಡಿದೆ. ಇದರಿಂದಾಗಿ ಇನ್ನು ಮುಂದೆ ಹೊರರಾಜ್ಯದವರಿಗೆ ಮಧ್ಯಪ್ರದೇಶದಲ್ಲಿ ಸರ್ಕಾರಿ ನೌಕರಿ ಸಿಗುವುದಿಲ್ಲ. ಮಧ್ಯಪ್ರದೇಶದ ಸಂಪನ್ಮೂಲ ರಾಜ್ಯದ ಮಕ್ಕಳಿಗೆ ಸೇರಿದ್ದು. ಹೀಗಾಗಿ ಸರ್ಕಾರಿ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಸಂಬಂಧ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ವಿಡಿಯೋ ಹೇಳಿಕೆಯಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಂಗಳವಾರ ತಿಳಿಸಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆ ( ಟಿಇಟಿ) ದಿನಾಂಕ ಪ್ರಕಟಿಸಿದ ಸುಚಿವ ಸುರೇಶ್ ಕುಮಾರ್

Tap to resize

Latest Videos

undefined

ಆ.15ರಂದು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದ ಚೌಹಾಣ್‌ ಅವರು, ಸರ್ಕಾರಿ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದಷ್ಟೇ ಹೇಳಿದ್ದರು. ಆದರೆ ಎಲ್ಲ ಉದ್ಯೋಗಗಳನ್ನೂ ಸ್ಥಳೀಯರಿಗೆ ನೀಡುವ ಕುರಿತು ತಿಳಿಸಿರಲಿಲ್ಲ. ಸ್ಥಳೀಯರಿಗೆ ಮನ್ನಣೆ ನೀಡುವ ಅವರ ಘೋಷಣೆ ಮುಂಬರುವ 27 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಲಾಭ ತಂದುಕೊಡುವ ನಿರೀಕ್ಷೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಕೃಷಿ ಸಚಿವ ಕಮಲ್‌ ಪಟೇಲ್‌, ಮಧ್ಯಪ್ರದೇಶದಲ್ಲಿ 12ನೇ ತರಗತಿವರೆಗೆ ಶಿಕ್ಷಣ ಪೂರೈಸಿದವರಿಗೆ ಮಾತ್ರ ಸರ್ಕಾರಿ ಉದ್ಯೋಗಗಳು ದೊರೆಯುತ್ತವೆ. ಈ ಸಂಬಂಧ ಅಗತ್ಯ ತಿದ್ದುಪಡಿಗಳನ್ನು ತರುತ್ತೇವೆ ಎಂದು ತಿಳಿಸಿದ್ದಾರೆ.

ಭಾರತ, ಚೀನಾಗೆ ಪ್ರಯಾಣಿಸ ಬೇಡಿ; ನಾಗರಿಕರಿಗೆ ಅಮೆರಿಕ ಸೂಚನೆ!

ಖಾಸಗಿ ವಲಯದಲ್ಲಿ ಸ್ಥಳೀಯ ಯುವಕರಿಗೆ ಶೇ.70 ಉದ್ಯೋಗ ಮೀಸಲಿಡುವುದಾಗಿ ಈ ಹಿಂದಿನ ಮುಖ್ಯಮಂತ್ರಿ ಕಮಲನಾಥ್‌ ಅವರು ಘೋಷಣೆ ಮಾಡಿ, ಜಾರಿಗೆ ತಂದಿದ್ದರು.

click me!