ಕೊರೋನಾ ಪರಿಹಾರ ನಿಧಿಗೆ 90 ಸಾವಿರ ರೂ ದೇಣಿಗೆ ನೀಡಿದ ಭಿಕ್ಷುಕ!

By Suvarna News  |  First Published Aug 18, 2020, 8:41 PM IST

ಕೊರೋನಾ ವೈರಸ್‌ನಿಂದ ಹಲವರು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ಸಂಕಷ್ಟಕ್ಕೆ ನೆರವಾಗಲು ಪ್ರಧಾನ ಮಂತ್ರಿ ಪರಿಹಾರ ನಿಧಿ, ಆಯಾ ರಾಜ್ಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೆಲೆಬ್ರೆಟಿಗಳು ಸೇರಿದಂತೆ ಹಲವು ದೇಣಿಗೆ ನೀಡಿದ್ದಾರೆ. ಇದೀಗ ಭಿಕ್ಷುಕ ಬರೋಬ್ಬರಿ 90,000 ರೂಪಾಯಿ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇತ್ತ ಜಿಲ್ಲಾಧಿಕಾರಿ ನೀಡಿರುವ ಹೊಸ ಹೆಸರಿನಿಂದ ಭಿಕ್ಷುಕ ಸಂತಸ ಇಮ್ಮಡಿಗೊಂಡಿದೆ.


ಮಧುರೈ(ಆ.18):  ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರ ಜೀವನವೂ ದುಸ್ತರವಾಗಿದೆ. ಆಯಾ ರಾಜ್ಯದಲ್ಲಿ ಹಲವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡೋ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಭಿಕ್ಷುಕ ಪೂಲನ್ ಪಾಂಡ್ಯನ ತನ್ನ ಉಳಿತಾಯದ 90,000 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಲೆಕ್ಕ ಕೊಡ್ತೀವಿ, ಮನೆಯಲ್ಲೇ ಕುಳಿತು ಲೆಕ್ಕಹಾಕ್ಲಿ: ಆರ್‌. ಅಶೋಕ್‌ ಟಾಂಗ್

Latest Videos

undefined

ದೇವಾಲದ ಬಳಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಪೂಲನ್ ಪಾಂಡ್ಯನ್, ತಾವು ಉಳಿಸಿದ 90,000 ರೂಪಾಯಿಯನ್ನು  ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಜಿಲ್ಲಾಧಿಕಾರಿಗೆ  ನೀಡಿದ್ದಾನೆ. ಭಿಕ್ಷುಕನ ಸಾಮಾಜಿಕ ಕಳಕಳಿಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಜಿಲ್ಲಾಧಿಕಾರಿ ಸೋಶಿಯಲ್ ವರ್ಕರ್ ಅನ್ನೋ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಸಿದ್ದರಾಮಯ್ಯ ಆರೋಪ ಕಾಂಗ್ರೆಸ್‌ಗೇ ತಿರುಗುಬಾಣ..?.

ಪ್ರಮಾಣ ಪತ್ರ ಪಡೆದ ಭಿಕ್ಷುಕನ ಸಂತಸ ಇಮ್ಮಡಿಗೊಂಡಿದೆ. ನನಗೆ ಸೋಶಿಯಲ್ ವರ್ಕರ್ ಅನ್ನೋ ಪಟ್ಟ ನೀಡಿರುವುದು ನನ್ನ ಸಂತಸ ಮಾತ್ರವಲ್ಲ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಪೂಲನ್ ಪಾಂಡ್ಯ ಹೇಳಿದ್ದಾರೆ.

 

Tamil Nadu: Poolpandiyan, an alms seeker in Madurai, today donated Rs 90,000 towards the state relief fund. He says, "I am happy that the District Collector has given me the title of a social worker."

In May this year, he donated Rs 10,000 towards the same cause. pic.twitter.com/UzA9EVUBWf

— ANI (@ANI)

ಮೇ ತಿಂಗಳಲ್ಲಿ ಪೂಲನ್ ಪಾಂಡ್ಯನ್ 10,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು. ಪೂಲನ್ ಪಾಂಡ್ಯನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಸುರಿಮಳೆ ಬಂದಿದೆ.

ತಮಿಳುನಾಡಿನಲ್ಲಿ 54,122 ಸಕ್ರಿಯ ಪ್ರಕರಣಗಳಿವೆ.  2,83,937 ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ. 5,886 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

click me!