ಲಡಾಖ್ ಬೆನ್ನಲ್ಲೇ ಪಾಕಿಸ್ತಾನ ಗಡಿ ಬಳಿ ತೇಜಸ್ ಯುದ್ದ ವಿಮಾನ ನಿಯೋಜಿಸಿದ IAF!

By Suvarna NewsFirst Published Aug 18, 2020, 7:56 PM IST
Highlights

ಚೀನಾ ಗಡಿ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಪಾಕಿಸ್ತಾನ ಗಡಿ ಭಾಗದಿಂದಲೂ ಅಪ್ರಚೋದಿನ ಗುಂಡಿನ ದಾಳಿಗಳು ಹೆಚ್ಚಾಗುತ್ತಿದೆ. ಇದೀಗ ಭಾರತೀಯ ವಾಯು ಸೇನೆ ಪಾಕ್ ಗಡಿ ಭಾಗದಲ್ಲಿ ಹದ್ದಿನ ಕಣ್ಣಿಡಲು ತೇಜಸ್ ಯುದ್ಧವಿಮಾನ ನಿಯೋಜಿಸಿದೆ. 

ಜಮ್ಮು ಮತ್ತು ಕಾಶ್ಮೀರ(ಆ.18);  ಹಲವು ಸುತ್ತಿನ ಮಾತುಕತೆ ನಡೆಸಿದರೂ ಚೀನಾ ಗಡಿಯಿಂದ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಲಡಾಖ್ ವಲಯದ ಚೀನಾ ಗಡಿ ಬಳಿ ಯುದ್ಧ ಕಾರ್ಮೋಡ ಆವರಿಸುತ್ತಿದೆ. ಇತ್ತ ಸೇನೆ ಕೂಡ ಸನ್ನದ್ಧವಾಗಿರುವುಂತೆ ಸೂಚಿಸಿದೆ. ಚೀನಾ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಬೆನ್ನಲ್ಲೇ ಯುದ್ಧವಿಮಾನಗಳನ್ನು ನಿಯೋಜಿಸಲಾಗುತ್ತಿದೆ. ಇದೀಗ ಪಾಕಿಸ್ತಾನ ಗಡಿ ಭಾಗದಿಂದಲೂ ಯುದ್ಧದ ಭೀತಿ ಆವರಿಸುತ್ತಿದೆ. ಹೀಗಾಗಿ ತೇಜಸ್ ಯುದ್ಧ ವಿಮಾನ ನಿಯೋಜಿಸಲಾಗಿದೆ. 

ಮಿಗ್ 21 ಮೂಲಕ ಗಡಿಯಲ್ಲಿ IAF ಮುಖ್ಯಸ್ಥ RKS ಬದೌರಿಯಾ ಹಾರಾಟ; ಸಿದ್ಧತೆ ಪರಿಶೀಲನೆ!

ಚೀನಾ ಗಡಿ ತಂಟೆಯಿಂದ ಲಡಾಖ್ ಪ್ರಾಂತ್ಯದ ಗಡಿಯಲ್ಲಿ ಟೆನ್ಶನ್ ಹೆಚ್ಚಾಗಿದೆ. ಭಾರತೀಯ ಸೇನೆ ಯುದ್ಧಕ್ಕೆ ಸಜ್ಜಾಗಿರುವಂತೆ ಸೂಚನೆ ನೀಡಿದೆ. ಈ ಸೂಚನೆ ಬೆನ್ನಲ್ಲೇ ಭಾರತೀಯ ವಾಯುಸೇನೆ LCA ತೇಜಸ್ ಯುದ್ಧವಿಮಾನ ನಿಯೋಜಿಸಿದೆ. ಚೀನಾ ಗಡಿ ಮಾತ್ರವಲ್ಲದೆ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ತೇಜಸ್ ಯುದ್ಧ ವಿಮಾನ ನಿಯೋಜಿಸಲಾಗಿದೆ.

ವೆಸ್ಟರ್ನ್ ಹಾಗೂ ನಾರ್ದನ್ ಫ್ರಂಟ್ ಏರ್‌ಬೇಸ್‌ನಿಂದ ತೇಜಸ್ ಗಸ್ತು ಆರಂಭಿಸಿದೆ. ಹಗಲು ಹಾಗೂ ರಾತ್ರಿ ವೇಳೆ ತೇಜಸ್ ಗಡಿ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಸಂದರ್ಭ ಎದುರಾದರೂ ಪರಿಸ್ಥಿತಿ ನಿಭಾಯಿಸಲು ಭಾರತೀಯ ವಾಯುಸೇನೆ ಸರ್ವ ರೀತಿಯಲ್ಲೂ ಸಜ್ಜಾಗಿದೆ.

click me!