ಕೇಂದ್ರ ನೌಕರರಿಗೆ ಗುಡ್‌ ನ್ಯೂಸ್ ಕೊಟ್ಟ ಸರ್ಕಾರ!

Published : Jan 02, 2021, 11:37 AM IST
ಕೇಂದ್ರ ನೌಕರರಿಗೆ ಗುಡ್‌ ನ್ಯೂಸ್ ಕೊಟ್ಟ ಸರ್ಕಾರ!

ಸಾರಾಂಶ

ಕೇಂದ್ರ ನೌಕರರಿಗೆ ಗುಡ್‌ ನ್ಯೂಸ್ ಕೊಟ್ಟ ಸರ್ಕಾರ!| ಎಲ್ಲಾ ನೌಕರರಿಗೂ ಅಂಗ ವೈಕಲ್ಯ ಪರಿಹಾರ 

ನವದೆಹಲಿ(ಜ.01): ಕರ್ತವ್ಯ ನಿರ್ವಹಿಸುವ ವೇಳೆ ಗಾಯಗೊಂಡು ಅಂಗ ವೈಕಲ್ಯಕ್ಕೆ ತುತ್ತಾದ ಹಾಗೂ ಸೇವೆಯಲ್ಲಿ ಮುಂದುವರಿದ ಎಲ್ಲಾ ನೌಕರರಿಗೂ ಅಂಗ ವೈಕಲ್ಯ ಪರಿಹಾರ ದೊರೆಯಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

2009ರಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ, 2004 ಜ.1ರ ಬಳಿಕ ನೇಮಗೊಂಡ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಅಡಿಯಲ್ಲಿ ಬರುವ ನೌಕರರಿಗೆ ಅಂಗ ವೈಕಲ್ಯ ಪರಿಹಾರ ಲಭ್ಯವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಶುಕ್ರವಾರ ಹೊರಡಿಸಿರುವ ಪರಿಷ್ಕೃತ ಆದೇಶದಿಂದಾಗಿ ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಐಎಸ್‌ಎಫ್‌ನಂತಹ ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಸಿಬ್ಬಂದಿಗೆ ನಿರಾಳತೆ ದೊರೆಯಲಿದೆ.

ಒಂದು ವೇಳೆ ಅಂಗ ವೈಕಲ್ಯಕ್ಕೆ ತುತ್ತಾಗಿಯೂ ಸೇವೆ ನಿರ್ವಹಿಸಲು ಸಾಧ್ಯವಾದರೆ ಅಂಗವೈಕಲ್ಯತೆಯ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಲಭ್ಯವಾಗಲಿದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

5 States Assembly Election Results 2026: ಇಂದು 5 ರಾಜ್ಯಗಳ ವಿಧಾನಸಭಾ ಫಲಿತಾಂಶ: ಪಂಚ ಗದ್ದುಗೆ ಯಾರಿಗೆ?
West Bengal Election Results: ಮತ ಎಣಿಕೆಗೂ ಮುನ್ನ ಮಮತಾ ಬ್ಯಾನರ್ಜಿ 'ಪವರ್' ಫುಲ್ ಆರೋಪ!