5 ಕೋಟಿ ಕಬ್ಬು ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡಿದ ಕೇಂದ್ರ ಸರ್ಕಾರ!

By Suvarna NewsFirst Published Aug 25, 2021, 10:33 PM IST
Highlights
  • ಪ್ರತಿ ಕ್ವಿಂಟಾಲ್ ಕಬ್ಬಿಗೆ ಶೇ.10 ರಷ್ಟು ಚೇತರಿಕೆ ದರ 
  • ಕೇಂದ್ರದ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭ
  • 5 ಲಕ್ಷ ಕಾರ್ಮಿಕರಿಗೆ ಅನೂಕೂಲ
     

ನವದೆಹಲಿ(ಆ.25): ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. ಈ ಮೂಲಕ ಹಲವು ದಶಕಗಳಿಂದ ಕಬ್ಬು ಬೆಳೆಗಾರರು ಅನುಭವಿಸುತ್ತಿದ್ದ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವಹಿವಾಟು ಸಚಿವಾಲಯ ಮಂಡಳಿ ಬಂಪರ್ ಕೊಡುಗೆ ಘೋಷಿಸಿದೆ.

ಕದ್ದು ಕಬ್ಬು ತಿನ್ನೋವಾಗ ಸಿಕ್ಕಿಬಿತ್ತು ಪುಟ್ಟ ಆನೆ..! ಆಮೇಲೇನಾಯ್ತು ನೋಡಿ

2021–22ನೇ ಸಾಲಿಗೆ ಅಕ್ಟೋಬರ್‌–ಸೆಪ್ಟೆಂಬರ್‌ ಅವಧಿಯ ಬೆಳೆಗೆ ಲಾಭಕರ ಹಾಗೂ ನ್ಯಾಯಯುತ ಬೆಲೆಯನ್ನು ನೀಡುವ ತೀರ್ಮಾನವನ್ನು ಆರ್ಥಿಕ ವಹಿವಾಟು ಸಚಿವಾಲಯ ಮಂಡಳಿ ಕೈಗೊಂಡಿದೆ . 290 ರೂಪಾಯಿ ಪ್ರತಿಕ್ವಿಂಟಲ್‌ಗೆ ನೀಡುತ್ತಿದ್ದು, ಪ್ರತಿ ಕ್ವಿಂಟಲ್‌ಗೆ ಶೇ 10ರಷ್ಟು ಚೇತರಿಕೆ ದರ ನೀಡಲಾಗುವುದು.  ಶೇ 10ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ 0.1ರ ದರದಲ್ಲಿ ಚೇತರಿಕೆ ಹಾಗೂ ಹಿಂಪಡೆಯುವ ದರವನ್ನು ಹೆಚ್ಚಿಸಲಾಗಿದೆ. ವಿಮೆಯಲ್ಲಿ ಶೇ 0.1ರಷ್ಟು ಹೆಚ್ಚಳವನ್ನೂ, ಚೇತರಿಕೆಯಲ್ಲಿ ಕಡಿತವನ್ನೂ ಮಾಡಲಾಗಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಸರ್ಕಾರದ ತೀರ್ಮಾನವು ಸಕ್ಕರೆ ಕಾರ್ಖಾನೆಗಳು ಯಾವುದೇ ಕಡಿತ ಮಾಡಿದ್ದಲ್ಲಿ, ಶೇ9.5ಕ್ಕಿಂತ ಕಡಿಮೆ ವಹಿವಾಟಿರುವ ಕಾರ್ಖಾನೆಗಳಿಂದಾಗಿ ಬೆಳೆಗಾರರಿಗೆ ತೊಂದರೆಯಾದರೆ, ಅಂಥ ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ  275.50 ರೂಪಾಯಿ ನೀಡಲಾಗುತ್ತದೆ.

2021–2022ರ ಸಾಲಿನಲ್ಲಿ ಕಬ್ಬು ಉತ್ಪಾದನಾ ವೆಚ್ಚವನ್ನು ಪ್ರತಿ ಕ್ವಿಂಟಾಲ್‌ಗೆ 155 ರೂಪಾಯಿ ಎಂದು ತೀರ್ಮಾನಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ 290 ರೂಪಾಯಿ ನೀಡುವುದರಿಂದ ಶೇ 10ರಷ್ಟು ಚೇತರಿಕೆ ದರವಾಗಲಿದೆ., ಒಟ್ಟಾರೆ ಉತ್ಪಾದನಾ ವೆಚ್ಚಕ್ಕಿಂತ ಶೇ 87.1ರಷ್ಟು ಹೆಚ್ಚುವರಿ ಬೆಲೆ ನಿಗದಿಯಾದಂತಿದೆ. ಕೃಷಿ ಬೆಳೆಗಾರರ ವೆಚ್ಚದ ಅರ್ಧದಷ್ಟು ಹಣವನ್ನು ಅವರಿಗೆ ನೀಡಲಾಗುತ್ತಿದೆ. ಇದು ನಿಜವಾಗಿಯೂ ನ್ಯಾಯಯುತವಾದ ಹಾಗೂ ಲಾಭಕರವಾದ ಬೆಲೆಯಾಗಿದೆ.

ಫಲ ನೀಡಿದ ಸಚಿವ ಎಂಟಿಬಿ ನಾಗರಾಜ್ ಎಚ್ಚರಿಕೆ, ರೈತರಿಗೆ 565 ಕೋಟಿ ರೂ. ಬಾಕಿ ಪಾವತಿ

ಈ 2020–21ರ ಕಬ್ಬು ಬೆಳೆ ಹಂಗಾಮಿನಲ್ಲಿ 2976 ಲಕ್ಷ ಟನ್‌ಗಳಷ್ಟು  91,000 ಕೋಟಿ ರೂಪಾಯಿಗಳಷ್ಟು ಮೌಲ್ಯದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಲಾಗಿದೆ. ಇದು ಈ ವರೆಗಿನ ಗರಿಷ್ಠಮಟ್ಟದ ಖರೀದಿಯಾಗಿದೆ. ಕನಿಷ್ಠ ಬೆಂಬಲಬೆಲೆಯಲ್ಲಿ ಖರೀದಿಸುವ ಭತ್ತವನ್ನು ಪರಿಗಣಿಸಿದರೆ ಇದು ಎರಡನೆಯ ಅತಿ ಹೆಚ್ಚು ಮೌಲ್ಯದ ಖರೀದಿಯಾಗಿದೆ. 2021–22ರ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಹೆಚ್ಚಾಗುವುದನ್ನು ಗಮನದಲ್ಲಿರಿಸಿಕೊಂಡು 3,088 ಲಕ್ಷ ಟನ್‌ ಸಕ್ಕರೆ ಕಾರ್ಖಾನೆಗಳಿಂದ ಖರೀದಿಸುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ರೈತರೊಂದಿಗೆ 1,00,000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ಆಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಮುಂದಿನ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭಕರ ಬೆಲೆ ನೀಡಿ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಿದಂತಾಗಿದೆ. 

2021ರ ಅಕ್ಟೋಬರ್‌ನಿಂದ, 2022ರ ಸೆಪ್ಟೆಂಬರ್‌ ವರೆಗೆ ಈ ಲಾಭಕರ, ನ್ಯಾಯಯುತ ಬೆಲೆಯು ಕಬ್ಬು ಬೆಳೆಗಾರರಿಗೆ ಅನ್ವಯವಾಗುತ್ತದೆ. ಸಕ್ಕರೆ ಕ್ಷೇತ್ರವು ಕೃಷಿ ಆಧಾರಿತ ಅತಿ ಮುಖ್ಯವಾದ ಕ್ಷೇತ್ರವಾಗಿ ಬೆಳೆದಿದೆ. ಕಬ್ಬು ಬೆಳೆಗಾರರು, ಅವರ ಅವಲಂಬಿತರು ಹಾಗೂ ಸಕ್ಕರೆ ಕ್ಷೇತ್ರದ ಐದು ಲಕ್ಷ ಜನ ಕಾರ್ಮಿಕರ ಜೀವನ ನಿರ್ವಹಣೆಗೆ ನೇರವಾದ ಕಾರಣವಾಗಿದೆ. ಇದಷ್ಟೇ ಅಲ್ಲದೆ, ಸಕ್ಕರೆ ಕಾರ್ಖಾನೆಯ ಉಪ ಉತ್ಪನ್ನಗಳು ಹಾಗೂ ಇತರ ವಹಿವಾಟುಗಳಲ್ಲಿಯೂ ಸಾಗಾಣಿಕೆ ಕ್ಷೇತ್ರದಲ್ಲಿಯೂ ಬಹುತೇಕರ ಜನರ ಜೀವನಾವಲಂಬಿ ಕ್ಷೇತ್ರವಾಗಿ ಬೆಳೆದಿದೆ. 
 

click me!