ಲಾಕ್‌ಡೌನ್: ಮನೆಯಲ್ಲಿದ್ದು ಚಿನ್ನ, ಫ್ರಿಜ್ ಗೆಲ್ಲಿ: ಹೊರಬಂದರೆ ಸ್ಪರ್ಧೆಯಿಂದ ಔಟ್‌!

By Kannadaprabha NewsFirst Published Apr 29, 2020, 7:19 AM IST
Highlights

ಲಾಕ್ಡೌನ್‌: ಮನೆಯಲ್ಲಿರಿ ಚಿನ್ನ, ವಾಷಿಂಗ್‌ ಮಷಿನ್‌ ಗೆಲ್ಲಿ!| ಬಂಪರ್‌ ಬಹುಮಾನ ಯೋಜನೆ| ಮನೆಯಿಂದ ಹೊರಬಂದರೆ ಸ್ಪರ್ಧೆಯಿಂದ ಔಟ್‌

ಮಲಪ್ಪುರಂ(ಏ.29): ಕೊರೋನಾ ವೈರಸ್‌ ಸೋಂಕು ತಡೆಯುವಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿರುವ ಕೇರಳದಲ್ಲಿ ಗ್ರಾಮ ಪಂಚಾಯ್ತಿಯೊಂದು ಲಾಕ್‌ಡೌನ್‌ ವೇಳೆ ಜನರನ್ನು ಮನೆಯಲ್ಲೇ ಇರಿಸಲು ವಿಶೇಷ ಬಹುಮಾನಗಳನ್ನು ಘೋಷಿಸುವ ಮೂಲಕ ಗಮನ ಸೆಳೆದಿದೆ.

ಮಲಪ್ಪುರಂ ಜಿಲ್ಲೆಯ ತಳೆಕ್ಕೋಡ್‌ ಗ್ರಾಮ ಪಂಚಾಯ್ತಿಯು ಲಾಕ್‌ಡೌನನ್ನು ಕಟ್ಟುನಿಟ್ಟಾಗಿ ಪಾಲಿಸುವ ಜನರಿಗೆ 5 ಗ್ರಾಂ ಚಿನ್ನ, ವಾಷಿಂಗ್‌ ಮಷಿನ್‌ ಹಾಗೂ ಫ್ರಿಜ್‌ಗಳನ್ನು ಬಹುಮಾನ ನೀಡುವುದಾಗಿ ಪ್ರಕಟಿಸಿದೆ. ಜೊತೆಗೆ 50 ಜನರಿಗೆ ಪ್ರೋತ್ಸಾಹದಾಯಕ ಬಹುಮಾನಗಳೂ ಇವೆ. ಲಾಕ್‌ಡೌನ್‌ ಮುಗಿದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

10 ರೂಪಗಳಲ್ಲಿ ಹಬ್ಬುತ್ತಿದೆ ಕೊರೋನಾ ವೈರಸ್!

ಲಾಕ್‌ಡೌನ್‌ ಜಾರಿಯಾದ ಕೆಲವೇ ದಿನಗಳಲ್ಲಿ ಈ ಯೋಜನೆಯನ್ನು ಗ್ರಾಮ ಪಂಚಾಯತ್‌ ಜಾರಿಗೊಳಿಸಿದೆ. ಸುಮಾರು 10,000 ಮನೆಗಳಿರುವ ತಳೆಕ್ಕೋಡ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆಯಿಂದ ಹೊರಬರುವವರ ಮೇಲೆ ಕಣ್ಣಿಡಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಮನೆಯಿಂದ ಹೊರಬಂದವರು ತಕ್ಷಣ ಸ್ಪರ್ಧೆಯಿಂದ ಹೊರಬೀಳುತ್ತಾರೆ.

ಲಾಕ್‌ಡೌನ್‌ ಮುಗಿದ ಮೇಲೆ ಕೊನೆಯವರೆಗೂ ಯಶಸ್ವಿಯಾಗಿ ಮನೆಯಲ್ಲೇ ಉಳಿದವರಿಗೆ ಕೂಪನ್‌ ನೀಡಲಾಗುತ್ತದೆ. ಅವುಗಳಲ್ಲಿ ವಿಜೇತರನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ಮೊದಲ ಬಹುಮಾನವಾಗಿ 5 ಗ್ರಾಂ ಚಿನ್ನ, ಎರಡನೇ ಬಹುಮಾನವಾಗಿ ಫ್ರಿಜ್‌ ಹಾಗೂ ಮೂರನೇ ಬಹುಮಾನವಾಗಿ ವಾಷಿಂಗ್‌ ಮಷಿನ್‌ ಮತ್ತು 50 ಪ್ರೋತ್ಸಾಹದಾಯಕ ಬಹುಮಾನ ನೀಡಲಾಗುತ್ತದೆ.

click me!