
ಬೆಂಗಳೂರು(ಏ. 28) ಕೊರೋನಾ ವೈರಸ್ ಆತಂಕ ಇಡೀ ಪ್ರಪಂಚ ಕಾಣುತ್ತಿದ್ದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಬೆಂಕಿ ಹಚ್ಚಿದೆ.
ತಬ್ಲಿಘಿಗಳನ್ನು ಹೀರೋಗಳು ಎಂದು ಈ ಅಧಿಕಾರಿ ಕರೆದಿದ್ದಾರೆ. ತಬ್ಲಿಘಿಗಳ ವಿರುದ್ಧ ನೀವೆಲ್ಲ ಆರೋಪಗಳ ಸುರಿಮಳೆ ಮಾಡಿದಿ, ಆದರೆ ಮಾತ್ರ ಅವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತ ನೀಡಿ ಹೂಮಳೆ ಸುರಿಸಿದ್ದಾರೆ ಎಂದು ಐಎಎಸ್ ಅಧಿಕಾರಿ ಮಹಮದ್ ಮೊಹಸಿನ್ ಟ್ವೀಟ್ ಮಾಡಿದ್ದಾರೆ.
ಈ ಎರಡು ಜಿಲ್ಲೆಗಳಲ್ಲಿ ತಬ್ಲಿಘಿಗಳು ಮಾಡಿದ ಎಟವಟ್ಟು ಸಣ್ಣದಾ!
ಪ್ಲಾಸ್ಮಾ ಚಿಕಿತ್ಸೆಗೆ ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಪಡೆಯಲಾಗುತ್ತಿದೆ. ತಬ್ಲಿಘಿಗಳಿಂದಲೂ ರಕ್ತ ಪಡೆದುಕೊಳ್ಳಲಾಗಿದೆ. ಆದರೆ ಇದೇ ವಿಚಾರವನ್ನು ಇಟ್ಟುಕೊಂಡು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ವಿವಾದ ಎಬ್ಬಿಸುವುದು ಈ ಅಧಿಕಾರಿಗೆ ಹೊಸದೇನೂ ಅಲ್ಲ. ಹಿಂದೆ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರ ಕಾರಬನ್ನೇ ಪರಿಶೀಲನೆ ಮಾಡಿ ಸುದ್ದಿಯಾಗಿದ್ದು. ಸಮುದಾಯವೊಂದನ್ನು ಓಲೈಕೆ ಮಾಡಲು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹ ಎದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ