Kashi Vishwanath: ಕಾಶಿ ವಿಶ್ವನಾಥನ ಗರ್ಭಗುಡಿಗೆ ಮೋದಿ ತಾಯಿಯ ತೂಕದಷ್ಟು ಚಿನ್ನದ ಲೇಪನ!

Published : Mar 02, 2022, 07:14 AM ISTUpdated : Mar 02, 2022, 11:05 AM IST
Kashi Vishwanath: ಕಾಶಿ ವಿಶ್ವನಾಥನ ಗರ್ಭಗುಡಿಗೆ ಮೋದಿ ತಾಯಿಯ ತೂಕದಷ್ಟು ಚಿನ್ನದ ಲೇಪನ!

ಸಾರಾಂಶ

* ಕಾಶಿ ವಿಶ್ವನಾಥನಿಗೆ ಅನಾಮಧೇಯ ವ್ಯಕ್ತಿಯಿಂದ 60 ಕೆಜಿ ಚಿನ್ನ ದೇಣಿಗೆ * 37 ಕೆಜಿ ಚಿನ್ನ ಗರ್ಭಗುಡಿಯ ಗೋಡೆಗೆ ಬಳಕೆ * ಕಾಶಿ ವಿಶ್ವನಾಥನ ಗರ್ಭಗುಡಿಗೆ ಮೋದಿ ತಾಯಿಯ ತೂಕದಷ್ಟುಚಿನ್ನದ ಲೇಪನ * ಅನಾಮಧೇಯ ವ್ಯಕ್ತಿಯಿಂದ 60 ಕೆ.ಜಿ. ಬಂಗಾರದ ಉಡುಗೊರೆ

ವಾರಾಣಸಿ(ಮಾ.02): ಇತ್ತೀಚೆಗೆ ನವೀಕರಣಗೊಂಡಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು 60 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದು, ಈ ಪೈಕಿ 37 ಕೆ.ಜಿ. ಚಿನ್ನವನ್ನು ಗರ್ಭಗಡಿಯ ಒಳಗೋಡೆಗಳಿಗೆ ಲೇಪನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. 37 ಕೆ.ಜಿಯನ್ನೇ ಬಳಸಿದ್ದರ ಹಿಂದೆ ವಿಶೇಷ ಉದ್ದೇಶವಿದೆ. ಇದು ಇತ್ತೀಚೆಗೆ 100 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ರ ಈಗಿನ ತೂಕ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಮತಕ್ಷೇತ್ರದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದಾಗ ಒಳಗೋಡೆಗಳಿಗೆ ಚಿನ್ನದ ಲೇಪನ ಮಾಡಿದ ಚಿತ್ರಗಳನ್ನು ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ. ವಿಭಾಗೀಯ ಆಯುಕ್ತ ದೀಪಕ್‌ ಅರ್ಗವಾಲ್‌ ‘ದೇವಾಲಯಕ್ಕೆ ದಕ್ಷಿಣ ಭಾರತದ ಅನಾಮಧೇಯ ವ್ಯಕ್ತಿಯಿಂದ 60 ಕೆ.ಜಿ. ಚಿನ್ನ ದೇಣಿಗೆಯಾಗಿ ಬಂದಿತ್ತು. ಅದರಲ್ಲಿ 37 ಕೆಜಿ ಚಿನ್ನವನ್ನು ಗರ್ಭಗುಡಿ ಒಳಗೋಡೆಗೆ ಲೇಪನ ಮಾಡಲು ಬಳಸಲಾಗಿದೆ. ಉಳಿದ 23 ಕೆ.ಜಿ. ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟದ ಕೆಳಭಾಗವನ್ನು ಅಲಂಕರಿಸಲು ಬಳಸಲಾಗುವುದು’ ಎಂದಿದ್ದಾರೆ.

ನವೀನ್ ಸಾವು, ಉನ್ನತ ಮಟ್ಟದ ಸಭೆ ಕರೆದ ಮೋದಿ

18ನೇ ಶತಮಾನದ ಬಳಿಕ ಮೊದಲ ಬಾರಿಗೆ ದೇವಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಲೇಪನ ಮಾಡಲಾಗಿದೆ. 1777ರಲ್ಲಿ ಇಂದೋರಿನ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್‌ ಹಾಗೂ ಪಂಜಾಬಿನ ಮಹಾರಾಜ ರಣಜೀತ್‌ ಸಿಂಗ್‌ ಇದೇ ದೇವಾಲಯದ ಗುಮ್ಮಟ ನಿರ್ಮಾಣಕ್ಕೆ 1 ಟನ್‌ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು.

"

2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 900 ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಸುತ್ತ ಮುತ್ತಲಿನ ಸುಮಾರು 300 ಕಟ್ಟಡಗಳನ್ನು ಖರೀದಿಸಿ ದೇವಾಸ್ಥಾನದ ಪ್ರಾಕಾರವನ್ನು 2700 ಚದರ ಅಡಿಯಿಂದ 5 ಲಕ್ಷ ಚದರ ಅಡಿಗೆ ಹೆಚ್ಚಿಸಲಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!