
ಮನೆಯ ಬಾತ್ರೂಮ್ನಿಂದ ಕೋಣೆಯ ಟೈಲ್ಸ್ ಒಡೆದಾಗ ಚಿನ್ನದ ನಾಣ್ಯಗಳ ಸುರಿಮಳೆಯಾಗುತ್ತಿರುವ ಕುತೂಹಲದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಹುಬ್ಬೇರಿಸುತ್ತಿದೆ. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ಬಾತ್ರೂಮ್ಗೆ ಹೋಗಿ ಸುತ್ತಿಗೆಯಿಂದ ಗೋಡೆಯನ್ನು ಒಡೆಯುವುದನ್ನು ನೋಡಬಹುದಾಗಿದೆ. ಟೈಲ್ಸ್‌ಗಳು ತುಂಡು ತುಂಡಾಗುತ್ತಿದ್ದಂತೆಯೇ, ಒಳಗಡೆಯಿಮದ ಚಿನ್ನದ ನಾಣ್ಯಗಳ ಸುರಿಮಳೆಯಾಗುತ್ತಿದೆ. ಟೈಲ್ಸ್ ಸಂಪೂರ್ಣ ತೆಗೆದಾಗ ಅಲ್ಲೊಂದು ಕಬ್ಬಿಣದ ಪೆಟ್ಟಿಗೆ ಇರುವುದನ್ನು ನೋಡಬಹುದು. ಅದನ್ನು ನೋಡಿದ ವ್ಯಕ್ತಿ ಹೆಚ್ಚು ಆಘಾತಕ್ಕೊಳಗಾಗುತ್ತಾನೆ.
ಆ ಪೆಟ್ಟಿಗೆಯನ್ನು ಲಾಕ್ ಆಗಿದ್ದು, ಅದರ ಮೇಲೆ ಸಂಖ್ಯೆಗಳನ್ನು ನೋಡಬಹುದಾಗಿದೆ. ಸಂಖ್ಯೆಗಳ ಮೇಲೆ ಎಷ್ಟು ಬಾರಿ ಕ್ಲಿಕ್ ಮಾಡಿದರೂ ಬಾಗಿಲು ತೆರೆಯುವುದಿಲ್ಲ. ಹಾಗಾಗಿ ಕೊನೆಗೆ ಕಷ್ಟಪಟ್ಟು ಅದನ್ನು ಹೊರತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ ಆ ವ್ಯಕ್ತಿ. ನಂತರ ಅದರ ಮೇಲೆ ದೊಡ್ಡ ಇಟ್ಟಿಗೆಗಳನ್ನೂ ಇಡುತ್ತಾನೆ. ಈ ಕಾರಣದಿಂದಾಗಿ, ಪೆಟ್ಟಿಗೆಯ ಬಾಗಿಲು ಸ್ವಲ್ಪ ಬಾಗುತ್ತದೆ. ಒಳಗೆ ಕರೆನ್ಸಿ ನೋಟುಗಳನ್ನು ಕಾಣಬಹುದು. ಕೊನೆಗೆ ಡಬ್ಬದ ಬಾಗಿಲು ತೆರೆದು ನೋಡಿದಾಗ ನೋಟಿನ ಬಂಡಲ್, ಚಿನ್ನ ಬೆಳ್ಳಿ ಆಭರಣಗಳು, ಫೋಟೋ, ಮೊಬೈಲ್ ಫೋನ್ ಇತ್ತು. ಅಲ್ಲದೆ ಇನ್ನೊಂದು ಚಿಕ್ಕ ಪೆಟ್ಟಿಗೆಯನ್ನು ಒಡೆದು ನೋಡಿದಾಗ ವಜ್ರ, ನಗದು ಹಾಗೂ ಚಿಕ್ಕ ಗನ್ ಪತ್ತೆಯಾಗಿದೆ.
ನೋಡಲು ಅಸಲಿಯಂತೆ ಕಂಡರೂ ಇದು ಫೇಕ್ ವಿಡಿಯೋ ಎಂದೇ ಹಲವರು ಹೇಳುತ್ತಿದ್ದಾರೆ. ಒಬ್ಬನೇ ವ್ಯಕ್ತಿ ಹೀಗೆ ಟೈಲ್ಸ್ ತೆಗೆಯಲು ಹೋಗಿದ್ದು, ಆತನ ರಿಯಾಕ್ಷನ್ ಎಲ್ಲವೂ ಫೇಕ್ ಅಂತೆ ಅನ್ನಿಸುತ್ತಿದೆ ಎನ್ನುವುದೇ ಬಹುತೇಕ ಅನಿಸಿಕೆ. ಏಕೆಂದರೆ, ಇಡೀ ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ, ವೀಕ್ಷಣೆ ಮತ್ತು ಲೈಕ್‌ಗಳಿಗಾಗಿ ಇದನ್ನು ಯೋಜಿಸಿ ತೆಗೆದುಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅದೇನೇ ಇದ್ದರೂ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು "ಇದು ನಕಲಿ ಚಿನ್ನ.. ವೀಕ್ಷಣೆಗಾಗಿ ಮಾಡಲಾಗಿದೆ" ಎಂದು ಹೇಳಿದರು. ಈ ವೀಡಿಯೊ ಪ್ರಸ್ತುತ 40 ವಿರಕ್ಕೂ ಹೆಚ್ಚು ಇಷ್ಟಗಳು ಮತ್ತು ಕೋಟಿಯಷ್ಟು ವೀಕ್ಷಣೆಗಳನ್ನು ಹೊಂದಿದೆ. ಸತ್ಯನೋ, ಸುಳ್ಳೋ ಒಟ್ಟಿನಲ್ಲಿ ಈ ರೀಲ್ಸ್ ಅಪ್ಲೋಡ್ ಮಾಡಿದವನಿಗೆ ಮಾಲಾಮಾಲ್ ಆಗಿದ್ದಂತೂ ದಿಟ. ಏಕೆಂದರೆ ಇದಾಗಲೇ ಕೋಟ್ಯಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಇನ್ನೇನು ಬೇಕು ಹೇಳಿ?
ತಂದೆ ಸರಸ್ವತಿ ಆರಾಧಕರು: ಇಸ್ಲಾಂನಂತೆ ಪ್ರಾರ್ಥನೆ ಹೇಳಲೇ ಇಲ್ಲ.. ಜಾಕೀರ್ ಹುಸೇನ್ ಕುತೂಹಲದ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ