ತಂದೆ ಸರಸ್ವತಿ ಆರಾಧಕರು: ಇಸ್ಲಾಂನಂತೆ ಪ್ರಾರ್ಥನೆ ಹೇಳಲೇ ಇಲ್ಲ.. ಜಾಕೀರ್​ ಹುಸೇನ್​ ಕುತೂಹಲದ ವಿಡಿಯೋ ವೈರಲ್​

By Suchethana D  |  First Published Dec 17, 2024, 5:47 PM IST

ತಬಲಾ ಮಾಂತ್ರಿಕ ಉಸ್ತಾದ್​ ಜಾಕೀರ್ ಹುಸೇನ್ ಅವರ ತಂದೆ ಸರಸ್ವತಿ, ಗಣೇಶನ ಆರಾಧಕರಾಗಿರುವ ಕುತೂಹಲದ ವಿಡಿಯೋ ವೈರಲ್​ ಆಗಿದೆ. 
 


ದೇಶ ಕಂಡ ಅಪರೂಪದ ಸಂಗೀತ ಕಲಾವಿದ, ತಬಲಾ ಮಾಂತ್ರಿಕ ಉಸ್ತಾದ್​ ಜಾಕೀರ್ ಹುಸೇನ್ ಅವರು ಎಲ್ಲರನ್ನೂ ಅಗಲಿದ್ದಾರೆ.  ಮೂರು ಗ್ರ್ಯಾಮಿ ಪ್ರಶಸ್ತಿ ಸೇರಿದಂತೆ  ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದ ಈ ಅಪರೂಪದ ಕಲಾವಿದನ  ಬಗ್ಗೆ ತಿಳಿದಷ್ಟೂ ಕುತೂಹಲವೇ.  ಇದಿಯೋಪಥಿಕ್ ಪಲ್ಮನರಿ ಫೈಬ್ರಾಸಿಸ್​ ಎಂಬ ಅಪರೂಪದ ಶ್ವಾಸಕೋಶದ ಕಾಯಿಲೆ ಅವರನ್ನು 73ನೇ ವಯಸ್ಸಿನಲ್ಲಿ ಬಲಿ ಪಡೆಯಿತು. ಅವರ ನಿಧನದ ಬೆನ್ನಲ್ಲೇ ಜಾಕೀರ್​ ಹುಸೇನ್​ ಅವರಿಗೆ  ಸಂಬಂಧಿಸಿದ ಹಲವಾರು ಕುತೂಹಲದ ವಿಷಯಗಳು ಬಹಿರಂಗಗೊಳ್ಳುತ್ತಿವೆ. ಏಳನೆಯ ವಯಸ್ಸಿನಲ್ಲಿಯೇ ಪ್ರದರ್ಶನ ನೀಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು ಜಾಕೀರ್​. ಅಂದಹಾಗೆ ಅವರಿಗೆ ತಂದೆಯೇ ಗುರುಗಳು.  ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ ಅವರ ಪುತ್ರನಾಗಿರುವ ಜಾಕೀರ್​ ಅವರು ತಂದೆಯಿಂದಲೇ ಇದನ್ನು ಕಲಿತಿದ್ದರು.

ಈ ಕುರಿತು ಕುತೂಹಲದ ವಿಡಿಯೋ ಒಂದು ಈಗ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ಜಾಕೀರ್​ ಹುಸೇನ್​ ಅವರು, ತಮ್ಮ ತಂದೆ ಮುಸ್ಲಿಂ ಸಂಪ್ರದಾಯದ ಬದಲು ಶಿಶುವಾಗಿದ್ದಾಗ ಸರಸ್ವತಿ ಮಂತ್ರವನ್ನು ಕಿವಿಯಲ್ಲಿ ಹೇಳಿದ್ದನ್ನು ತಿಳಿಸಿಕೊಟ್ಟಿದ್ದಾರೆ. ಗಣೇಶ ಮತ್ತು ಸರಸ್ವತಿ ಆರಾಧಕರಾಗಿದ್ದ ತಮ್ಮ ತಂದೆ ಹೇಗೆ ತಮ್ಮ ಮೇಲೆ ಪ್ರಭಾವ ಬೀರಿದರು ಎನ್ನುವುದನ್ನು ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ. 

Tap to resize

Latest Videos

undefined

ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ- ಹೀಗಿದೆ ನೋಡಿ ವ್ಯವಸ್ಥೆ

ಅವರ ಮಾತಿನಲ್ಲಿಯೇ ಹೇಳುವುದಾದರೆ, 'ನಾನಾಗ ಕೆಲವೇ ದಿನಗಳ ಹಸುಗೂಸು. ಇಸ್ಲಾಂ ಸಂಪ್ರದಾಯದಂತೆ ನಾಮಕರನ ಮಾಡುವಾಗ ಮಗುವಿನ ಕಿವಿಯಲ್ಲಿ ಪ್ರಾರ್ಥನೆ ಪಠಿಸಬೇಕು. ಜೊತೆಗೆ ಒಂದಿಷ್ಟು ಒಳ್ಳೆಯ ಮಾತುಗಳನ್ನು ಹೇಳಬೇಕು. ಆದರೆ ನನ್ನ ತಂದೆ ಹಾಗೆ ಮಾಡಲಿಲ್ಲ. ಬದಲಿಗೆ ಅವರು, ತಟಕಿಟ ಧಿನ್ನಾಕಿಟ ಎನ್ನುವ ರಿಧಮ್​ ಹೇಳಿದರು. ಇದೇನು ಮಾಡುತ್ತಿದ್ದೀರಿ ಎಂದು ನನ್ನ ಅಮ್ಮ ಅಪ್ಪನನ್ನು ಕೇಳಿದಾಗ, ಅವರು  ನಾನು ಸರಸ್ವತಿ ಮತ್ತು ಗಣೇಶನ ಆರಾಧಕ. ನಾನು ನುಡಿಸುವ ಸಂಗೀತ ನನ್ನ ಪ್ರಾರ್ಥನೆ. ಆ ಸರಸ್ವತಿಯ ಮಂತ್ರವನ್ನೇ  ಮಗುವಿನ ಕಿವಿಯಲ್ಲಿ ಹೇಳುತ್ತಿದ್ದೇನೆ. ಇದೇ ವಿದ್ಯೆಯನ್ನೇ ನಾನು ನನ್ನ ಗುರುಗಳಿಂದ ಕಲಿತಿರುವುದು. ನನ್ನ ಮಗನೂ ನನ್ನ ಪರಂಪರೆಯನ್ನೇ ಮುಂದುವರಿಸಬೇಕೆಂಬುದು ನನ್ನ ಬಯಕೆ ಎಂದರು' ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದರು ಜಾಕೀರ್​ ಹುಸೇನ್​.
 
ಅಂದಹಾಗೆ ಜಾಕೀರ್​ ಹುಸೇನ್​ ಅವರು,  ಶ್ಲೋಕ, ಮಂತ್ರಗಳನ್ನೂ ಕಲಿತಿದ್ದರು. ಮೂರು ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತದ ಮೊದಲ ಸಂಗೀತಗಾರ ಆಗಿದ್ದಾರೆ. ಖಾಸಗಿ ಕೂಟಗಳು ಸೇರಿದಂತೆ ಕೆಲವು ಕಾರ್ಯಕ್ರಮಗಳಲ್ಲಿ ತಬಲಾ ನುಡಿಸುವುದೇ ಇಲ್ಲ ಎನ್ನುವ ಮಾತನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರು. ಕುಡಿಯಲು ಮತ್ತು ಭೋಜನ ಸವಿಯಲು ಬರುವ ಕಾರ್ಯಕ್ರಮಗಳಲ್ಲಿ ನಾನು ಗೋಷ್ಠಿ ಮಾಡಲಾರೆ. ಅವರು ಅಲ್ಲಿ ಅದನ್ನು ಆನಂದಿಸಲು ಬಂದಿರುತ್ತಾರೆ, ಅಲ್ಲಿ ಸಂಗೀತ ಕಾರ್ಯಕ್ರಮವನ್ನು ಆನಂದಿಸಲು ಆಗದು ಎನ್ನುತ್ತಲೇ ಒಂದಿಷ್ಟು ಕಟ್ಟುಪಾಡುಗಳನ್ನು ಹಾಕಿಕೊಂಡು ಅದರಂತೆ ನಡೆದು ಇದೀಗ ಸಂಗೀತ ಲೋಕದಲ್ಲಿಯೇ ಲೀನರಾಗಿದ್ದಾರೆ. ಅಪರೂಪದ ಶ್ವಾಸಕೋಶದ ಸಮಸ್ಯೆ ಅವರ ಜೀವವನ್ನು ತೆಗೆದುಕೊಂಡಿದೆ. 

ಸಾವರ್ಕರ್​ರನ್ನು ಹೊಗಳಿ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದ ಇಂದಿರಾ ಗಾಂಧಿ! ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪತ್ರ ವೈರಲ್​

click me!