Election Result 2022 ಮೈತ್ರಿ ಇಲ್ಲದೆ 20 ಕ್ಷೇತ್ರದಲ್ಲಿ ಗೆಲುವು, ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!

By Suvarna News  |  First Published Mar 10, 2022, 7:56 PM IST
  • ಬಿಜೆಪಿ ಜಯಭೇರಿ ಹಿನ್ನೆಲೆ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ
  • ಗೋವಾ ಜನತೆಗೆ ಬಿಜೆಪಿ ವತಿಯಿಂದ ವಿಶೇಷ ಧನ್ಯವಾದ
  • ಗೆಲುವಿನ ಕ್ರೆಡಿಟ್ ಪ್ರಧಾನಿ ನರೇಂದ್ರ‌ ಮೋದಿಗೆ ಸಲ್ಲುತ್ತೆ

ಗೋವಾ(ಮಾ.10): ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 21. ಈಗಾಗಲೇ ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಗೋವಾ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಗೆಲುವಿನ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ಗೋವಾದಲ್ಲಿ 22 ಪ್ಲಸ್ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಮೂರ್ನಾಲ್ಕು ಕ್ಷೇತ್ರಗಳಲ್ಲಿ ಕಡಿಮೆ ಅಂತರದಿಂದ ಸೋಲಾಗಿದೆ. ಈ ಗೆಲುವಿನ ಕ್ರೆಡಿಟ್ ಪ್ರಧಾನಿ ನರೇಂದ್ರ‌ ಮೋದಿಗೆ ಸಲ್ಲಲಿದೆ. ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿ ಹಲವು‌ ನಾಯಕರು ಗೆಲುವಿಗೆ ಶ್ರಮಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗೋವಾದಲ್ಲಿ ಬಿಜೆಪಿ ಸರ್ಕಾರ ಇತ್ತು. ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯ ಜನ ಮೆಚ್ಚಿದ್ದಾರೆ. 20 ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ನೀಡಿದ ಜನತೆಗೆ ಧನ್ಯವಾದ. ಯಾವುದೇ ಮೈತ್ರಿ ಇಲ್ಲದೇ ನಮಗೆ 20 ಕ್ಷೇತ್ರಗಳಲ್ಲಿ ಜಯ ಲಭಿಸಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

Tap to resize

Latest Videos

Election Result ಕಾಮಿಡಿಯನ್‌ಗೆ ಸಿಎಂ ಪಟ್ಟ, ಕಾಮಿಡಿ ಶೋ ಜಡ್ಜ್‌ಗೆ ಸೋಲಿನ ಆಘಾತ!

ಗೋವಾ ಚುನಾವಣಾ ಉಸ್ತುವಾರಿ ವಹಿಸಿದ್ದ ಸಿಟಿ ರವಿ, ಗೋವಾ ಜನತೆ ಅಭಿವೃದ್ಧಿ ಪರವಾಗಿದೆ. ಹೀಗಾಗಿ ಮತ್ತೆ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ. ರಾಷ್ಟ್ರೀಯವಾದ ವಿಚಾರ, ಸ್ಥಿರ ಸರ್ಕಾರ, ಅಭಿವೃದ್ಧಿ ಪರ ಮತಯಾಚನೆ ಮಾಡಿದ್ದೆವು. ಮೂರು ತಿಂಗಳಿಂದ ಪ್ರತಿ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೆವು.  ಗೋವಾ ರಾಜಕೀಯ ಇತಿಹಾಸದಲ್ಲಿ ಸತತ ಮೂರನೇ ಬಾರಿ ಯಾವುದೇ ಸರ್ಕಾರ ಇರಲಿಲ್ಲ. ಇದೀಗ ಬಿಜೆಪಿ ಈ ಸಾಧನೆ ಮಾಡಿದೆ. ಜನರು ನಮಗೆ ಆಶೀರ್ವಾದ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಈ ಗೆಲುವು ನಾವು ರಾಷ್ಟ್ರವಾದ, ಅಭಿವೃದ್ಧಿ ಪರ ಇದ್ದೇವೆ ಅನ್ನೋ ಸಂದೇಶ ನೀಡಿದ್ದಾರೆ. ಬಹುಮತ ಸಾಬೀತು ಪಡಿಸುವ ದಿನ ಮತ್ತಷ್ಟು ಶಾಸಕರು ನಮ್ಮ ಜೊತೆಗಿರ್ತಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಮಹಾರಾಷ್ಟ್ರವಾದಿ ಗೋವಂತಕ್ ಪಕ್ಷದ ಇಬ್ಬರು ಅಭ್ಯರ್ಥಿಗಳು ನಮಗೆ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ. ಮೂವರು ಪಕ್ಷೇತರ ಬಿಜೆಪಿ ಅಭ್ಯರ್ಥಿಗಳು ಸಹ ನಮಗೆ ಬೆಂಬಲ ಸೂಚಿಸಿದ್ದಾರೆ. 25 ಸದಸ್ಯ ಸ್ಥಾನ ಬಲದಲ್ಲಿ ಸರ್ಕಾರ ರಚಿಸುತ್ತೇವೆ.  ಮತ್ತಷ್ಟು ವಿಜೇತ ಅಭ್ಯರ್ಥಿಗಳು ನಮ್ಮ ಜೊತೆ ಬರಬಹುದು ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. 

Election Result 2022 ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

ಇದೇ ವೇಳೆ ಕಾಂಗ್ರೆಸ್ ರೆಸಾರ್ಟ್ ರಾಜಕೀಯವನ್ನು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಮಧ್ಯಾಹ್ನ ಮೂರು ಗಂಟೆಗೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದರು. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ನಾಯಕರ ಪತ್ತೆ ಇಲ್ಲ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಭ್ಯರ್ಥಿಗಳ ಮೇಲೆ ನಂಬಿಕೆ ಇಲ್ಲ.ಹೀಗಾಗಿ ರೆಸಾರ್ಟ್ ಹುಡುಕಿ ವಿಶೇಷ ವಿಮಾನ ತಂದಿದ್ದರು. ಕಾಂಗ್ರೆಸ್ ಹೆಚ್ಚಿನ ಸಮಯವನ್ನು ರೆಸಾರ್ಟ್ ಹುಡುಕುವುದು, ವಿಮಾನ ತರುವುದರಲ್ಲೇ ಕಳೆದಿದೆ. ಇದರ ಅವಶ್ಯಕತೆ ಇರಲಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.

ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ:
ಬಿಜೆಪಿ 20 ಸ್ಥಾನದಲ್ಲಿ ಗೆಲುವು
ಕಾಂಗ್ರೆಸ್ 11 ಸ್ಥಾನದಲ್ಲಿ ಗೆಲುವು
ಆಪ್ 2 ಸ್ಥಾನದಲ್ಲಿ ಗೆಲುವು
ಇತರರು 1 ಸ್ಥಾನದಲ್ಲಿ ಗೆಲುವು

click me!