ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?

By Suvarna News  |  First Published Mar 10, 2022, 7:19 PM IST

ಪಂಜಾಬ್‌ನಲ್ಲಿನ ಅಭೂತಪೂರ್ವ ಗೆಲುವಿನ ಬಳಿಕ ಮಾತನಾಡಿದ ದೆಹಲಿ ಮುಖ್ಯಮಂತ್ರಿ  "ಕೇಜ್ರಿವಾಲ್ ಭಯೋತ್ಪಾದಕನಲ್ಲ. ಆತ ದೇಶದ ಮಗ, ನಿಜವಾದ ದೇಶಭಕ್ತ ಎಂಬುದಾಗಿ ಜನರು ಸ್ಪಷ್ಟಪಡಿಸಿದ್ದಾರೆ" ಎಂದು ಹೇಳಿದ್ದಾರೆ
 


ಚಂಡಿಗಢ(ಮಾ.10): ಪಂಚ ರಾಜ್ಯಗಳ ಚುನಾವಣೆಯಲ್ಲಿ (Assembly Elections 2022) ಭಾರಿ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಪಂಜಾಬ್. ಆಡಳಿತರೂಢ ಕಾಂಗ್ರೆಸ್ ನೆಲಕ್ಕಪ್ಪಳಿಸಿದರೆ, ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರದ ಗದ್ದುಗೆ ಏರುತ್ತಿದೆ. ಈ ಬೆನ್ನಲ್ಲೇ ಮಾತನಾಡಿದ ಪಕ್ಷದ ವರಿಷ್ಠ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಕನಸು ಇಂದು ನನಸಾಗಿದೆ. ಪಂಜಾಬ್‌ನ ಜನರು ಈ ಬಾರಿ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ, ಆಮ್‌ ಆದ್ಮಿ ಪಾರ್ಟಿ ದೇಶದಲ್ಲಿ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿನ ಅಭೂತಪೂರ್ವ ಗೆಲುವಿನ ಕುರಿತು ಪ್ರತಿಕ್ರಿಯಿಸಿದ  ಅರವಿಂದ್‌ ಕೇಜ್ರಿವಾಲ್‌ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ  ರಾಜಕೀಯವನ್ನು ಹೊರತುಪಡಿಸಿ ಇತರ ಮೂರು ವಿಷಯಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಮಾತನಾಡಿದ್ದಾರೆ.  ಕೇಜ್ರಿವಾಲ್ ಭಯೋತ್ಪಾದಕನಲ್ಲ. ಆತ ದೇಶದ ಮಗ, ನಿಜವಾದ ದೇಶಭಕ್ತ ಎಂಬುದಾಗಿ ಜನರು ಸ್ಪಷ್ಟಪಡಿಸಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.  ಆಮ್‌ ಆದ್ಮಿ ಪಾರ್ಟಿ ನವ ಭಾರತವನ್ನು ನಿರ್ಮಿಸುತ್ತದೆ ಎಂದು ಪ್ರತಿಪಾದಿಸಿದ ಕೇಜ್ರಿವಾಲ್ ಹಲವು ದೂರದೃಷ್ಟಿಯ ಹೇಳಿಕೆಗಳನ್ನು ನೀಡಿದ್ದಾರೆ. 

Tap to resize

Latest Videos

*ಭಾರತೀಯರು ಪರಸ್ಪರ ಪ್ರೀತಿಸುತ್ತಾರೆ ಮತ್ತು ದ್ವೇಷಿಸುವುದಿಲ್ಲ

*ಭಾರತದಲ್ಲಿ ಯಾರೂ ಹಸಿವಿನಿಂದ ಮಲಗುವುದಿಲ್ಲ

*ತಾಯಂದಿರು ಮತ್ತು ಸಹೋದರಿಯರು ಸುರಕ್ಷಿತವಾಗಿರುತ್ತಾರೆ

*ವಿದ್ಯಾರ್ಥಿಗಳು ತಮ್ಮ ಹಣಕಾಸಿನ ಹಿನ್ನೆಲೆ ಹೊರತಾಗಿಯೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಇದನ್ನೂ ಓದಿ: Election Result ಕಾಮಿಡಿಯನ್‌ಗೆ ಸಿಎಂ ಪಟ್ಟ, ಕಾಮಿಡಿ ಶೋ ಜಡ್ಜ್‌ಗೆ ಸೋಲಿನ ಆಘಾತ!

ಈ ಮೂಲಕ ದೇಶದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕೇಜ್ರಿವಾಲ್‌ ಪ್ರತಿಪಾದಿಸಿದ್ದಾರೆ. ಆಮ್‌ ಆದ್ಮಿ ಹೊಸ ಭಾರತವನ್ನು ನಿರ್ಮಿಸುತ್ತದೆ ಎಂದು ಹೇಳುವ ಮೂಲಕ ಭಾರತೀಯ ವಿದ್ಯಾರ್ಥಿಗಳು ಎಂಬಿಬಿಎಸ್ ಅಧ್ಯಯನ ಮಾಡಲು ಉಕ್ರೇನ್ ಮತ್ತು ಇತರ ರಾಷ್ಟ್ರಗಳಿಗೆ  ಹೋಗಬೇಕಾಗಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಸ್ವಾತಂತ್ರ್ಯದ ನಂತರ ವೈದ್ಯಕೀಯ ಶಿಕ್ಷಣ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಯಾವುದೇ ಪ್ರಗತಿಯಿಲ್ಲ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ. ಕೇಜ್ರಿವಾಲ್‌ ಸರ್ಕಾರದ ಹಾಗೂ ನರೇಂದ್ರ ಮೋದಿ 2014ರಲ್ಲಿ ಪ್ರಧಾನಮಂತ್ರಿಯಾದ ನಂತರ ಆದ ಬದಲಾವಣೆಗಳ ಕೆಲವು ಅಂಕಿ ಅಂಶ ಇಲ್ಲಿದೆ 

*2014 ರಲ್ಲಿ 387 ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 54,348 ರಿಂದ 2021 ರಲ್ಲಿ 596 ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳು  ಸಂಖ್ಯೆ 88,120 ಕ್ಕೆ ಏರಿದೆ. ಕೇವಲ ಏಳು ವರ್ಷಗಳಲ್ಲಿ ದೇಶದಲ್ಲಿ ಪದವಿಪೂರ್ವ ವೈದ್ಯಕೀಯ ಶಿಕ್ಷಣದಲ್ಲಿ  62% ಸೀಟುಗಳ ಹೆಚ್ಚಳವನ್ನು ಇದು ಪ್ರತಿನಿಧಿಸುತ್ತದೆ

*2014ರಲ್ಲಿ ಕೇವಲ 7 ಇದ್ದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಕಾಲೇಜುಗಳ ಸಂಖ್ಯೆಯೂ 22ಕ್ಕೆ ಹೆಚ್ಚಾಗಿದೆ

*ಆದರೆ 2014 ರಲ್ಲಿದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 16, ಮತ್ತು 2019 ರ ಹೊತ್ತಿಗೆ,  ಏಳು ವರ್ಷಗಳಲ್ಲಿ ಕೇವಲ ಒಂದು ಹೆಚ್ಚುವರಿ ವೈದ್ಯಕೀಯ ಕಾಲೇಜನ್ನು  ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ  ಸರ್ಕಾರವು ಸೇರಿಸಿದೆ. ರಾಷ್ಟ್ರೀಯ ಸರಾಸರಿ 62% ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಸೀಟುಗಳ ಸಂಖ್ಯೆ ಕೇವಲ 42% ಹೆಚ್ಚಾಗಿದೆ.

*ಇನ್ನು ಕೇಜ್ರಿವಾಲ್ ನಿಯಂತ್ರಣದಲ್ಲಿರುವ ಎಎಪಿ ಸರ್ಕಾರವು ದೆಹಲಿ ಗಲಭೆ ಪ್ರಕರಣದಲ್ಲಿ ವಿಶೇಷ ಅಭಿಯೋಜಕರನ್ನು ನೇಮಿಸಲು ಅನುಮತಿ ನಿರಾಕರಿಸಿದೆ. ರಾಷ್ಟ್ರವಿರೋಧಿ ಶಕ್ತಿಗಳಿಂದ ಹುಟ್ಟಿಕೊಂಡ ದೆಹಲಿ ಗಲಭೆಗಳು ಹಲವು ಸಾವುಗಳಿಗೆ ಕಾರಣವಾಗಿತ್ತು.  ಅಂಕಿತ್ ಶರ್ಮಾ ಅವರ ಕ್ರೂರ ಹತ್ಯೆಯಲ್ಲಿ ಎಎಪಿ ನಾಯಕ ತಾಹಿರ್ ಹುಸೇನ್ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಹೀಗಾಗಿ ದೆಹಲಿ ಗಲಭೆ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ಗಳಿಗೆ ಮಂಜೂರಾತಿ ನೀಡಿರುವುದು ಕೇಜ್ರಿವಾಲ್ ಮತ್ತು ಎಎಪಿಯ ನೈತಿಕ ವೈಫಲ್ಯವನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: Election Result 2022 ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

*ದೆಹಲಿಯಲ್ಲಿನ ಡಿಟಿಸಿ ಬಸ್ಸುಗಳು ಮಹಿಳೆಯರಿಗೆ  ವರದಾನವಾಗಿದ್ದು, ಇದು ದೆಹಲಿಯಾದ್ಯಂತ ಸುರಕ್ಷಿತವಾಗಿ ಪ್ರಯಾಣಿಸಲು ಸಹಾಯ ಮಾಡುತ್ತದೆ.  ಆದರೆ ಕೇಜ್ರಿವಾಲ್ 5,000 ಹೊಸ ಬಸ್‌ಗಳ ಭರವಸೆಯ ನೀಡಿದ್ದರೂ, ಸರ್ಕಾರ ಒಂದೇ ಒಂದು ಡಿಟಿಸಿ ಬಸ್ ಖರೀದಿಸಲಿಲ್ಲ. ಬದಲಾಗಿ ಖಾಸಗಿ ಮಾರಾಟಗಾರರು ನಿರ್ವಹಿಸುವ 800 ಕ್ಲಸ್ಟರ್ ಬಸ್‌ಗಳನ್ನು ಸರ್ಕಾರ ನಿಯೋಜಿಸಿದೆ , ಇದು ಮಹಿಳೆಯರಿಗೆ ಸುರಕ್ಷತೆಗೆ ಅಪಾಯಕಾರಿ ಎಂಬುದು ಹಲವರ ಅಭಿಪ್ರಾಯ

*ದೆಹಲಿಯಲ್ಲಿ ಸುಮಾರು 20 ಹೊಸ ಪದವಿ ಕಾಲೇಜುಗಳು ಮತ್ತು 500 ಹೊಸ ಶಾಲೆಗಳು ನೀಡುವ  ಭರವಸೆಯ ಮೇಲೆ, ಎಎಪಿ 2015 ರಲ್ಲಿ  ಅಧಿಕಾರಕ್ಕೆ ಬಂದಿತು. ಆದರೆ 2020 ರ ವೇಳೆಗೆ  ಕೇವಲ 1 ಡಿಗ್ರಿ ಕಾಲೇಜು ಕಾರ್ಯರೂಪಕ್ಕೆ ಬಂದಿದ್ದು  ಭರವಸೆಯ ಪ್ರಕಾರ ಯಾವುದೇ ಹೊಸ ಶಾಲೆಯನ್ನು ಸೇರಿಸಲಾಗಿಲ್ಲ.

*ಮೂಲಸೌಕರ್ಯ ಅಭಿವೃದ್ಧಿಯ ಮಧ್ಯೆ, ದೆಹಲಿ ಸರ್ಕಾರದಲ್ಲಿ 2020 ರವರೆಗೆ ಶಾಲೆಗಳಲ್ಲಿ 45% ಶಿಕ್ಷಕರ ಕೊರತೆಯೂ ಇತ್ತು. ಇಂಡಿಯಾ ಸ್ಪೆಂಡ್ ವರದಿಯು ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿರುವ ದೆಹಲಿಯು, ಶಿಕ್ಷಕರನ್ನು ನೇಮಿಸಿಕೊಳ್ಳಲು ವಿಫಲವಾಗಿದೆ ಎಂದು ವರದಿ ಮಾಡಿದೆ.

*ಆರೋಗ್ಯ ರಕ್ಷಣೆಯಲ್ಲಿ, ಎಎಪಿ ಸಾಕಷ್ಟು ಸುಧಾರಿಸಿದೆ ಎಂದು ಹೇಳಿಕೊಂಡರೂ, ಅದು  ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಯತ್ತ ಗಮನ ಹರಿಸಿತ್ತು. ದೆಹಲಿ ಆಸ್ಪತ್ರೆಗಳಲ್ಲಿ 1,000ಕ್ಕೆ ಐದು ಹಾಸಿಗೆಗಳನ್ನು ಹೆಚ್ಚಿಸುವುದಾಗಿ ಎಎಪಿ ಭರವಸೆ ನೀಡಿತ್ತು, ಆದರೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ದೆಹಲಿಯು 1,000 ಜನರಿಗೆ 2.9 ಹಾಸಿಗೆಗಳನ್ನು ಹೊಂದಿದೆ.

ಇದನ್ನೂ ಓದಿ: ಪಂಜಾಬ್‌ ಪೂರ್ತಿ ಗುಡಿಸಿದ ಪೊರಕೆ... ಭಗವಂತ್ ಮಾನ್ ರೂಪದಲ್ಲಿ ಬಂದ ಪುಟ್ಟ ಬಾಲಕ

*ಎರಡನೇ ಕೋವಿಡ್ ಅಲೆಯಿಂದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ದೆಹಲಿಯೂ ಸೇರಿದೆ. ಆಮ್ಲಜನಕದ ಕೊರತೆ, ಕ್ರಿಟಿಕಲ್ ಕೇರ್ ಉಪಕರಣಗಳು ಮತ್ತು ಐಸಿಯು ಹಾಸಿಗೆಗಳ ಕೊರತೆಯಿಂದ ಸಾವಿರಾರು ಜೀವಗಳನ್ನು ಕಳೆದುಕೊಂಡಿದ್ದಾರೆ. ಹಾಸಿಗೆಗಳು, ಔಷಧಗಳು, ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬೇಡಿಕೆಗಳ ಸಾಕಷ್ಟು ಮೇಸೆಜ್‌ಗಳನ್ನು ಪೋಸ್ಟ್‌ ಮಾಡಲಾಗಿತ್ತು.

*ಇದಲ್ಲದೆ, ದೆಹಲಿಯಲ್ಲಿ 50% ಕ್ಕಿಂತ ಕಡಿಮೆ ಆರೋಗ್ಯ ಕೇಂದ್ರಗಳು, ಕಾರ್ಮಿಕ ಕೊಠಡಿಗಳನ್ನು ಹೊಂದಿವೆ ಮತ್ತು ಅರ್ಧಕ್ಕಿಂತ ಕಡಿಮೆ ಕೇಂದ್ರಗಳಲ್ಲಿ ಕೇವಲ  4 ಹಾಸಿಗೆಗಳಿವೆ. ಇನ್ನು ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಷಯದಲ್ಲಿ, 900 ಪ್ರಾಥಮಿಕ ಆರೋಗ್ಯವನ್ನು ನೀಡುವ  ಹಾಗೂ  ದೆಹಲಿ ಆಸ್ಪತ್ರೆಗಳಿಗೆ 30,000 ಹಾಸಿಗೆಗಳನ್ನು ಸೇರಿಸುವ  ಆಪ್ ಭರವಸೆ. ಕೇವಲ 200 ಪ್ರಾಥಮಿಕ ಆರೋಗ್ಯ ಕೇಂದ್ರಗಳು 2019 ರಲ್ಲಿ  ಇನ್ನೂ 170 ಆರೋಗ್ಯ ಕೇಂದ್ರಗಳು ಉದ್ಘಾಟನೆಯಾಗಬೇಕಿತ್ತು ಆದರೆ ಈ  ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿ ಇಲ್ಲ. 

click me!