Elections 2022 Result 2 ರಾಜ್ಯದಲ್ಲಿ ರೆಸಾರ್ಟ್ ಬುಕ್ ಮಾಡಿದ ಕಾಂಗ್ರೆಸ್‌ಗೆ ನಿರಾಸೆ, ಗೋವಾದಲ್ಲಿ ಸರ್ಕಾರ ರಚಿಸುವತ್ತ ಬಿಜೆಪಿ

By Suvarna News  |  First Published Mar 10, 2022, 12:09 PM IST
  • ಕಳೆದ ಬಾರಿ ತಪ್ಪು ಮರುಕಳಿಸದಂತೆ ಎಚ್ಚೆತ್ತ ಕಾಂಗ್ರೆಸ್‌ಗೆ ನಿರಾಸೆ
  • ಗೋವಾ, ರಾಜಸ್ಥಾನದಲ್ಲಿ ರೆಸಾರ್ಟ್ ಬುಕ್ ಮಾಡಿದ್ದ ಕಾಂಗ್ರೆಸ್
  • 19 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ, ಸರ್ಕಾರ ರಚನಗೆ ಕಸರತ್ತು

ಗೋವಾ(ಮಾ.10): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆ ಕೈತಪ್ಪಿದ ಕಾರಣ ಈ ಬಾರಿ ಕಾಂಗ್ರೆಸ್ ಎಚ್ಚೆತ್ತುಕೊಂಡಿತ್ತು. ಇದಕ್ಕಾಗಿ 2 ರಾಜ್ಯಗಳಲ್ಲಿ ರೆಸಾರ್ಟ್ ಬುಕ್ ಮಾಡಿ ಕಾಂಗ್ರೆಸ್ ನಾಯಕರನ್ನು ಕೂಡಿ ಹಾಕಿತ್ತು. ಈ ಮೂಲಕ ಆಪರೇಶನ್ ಕಮಲ ತಟ್ಟದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿತ್ತು. ಆದರೆ ಕಾಂಗ್ರೆಸ್ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿದೆ. 19 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಇತ್ತ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚಿಸಲು ಸಾಧ್ಯವಾಗಿರಿಲ್ಲ. ಹೀಗಾಗಿ ಈ ಬಾರಿ ಫಲಿತಾಂಶಕ್ಕೂ ಮೊದಲೆ ಇತರ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದ್ದ ಕಾಂಗ್ರೆಸ್, ತನ್ನ ಅಭ್ಯರ್ಥಿಗಳನ್ನು ಮಡಗಾಂವ್‌ನ ಖಾಸಗಿ ಹೊಟೆಲ್‌ನಲ್ಲಿರಿಸಿದೆ. ನಾಯಕರಿಕೆ ಸೂಕ್ತ ಭದ್ರತೆ ಹಾಗೂ ಸಂಪೂರ್ಣ ಉಸ್ತುವಾರಿಯನ್ನು ಹಿರಿಯ ನಾಯಕ ಪಿ.ಚಿದಂಬರಂ, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೊತೆ , ಪ್ರಿಯಾಂಕ ಗಾಂಧಿ ನಿರಂತರ ಸಂಪರ್ಕದಲ್ಲಿದ್ದು, ಸ್ಥಳಾಂತರಕ್ಕೆ ಮನಸ್ಸು ಮಾಡಿದ್ದಾರೆ.

Tap to resize

Latest Videos

Assembly Elections 2022 Result: 4 ರಾಜ್ಯಗಳಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ

ಅತಂತ್ರ ಫಲಿತಾಂಶ ಬಂದರೆ ಕಳೆದ ಬಾರಿಯಂತೆ ಈ ಬಾರಿಯೂ ಆಪರೇಶನ್ ಕಮಲ ಭೀತಿ ಕಾಂಗ್ರೆಸ್‌ಗೆ ಎದುರಾಗಿದೆ. 40 ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೋವಾದಿಂದ ರಾಜಸ್ಥಾನದ ರೆಸಾರ್ಟ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ಹಿರಿಯ ನಾಯಕರು ಮುಂದಾಗಿದ್ದಾರೆ. ಅಂತಿಮ ಫಲಿತಾಂಶ ಬಂದ ಬೆನ್ನಲ್ಲೇ ನಾಯಕರ ಸ್ಥಳಾಂತರಕ್ಕೆ ಕಾಂಗ್ರೆಸ್ ಮುಂದಾಗಿದೆ. ಸ್ಥಳಾಂತರ ಸಂಪೂರ್ಣ ಹೊಣೆಯನ್ನು ಡಿಕೆ ಶಿವಕುಮಾರ್‌ಗೆ ನೀಡಿದೆ.

ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಆದರೆ ಬಿಜೆಪಿ ಅತ್ಯಂತ ನೀಚ ರಾಜಕಾರಣ ಮಾಡುತ್ತಿದ. ಆಪರೇಶನ್ ಕಮಲ ಮಾಡಲು ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕೊಲೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದು ಗೋವಾದ ಪಣಿಜಿಯಲ್ಲಿರುವ ರಾಜ್ಯದ ಕಾಂಗ್ರೆಸ್ ನಾಯಕ  ಪ್ರಕಾಶ್ ರಾಠೋಡ್ ಹೇಳಿದ್ದಾರೆ. 

Assembly Elections 2022 Result ಕೆಲವೇ ಕ್ಷಣಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ರಾಜೀನಾಮೆ!

ನೆಕ್ ಟು ನೆಕ್ ಫೈಟ್ ಇದ್ದರೂ ಕಾಂಗ್ರೆಸ್ ಸರ್ಕಾರ ಮಾಡುವ ಸೂಚನೆ ಬಂದಿದೆ. ಅಂತಿಮ ಫಲಿತಾಂಶದಲ್ಲಿ ಗೋವಾದಲ್ಲಿ ಲೀಡ್ ಹೆಚ್ಚಾಗಲಿದೆ.ನಮ್ಮ ನಾಯಕರ ಮೇಲೆ ಐಟಿ, ಇಡಿ ಕೇಸ್ ಹಾಕಿ ಬೆದರಿಸ್ತಾರೆ. ಬಳಿಕ ಅ‌ನೈತಿಕವಾಗಿ ಎಂಎಲ್‌ಎಗಳ‌‌ನ್ನು ಎಳೆದುಕೊಂಡು ಬಂದು ಬಿಜೆಪಿ ಸರ್ಕಾರ ಮಾಡ್ತಾರೆ . ಇದು ಹಿಂದಿನ ಬಾರಿ ನಾವೆಲ್ಲಾ ನೋಡಿದ್ದೇವೆ. ಈ ಬಾರಿ ಆಪರೇಶನ್ ಕಮಲ ಆಗದಂತೆ ತಡೆಯಲು ನಾವು ತಯಾರಿ ಮಾಡಿಕೊಂಡಿದ್ದೇವೆ ಎಂದು ಪ್ರಕಾಶ್ ಹೇಳಿದ್ದಾರೆ.

ಎಲೆಕ್ಷನ್ ಮೊದಲು ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸಲು ಯತ್ನಿಸಿದ್ರು,ಈಗಲೂ ಯತ್ನಿಸುತ್ತಿದ್ದಾರೆ. ಜನ‌ ಆಶೀರ್ವಾದ ಮಾಡಲ್ಲ ಅಂತಾ ಹಣ ಬಲದಿಂದದ ಸರ್ಕಾರ ಮಾಡ್ತೀರಾ ನಾಚಿಕೆಯಾಗಬೇಕು‌‌ ಎಂದು ಪ್ರಕಾಶ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಸದ್ಯ ಗೋವಾ ಫಲಿತಾಂಶ
ಬಿಜೆಪಿ 17 ಸ್ಥಾನಗಲ್ಲಿ ಮುನ್ನಡೆ
ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆ
ಆಮ್ ಆದ್ಮಿ ಪಾರ್ಟಿ 3 ಸ್ಥಾನಗಳಲ್ಲಿ ಮುನ್ನಡೆ
ಇತರರು 8 ಸ್ಥಾನಗಳಲ್ಲಿ ಮುನ್ನಡೆ

ಗೋವಾದಲ್ಲಿ ಸರ್ಕಾರ ರಚಿಸಲು 21 ಸ್ಥಾನಗಳನ್ನು ಗೆಲ್ಲಬೇಕಿದೆ. ಸದ್ಯ ಅತಂತ್ರ ಫಲಿತಾಂಶದ ಸೂಚನೆ ಸಿಗುತ್ತಿರುವ ಕಾರಣ ರೆಸಾರ್ಟ್ ರಾಜಕೀಯ, ಆಪರೇಶನ್ ರಾಜಕೀಯ ಜೋರಾಗಿದೆ.

click me!