ಮುಸ್ಲಿಮ್ ಮಹಿಳೆಗೆ ಚುನಾವಣಾ ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ ಕೃತ್ಯ, ಮಸೀದಿ ಇಮಾಮ್ ವಿವಾದ!

By Suvarna NewsFirst Published Dec 4, 2022, 8:12 PM IST
Highlights

ಚುನಾವಣೆಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಟಿಕೆಟ್ ನೀಡುವುದು ಇಸ್ಲಾಂ ಧರ್ಮವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಇದು ಇಸ್ಲಾಂ ವಿರೋಧಿ ಕೃತ್ಯ ಎಂದು ಮಸೀದಿ ಇಮಾಮ್ ವಿವಾದಿತ ಹೇಳಿಕೆ ನೀಡಿದ್ದಾರೆ. 

ಅಹಮ್ಮದಾಬಾದ್(ಡಿ.04): ಕರ್ನಾಟಕದಲ್ಲಿ ಮುಸ್ಲಿಮ್ ಮುಖ್ಯಮಂತ್ರಿ, ದಲಿತ ಮುಖ್ಯಮಂತ್ರಿ ಚರ್ಚೆ ಜೋರಾಗಿದೆ. ಇದು ಒಲೈಕೆ ರಾಜಕಾರಣವೋ ಅಥವಾ ನೈಜ ಕಾಳಜಿಯೋ ಬೇರೆ ಮಾತು. ಆದರೆ ಇಲ್ಲೊರ್ವ ಮುಸ್ಲಿಮ್ ಇಮಾಮ್, ಮುಸ್ಲಿಮ್ ಮಹಿಳೆಯರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದೇ ಇಸ್ಲಾಮ್ ವಿರೋಧಿ ನಡೆ ಎಂದಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅಹಮ್ಮದಾಬಾದ್ ಜಾಮಾ ಮಸೀದಿಯ ಇಮಾಮ್ ಶಬ್ಬೀರ್ ಅಹಮ್ಮದ್ ಸಿದ್ದಿಕಿ ಈ ವಿವಾದಿಕ ಹೇಳಿಕೆ ನೀಡಿದ್ದಾರೆ. ಇಸ್ಲಾಮ್‌ನಲ್ಲಿ ಮಹಿಳೆಯರಿಗೆ ಒಂದು ಸ್ಥಾನ ನೀಡಲಾಗಿದೆ. ಅದನ್ನು ಬದಲಿಸುವ ಪ್ರಯತ್ನ ಮಾಡಬೇಡಿ. ಇದು ಇಸ್ಲಾಮ್ ವಿರೋಧಿ ಕೃತ್ಯ ಎಂದು ಖಡಕ್ ಸಂದೇಶ ನೀಡಿದ್ದಾರೆ. ಗುಜರಾತ್ ಎರಡನೇ ಹಂತದ ಚುನಾವಣೆಗೂ ಮುನ್ನ ಇಮಾಮ್ ನೀಡಿರುವ ಈ ಹೇಳಿಕೆ ಇದೀಗ ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಗುಜರಾತ್ ಚುನಾವಣಾ ಕಣ ರಂಗೇರಿದೆ. 2ನೇ ಹಂತದ ಚುನಾವಣೆ ನಾಳೆ(ಡಿ.05) ನಡೆಯಲಿದೆ. ಟಿಕೆಟ್ ನೀಡಲು ಮುಸ್ಲಿಮ್‌ನಲ್ಲಿ ಪುರುಷರು ಇಲ್ಲವೆ? ಯಾವ ಕಾರಣಕ್ಕಾಗಿ ಮಹಿಳೆಯರಿಗೆ ಟಿಕೆಟ್ ನೀಡುತ್ತಿದ್ದೀರೀ? ಈ ರೀತಿ ನಡೆಯನ್ನು ಇಸ್ಲಾಮ್ ಒಪ್ಪಿಕೊಳ್ಳುವುದಿಲ್ಲ ಎಂದು ಇಮಾಮ್ ಹೇಳಿದ್ದಾರೆ. ಮುಸ್ಲಿಮ್ ಮಹಿಳಾ ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಮಾಡಬೇಕು, ಎಲ್ಲರ ಧರ್ಮದವರ ಜೊತೆ ಮಾತನಾಡಬೇಕು. ಇದಕ್ಕೆ ಮುಸ್ಲಿಮ್ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

 

ಹಿಂದೂಗಳು ಲವ್ ಜಿಹಾದ್ ಮಾಡಿ ನಿಮ್ಮ ತಾಕತ್ತೇನು ನೋಡುತ್ತೇವೆ ಎಂದ ಸಂಸದ

ಮುಸ್ಲಿಮ್ ಅಭ್ಯರ್ಥಿ ಶಾಸಕ, ಸಚಿವರಾದರೆ ಹಿಜಾಬ್ ಧರಿಸುವುದಿಲ್ಲ. ಇಸ್ಲಾಮ್ ವಿರೋಧಿ ನಡೆ ಅನುಸರಿಸುತ್ತಾರೆ. ಹೀಗಾಗಿ ಮುಸ್ಲಿಮ್ ಮಹಿಳೆಯರಿಗೆ ಟಿಕೆಟ್ ನೀಡುವುದು ತಪ್ಪು ಎಂದು ಇಮಾಮ್ ಹೇಳಿದ್ದಾರೆ. ನಾವು ನಮಾಜ್ ಮಾಡುತ್ತೇವೆ. ಇಲ್ಲಿ ನೀವು ಮಹಿಳೆಯರನ್ನು ನೋಡಿದ್ದೀರಾ? ಮಹಿಳೆಯರಿಗೆ ಅವಕಾಶ ನೀಡಬೇಕು ಅನ್ನೋದು ನಿಮ್ಮ ವಾದವಾದರೆ ನಾವು ಮಸೀದಿಯಲ್ಲೇ ನೀಡುತ್ತಿದ್ದೇವು. ಆದರೆ ಇಸ್ಲಾಮ್‌ನಲ್ಲಿ ಇದಕ್ಕೆ ಅವಕಾಶವಿಲ್ಲ. ಅಲ್ಲಾನ ಕೃಪೆಗೆ ಪಾತ್ರರಾಗಲು ನಾವು ಇಸ್ಲಾಮ್ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇಮಾಮ್ ಹೇಳಿದ್ದಾರೆ.

ಭಯೋತ್ಪಾದನೆಯಲ್ಲಿ ಭಾಗಿಯಾಗದಂತೆ ಮೌಲ್ವಿಗಳು ಬುದ್ಧಿ ಹೇಳಬೇಕು: ಕಾಣಿಯೂರುಶ್ರೀ

ಜಾಮಾ ಮಸೀದಿ: ಹುಡುಗಿಯರ ಪ್ರವೇಶ ನಿಷೇಧ ಆದೇಶ ರದ್ದು
ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯಲ್ಲಿ ಒಂಟಿ ಅಥವಾ ಗುಂಪಿನಲ್ಲಿ ಬರುವ ಹುಡುಗಿಯರ ಪ್ರವೇಶವನ್ನು ನಿಷೇಧಿಸಿದ್ದ ವಿವಾದಿತ ಆದೇಶವನ್ನು ಶಾಹಿ ಇಮಾಂ ಹಿಂಪಡೆದಿದ್ದಾರೆ. ಇತ್ತೀಚೆಗೆ ಜಾಮಾ ಮಸೀದಿಯ 3 ಮುಖ್ಯದ್ವಾರಗಳಲ್ಲಿ ಒಬ್ಬಂಟಿ ಹುಡುಗಿ ಅಥವಾ ಗುಂಪಿನಲ್ಲಿ ಹುಡುಗಿಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ನೋಟಿಸ್‌ ಅಂಟಿಸಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಹಾಗೂ ವಿಎಚ್‌ಪಿ ಇದು ಮಹಿಳೆಯರ ಹಕ್ಕಿನ ಉಲ್ಲಂಘನೆ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಮಸೀದಿಯ ಶಾಹಿ ಇಮಾಮ್‌ ಬುಖಾರಿ ಸ್ಪಷ್ಟನೆ ನೀಡಿ, ‘ನಿಷೇಧವು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬರುವ ಹುಡುಗಿಯರಿಗೆ ಅನ್ವಯಿಸುವುದಿಲ್ಲ. ಕೆಲ ಯುವತಿಯರು ತಮ್ಮ ಪ್ರಿಯಕರರನ್ನು ಭೇಟಿಯಾಗಲು ಸ್ಥಳವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಿಷೇಧವನ್ನು ಹೇರಲಾಗಿದೆ’ ಎಂದಿದ್ದರು.

click me!