ವಧು - ವರರು ತಮ್ಮ ಕುಟುಂಬ ಹಾಗೂ ಸಂಬಂಧಿಕರನ್ನು ತಮ್ಮ ವಿವಾಹಕ್ಕೆ ಕರೆದೊಯ್ಯಲು ಇಡೀ ವಿಮಾನವನ್ನೇ ಬುಕ್ ಮಾಡಿದ್ದಾರೆ. ಇಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ಭಾರತೀಯ ಮದುವೆಗಳೆಂದರೆ (Indian Wedding) ಅದ್ಧೂರಿತನಕ್ಕೆ ಏನು ಕಡಿಮೆಯೇ ಹಾಗೂ, ಮದುವೆಯಲ್ಲಿ ಹೆಚ್ಚು ಜನರೂ ತುಂಬಿರುತ್ತಾರೆ. ಇನ್ನು, ಮದುವೆಗೆ ತಯಾರು ಮಾಡೋದಂದ್ರೆ ಕಡಿಮೆನಾ..? ಮದುವೆಗೆ ಅತಿಥಿಗಳ ಪಟ್ಟಿ (Guests List), ಊಟ (Food) - ಬಟ್ಟೆಯ ಲಿಸ್ಟ್, ಡೆಕೊರೇಷನ್ (Decoration), ಒಡವೆ ಮುಂತಾದ ದೊಡ್ಡ ಪಟ್ಟಿಯೇ ಇರುತ್ತದೆ. ಎಲ್ಲವನ್ನೂ ಹಲವು ದಿನಗಳ ಮುಂಚೆಯೇ ಪ್ಲ್ಯಾನ್ ಮಾಡಲಾಗುತ್ತದೆ. ಕೋವಿಡ್ - 19 (COVID - 19) ಸಾಂಕ್ರಾಮಿಕಕ್ಕೆ ಕಳೆದ 2 ವರ್ಷಗಳಿಂದ ಹೆಚ್ಚು ಜನರು ಮನೆಯಲ್ಲೇ ಇದ್ದರು ಹಾಗೂ ಈ ಸಮಯದಲ್ಲಿ ಅದ್ಧೂರಿ ಮದುವೆಗಳ ಸಂಖ್ಯೆಯೂ ಕಡಿಮೆ ಇತ್ತು. ಆದರೀಗ, ಮದುವೆ, ಪ್ರವಾಸಕ್ಕೆ ಹೋಗೋರ ಸಂಖ್ಯೆ ಹೆಚ್ಚಾಗ್ತಿದ್ದು, ಇಡೀ ಪ್ರಪಂಚದ ಜನರೇ ಪ್ರವಾಸಕ್ಕೆ ಹೋಗಲು ಹಾತೊರೆಯುತ್ತಿರುವುದರಿಂದ ಡೆಸ್ಟಿನೇಷನ್ ವೆಡ್ಡಿಂಗ್ (Destination Wedding) ಪ್ರಾಮುಖ್ಯತೆ ಪಡೆದುಕೊಳ್ತಿದೆ.
ಇದೇ ರೀತಿ, ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಉದಾಹರಣೆಯೊಂದರಲ್ಲಿ, ಮದುವೆಯಾಗುವ ದಂತಿ ಅಂದ್ರೆ ವಧು - ವರರು ತಮ್ಮ ಕುಟುಂಬ ಹಾಗೂ ಸಂಬಂಧಿಕರನ್ನು ತಮ್ಮ ವಿವಾಹಕ್ಕೆ ಕರೆದೊಯ್ಯಲು ಇಡೀ ವಿಮಾನವನ್ನೇ ಬುಕ್ ಮಾಡಿದ್ದಾರೆ. ಇದು ನಿಜಕ್ಕೂ ಅಚ್ಚರಿದಾಯಕ ಅಲ್ಲವೇ..? ಆದರೂ, ಇದು ನಿಜ. ಶ್ರೇಯಾ ಶಾ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ಸಂಬಂಧ ವಿಡಿಯೋ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ: Viral Video: ಪೊಲೀಸರು ಎಸೆದ ತರಕಾರಿ ಎತ್ತಿಕೊಳ್ಳಲು ಹೋಗಿ ರೈಲು ಅಪಘಾತದಲ್ಲಿ 2 ಕಾಲು ಕಳೆದುಕೊಂಡ ವ್ಯಾಪಾರಿ..!
ತನ್ನ ಸಹೋದರಿಯ ಮದುವೆಗೆ ಕುಟುಂಬ , ಸಂಬಂಧಿಕರನ್ನು ಕರೆದೊಯ್ಯಲು ಇಡೀ ವಿಮಾನವನ್ನೇ ಬುಕ್ ಮಾಡಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಇನ್ನು, ಈ ವಿಡಿಯೋದಲ್ಲಿ, ತನ್ನ ಕುಟುಂಬ ಹಾಗೂ ಸಂಬಂಧಿಕರು ವಿಮಾನದಲ್ಲಿ ಮೋಜು ಮಸ್ತಿ ಮಾಡುತ್ತಿರುವುದನ್ನು ಹಾಗೂ ಕೇಕೆ ಹಾಕುತ್ತಿರುವುದನ್ನು ಸಹ ವಿಡಿಯೋದಲ್ಲಿ ತೋರಿಸುತ್ತದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಈ ಮದುವೆ ನಡೆಯುತ್ತಿದೆ ಎಂದೂ ಶ್ರೇಯಾ ಶಾ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಇಕ್ಕಾ ಸಿಂಗ್ ಹಾಗೂ ಸುಖ್ಬೀರ್ ರಾಂಧವ ಅವರ ಓಹ್ ಹೋ ಹೋ ಎಂಬ ಹಾಡನ್ನು ಸಹ ಬಳಸಿಕೊಂಡಿದ್ದಾರೆ. ಲೆಟ್ಸ್ ರೋಲ್, ನಾವು ವಿವಾಹಕ್ಕೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದನ್ನು ಗೆಸ್ ಮಾಡಿ ಎಂಬ ಕ್ಯಾಪ್ಷನ್ ಅನ್ನು ಸಹ ಮಹಿಳೆ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, 9 ಲಕ್ಷ 87 ಸಾವಿರಕ್ಕೂ ಅಧಿಕ ಲೈಕ್ಸ್ ಅನ್ನೂ ಪಡೆದುಕೊಂಡಿದೆ.
ಇದನ್ನೂ ಓದಿ: ರಾ ರಾ ರಕ್ಕಮ್ಮ ಹಾಡಿಗೆ ಡಾನ್ಸ್‌ಪ್ಲೋರ್ ಚಿಂದಿಯಾಗುವಂತೆ ಕುಣಿದ ಮದುಮಗಳು.. ವೈರಲ್ ವಿಡಿಯೋ
ಕುಟುಂಬದ ಅಷ್ಟೊಂದು ಜನರನ್ನು ಒಂದೇ ವಿಮಾನದಲ್ಲಿ ನೋಡಿದ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಈ ಸಂಬಂಧ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದು, ನನ್ನ ಜೀವನದಲ್ಲಿ ನನಗೆ ಬೇಕಾಗಿರುವುದು ಈ ರೀತಿಯ ಹಣ ಎಂದು ಬರೆದಿದ್ದಾರೆ. ಹಗೂ, ಮತ್ತೊಬ್ಬರು, ಮದುವೆಗೆ ಪುರ್ತಿ ಪ್ಲೇನ್ ಅನ್ನೇ ಬುಕ್ ಮಾಡಲಾಗಿದೆ, ವೂ ಎಂದು ಬರೆದಿದ್ದಾರೆ.
ವಿಮಾನದಲ್ಲಿ ಕಿರಿಕಿರಿಯುಂಟುಮಾಡುವ ಮಕ್ಕಳಿಲ್ಲದಿರುವುದು ಹೇಗೆ? ಕಿರಿಕಿರಿಗೊಳಿಸುವ ಮಕ್ಕಳಿಲ್ಲದೆ ಮದುವೆಗಳು ಅಪೂರ್ಣವಾಗಿರುತ್ತವೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದರೆ ನಾನು ಬಡವ ಎಂದು ಅನಿಸುತ್ತದೆ ಎಮದೂ ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಮದುವೆಗೆ ಇಡೀ ವಿಮಾನವನ್ನೇ ಬುಕ್ ಮಾಡಿ ಪ್ರಯಾಣಿಸುತ್ತಿರುವುದು ನಿಜಕ್ಕೂ ಅಚ್ಚರಿದಾಯಕ ಅಲ್ಲವೇ..?
ಇದನ್ನೂ ಓದಿ: ಭೂರಿ ಭೋಜನವಿದು... ಆನೆಗೆ ಆಹಾರ ಹೇಗೆ ಸಿದ್ಧಪಡಿಸುತ್ತಾರೆ ಗೊತ್ತಾ? ವಿಡಿಯೋ