ಲೋಕಸಭೆಯಲ್ಲಿ ಬಂಗಾಳದಲ್ಲಿ ಬಿಜೆಪಿಗೆ 35 ಸ್ಥಾನ ಕೊಡಿ; ನಂತರ ಟಿಎಂಸಿ ಸರ್ಕಾರ ಉಳಿಯಲ್ಲ: ಅಮಿತ್ ಶಾ

By Kannadaprabha News  |  First Published Apr 15, 2023, 3:08 PM IST

ಪಶ್ಚಿಮ ಬಂಗಾಳದ ಬಿರ್‌ಭೂಮ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಬಂಗಾಳದಲ್ಲಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಇದಾದ ಬಳಿಕ ರಾಮನವಮಿ ಮೆರವಣಿಗೆಗಳ ಮೇಲೆ ದಾಳಿ ಮಾಡುವ ಧೈರ್ಯವನ್ನು ಯಾರೂ ತೋರಲಾರರು ಎಂದು ಹೇಳಿದ್ದಾರೆ.


ಕೋಲ್ಕತ್ತಾ (ಏಪ್ರಿಲ್ 15, 2023): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿ. ಆಗ 2025ರ ನಂತರ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ ಸರ್ಕಾರ ಉಳಿದುಕೊಳ್ಳುವುದಿಲ್ಲ. ಬಿಜೆಪಿಗರೇ ಮುಂದಿನ ಬಂಗಾಳ ಮುಖ್ಯಮಂತ್ರಿ ಆಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳದ (West Bengal) ಬಿರ್‌ಭೂಮ್‌ನಲ್ಲಿ (Birbhum) ರ‍್ಯಾಲಿಯನ್ನುದ್ದೇಶಿಸಿ (Rally) ಮಾತನಾಡಿದ ಅವರು, ಬಂಗಾಳದಲ್ಲಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ದೇಶದಲ್ಲಿ (Country) ಬಿಜೆಪಿ (BJP) ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಇದಾದ ಬಳಿಕ ರಾಮನವಮಿ (Ram Navami) ಮೆರವಣಿಗೆಗಳ ಮೇಲೆ ದಾಳಿ ಮಾಡುವ ಧೈರ್ಯವನ್ನು ಯಾರೂ ತೋರಲಾರರು ಎಂದು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಸೂಜಿಮೊನೆಯಷ್ಟು ಜಾಗವನ್ನೂ ಕಬಳಿಸಲಾಗದು: ಅರುಣಾಚಲ ಪ್ರದೇಶದಲ್ಲಿ ಚೀನಾ ವಿರುದ್ಧ ಅಮಿತ್‌ ಶಾ ಗುಡುಗು

ಇನ್ನು, ಜಾನುವಾರು ಕಳ್ಳಸಾಗಣೆ (Cattle Smuggling) ತನಿಖೆಗೆ ಸಂಬಂಧಿಸಿದಂತೆ ಆರೋಪಿ ಮೊಂಡಾಲ್‌ನನ್ನು ಜಾರಿ ನಿರ್ದೇಶನಾಲಯ (Enforcement Directorate) (ಇಡಿ) (ED) ಬಂಧಿಸಿದೆ. ಈ ಹಿನ್ನೆಲೆ ಬಿಜೆಪಿ ರಾಜಕೀಯವಾಗಿ ಆ ಕ್ಷೇತ್ರದಲ್ಲಿ ಅವರ ಅನುಪಸ್ಥಿತಿಯನ್ನು ಬಳಸಿಕೊಳ್ಳಲು ಯೋಜಿಸಿದೆ. "ದೀದಿ (ಮಮತಾ ಬ್ಯಾನರ್ಜಿ) ಮತ್ತು ಭಾತಿಜಾ (ಅಭಿಷೇಕ್ ಬ್ಯಾನರ್ಜಿ) ದುರಾಡಳಿತದಲ್ಲಿ ತೊಡಗಿದ್ದಾರೆ ಮತ್ತು ಏಕೈಕ ಪರ್ಯಾಯವೆಂದರೆ ಬಿಜೆಪಿ. ನಾವು ಗೋವು ಕಳ್ಳಸಾಗಾಣಿಕೆಯನ್ನು ನಿಲ್ಲಿಸಿದ್ದೇವೆ. ನಿಮಗೆ ಬಂಗಾಳದಲ್ಲಿ ನುಸುಳುವಿಕೆ ಬೇಕೇ? ಅದನ್ನು ತಡೆಯಲು ಬಿಜೆಪಿಗೆ ಮತ ಹಾಕುವುದು ಒಂದೇ ಮಾರ್ಗ, " ಎಂದು ಮೊಂಡಲ್ ಅವರ ತವರಲ್ಲಿ ನಡೆದ ರ‍್ಯಾಲಿಯಲ್ಲಿ ಅಮಿತ್‌ ಶಾ ಬಲವಾದ ಸಂದೇಶವನ್ನು ನೀಡಿದ್ದಾರೆ.

ಇತ್ತೀಚೆಗೆ ರಾಮನವಮಿ ಮೆರವಣಿಗೆ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿದ ಅಮಿತ್ ಶಾ, ಮುಖ್ಯಮಂತ್ರಿ (Chief Minister) ಮಮತಾ ಬ್ಯಾನರ್ಜಿ (Mamata Banerjee) ಆಡಳಿತವನ್ನು ಹಿಟ್ಲರ್‌ ಆಡಳಿತಕ್ಕೆ (Hitler Rule) ಹೋಲಿಸಿದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿಗೆ 35ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಿ. 2025ರ ಬಳಿಕ ಮಮತಾ ಬ್ಯಾನರ್ಜಿ ಅವರ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ ಎಂದು ಕೇಂದ್ರ ಗೃಹ ಸಚಿವ ಹೇಳಿದ್ದಾರೆ.

ಇದನ್ನೂ ಓದಿ: ಇವರು ವಿಭಿನ್ನ ಅಮಿತ್‌ ಶಾ: ಕೇಂದ್ರ ಗೃಹ ಸಚಿವರ ಭೇಟಿಯಾದ ಮುಸ್ಲಿಂ ನಾಯಕರ ಮೆಚ್ಚುಗೆ

ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯನನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮುಂದಿನ ಬಾರಿ ಬಿಜೆಪಿಯ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ರಾಜ್ಯದಲ್ಲಿ ಟಿಎಂಸಿ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಿಜೆಪಿಗೆ ಮಾತ್ರ ಸಾಧ್ಯ ಎಂದೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಇನ್ನೊಂದೆಡೆ, ಅಮಿತ್ ಶಾ ವಿರುದ್ಧ ಟಿಎಂಸಿ ಟೀಕೆ ಮಾಡಿದ್ದು, 2021 ರ ಚುನಾವಣೆಯ ನಂತರ ಪಕ್ಷವನ್ನು ಗುರಿಯಾಗಿಸಲು ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಸುತ್ತಿದೆ. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಅವರೇ ಹೈವೋಲ್ಟೇಜ್ ಪ್ರಚಾರವನ್ನು ನಡೆಸಿದರೂ ಬಿಜೆಪಿ ಸರ್ಕಾರವನ್ನು ರಚಿಸಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ಕೋಮು ಗಲಭೆಕೋರರಿಗೆ ತಲೆ ಕೆಳಗೆ ನೇತು ಹಾಕಿ ಶಿಕ್ಷೆ: ರಾಮನವಮಿ ಹಿಂಸಾಚಾರ ಬೆನ್ನಲ್ಲೇ ಅಮಿತ್ ಶಾ ಗುಡುಗು

ಅಲ್ಲದೆ, ಅಮಿತ್‌ ಶಾ  ಚುನಾವಣಾ ಸಮಯದಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ 'ಋತುವಿನ ಹಕ್ಕಿ' ಎಂದು ಟಿಎಂಸಿ ಕರೆದಿದೆ. ಹಾಗೂ, ದೆಹಲಿಗೆ ಹಿಂತಿರುಗಿ ನಿಮ್ಮ ಕೆಲಸವನ್ನು ಮಾಡಿ. ಇದರ ಹೊರತು ಕೆಲಸಕ್ಕೆ ಬರದ ಮಾತುಗಳನ್ನಾಡಬೇಡಿ ಎಂದು ಸಲಹೆ ನೀಡಿದೆ.
 

click me!