ಯೋಗಿ ಆಡಳಿತದಲ್ಲಿ 10,900 ಎನ್‌ಕೌಂಟರ್‌: 183 ಕ್ರಿಮಿನಲ್‌ಗಳ ಹತ್ಯೆ, 23,300 ಬಂಧನ

By Kannadaprabha News  |  First Published Apr 15, 2023, 9:08 AM IST

ಯೋಗಿ ಸರ್ಕಾರ ಬಂದ ಬಳಿಕ ಕ್ರಿಮಿನಲ್‌ಗಳ ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸುವುದು ಸೇರಿ ಕ್ರಿಮಿನಲ್‌ಗಳ ವಿರುದ್ಧ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗಿದೆ. 2017ರ ಮಾರ್ಚ್‌ನಿಂದ ಈವರೆಗೆ ರಾಜ್ಯದಲ್ಲಿ ಪೊಲೀಸರು ನಡೆಸಿದ ಒಟ್ಟು 10,900 ಎನ್‌ಕೌಂಟರ್‌ಗಳಲ್ಲಿ 23,300 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದ್ದು ಘಟನೆಗಳಲ್ಲಿ 5,046 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ. 


ಲಖನೌ (ಏಪ್ರಿಲ್ 15, 2023): ಉತ್ತರ ಪ್ರದೇಶದಲ್ಲಿ ಮುುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಧಿಕಾರ ವಹಿಸಿಕೊಂಡ 2017 ರಿಂದ ಈವರೆಗಿನ 6 ವರ್ಷದಲ್ಲಿ ಒಟ್ಟು 183 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ‘ರಾಜ್ಯದಲ್ಲಿ ಮಾಫಿಯಾವನ್ನು ಮಣ್ಣು ಮಾಡಲಾಗುವುದು’ ಎಂದು ಯೋಗಿ ಇತ್ತೀಚೆಗೆ ಹೇಳಿದ್ದರು. ಇದಾದ ಕೆಲ ದಿನಗಳಲ್ಲೇ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ಪುತ್ರನ ಎನ್‌ಕೌಂಟರ್‌ ಗುರುವಾರ ನಡೆದಿತ್ತು. ಇದರ ಬೆನ್ನಲ್ಲೇ ಈ ಅಂಕಿ ಅಂಶ ಲಭಿಸಿದೆ.

ಯೋಗಿ ಸರ್ಕಾರ (Yogi Adityanath Government) ಬಂದ ಬಳಿಕ ಕ್ರಿಮಿನಲ್‌ಗಳ (Criminals) ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸುವುದು ಸೇರಿ ಕ್ರಿಮಿನಲ್‌ಗಳ ವಿರುದ್ಧ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗಿದೆ. 2017ರ ಮಾರ್ಚ್‌ನಿಂದ ಈವರೆಗೆ ರಾಜ್ಯದಲ್ಲಿ ಪೊಲೀಸರು (Police) ನಡೆಸಿದ ಒಟ್ಟು 10,900 ಎನ್‌ಕೌಂಟರ್‌ಗಳಲ್ಲಿ (Encounters) 23,300 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದ್ದು (Arrest) ಘಟನೆಗಳಲ್ಲಿ 5,046 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ (Injured). 

Tap to resize

Latest Videos

ಇದನ್ನು ಓದಿ: ಗ್ಯಾಂಗ್‌ಸ್ಟರ್ ಪುತ್ರನ ಎನ್‌ಕೌಂಟರ್ ಬಳಿಕ ಮತ್ತೆ ವೈರಲ್ ಆಗ್ತಿದೆ ಯೋಗಿ ಅಂದು ಸದನದಲ್ಲಿ ನೀಡಿದ ಹೇಳಿಕೆ

ಇನ್ನು 1,443 ಪೊಲೀಸರು ಕೂಡ ಗಾಯಗೊಂಡಿದ್ದು, ಒಟ್ಟು 13 ಜನ ಪೊಲೀಸ್‌ ಸಿಬ್ಬಂದಿ (Police Staff) ಮೃತಪಟ್ಟಿದ್ದಾರೆ. ಹಾಗೂ ಬುಧವಾರ ಎನ್‌ಕೌಂಟರ್‌ಗೆ ಬಲಿಯಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ (Atiq Ahmed) ಪುತ್ರ ಅಸದ್‌ ಸೇರಿ ಒಟ್ಟು 183 ಕ್ರಿಮಿನಲ್‌ಗಳು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಾರ್ಚ್ 2017 ರಿಂದ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟ 13 ಪೊಲೀಸರ ಪೈಕಿ ಕಾನ್ಪುರದಲ್ಲಿ ದಾಳಿಗೆ ಬಲಿಯಾದ 8 ಪೊಲೀಸರು ಸೇರಿದ್ದಾರೆ. ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಯ ಸಹಾಯಕರು ಹೊಂಚು ಹಾಕಿ ಈ ದಾಳಿ ನಡೆಸಿದ್ದರು. ಮಧ್ಯಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶಕ್ಕೆ ಗ್ಯಾಂಗ್‌ಸ್ಟರ್‌ನನ್ನು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಿಕಾಸ್‌ ದುಬೆ ಅವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಈ ವೇಳೆ ವಿಕಾಸ್‌ ದುಬೆ ಅವರ ವಾಹನ ಪಲ್ಟಿಯಾಗಿದೆ ಮತ್ತು ಅವರು ಪೊಲೀಸ್ ಬಂದೂಕನ್ನು ಕಸಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಆದರೆ ಇವುಗಳು ನಕಲಿ ಎನ್‌ಕೌಂಟರ್‌ಗಳಾಗಿದ್ದು (Fake Encounters) ಈ ಕುರಿತು ಉನ್ನತ ತನಿಖೆ ನಡೆಯಬೇಕು ಎಂಬ ವಿಪಕ್ಷಗಳ (Opposition) ಆರೋಪವನ್ನು ಪೊಲೀಸ್‌ ಹಾಗೂ ಯೋಗಿ ಸರ್ಕಾರ ತಳ್ಳಿ ಹಾಕಿವೆ.

ಇದನ್ನೂ ಓದಿ: ಎನ್‌ಕೌಂಟರ್: ಪುತ್ರನ ನನೆದು ಕೋರ್ಟ್‌ನಲ್ಲೇ ಗಳಗಳನೇ ಅತ್ತ ಗ್ಯಾಂಗ್‌ಸ್ಟಾರ್ ಅತೀಕ್

ಗುರುವಾರ ಝಾನ್ಸಿಯಲ್ಲಿ ಅಸಾದ್ ಮತ್ತು ಸಹಾಯಕ ಗುಲಾಮ್ ಅವರನ್ನು ಗುಂಡಿಕ್ಕಿ ಕೊಂದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಈ ಎನ್‌ಕೌಂಟರ್‌ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. 2005 ರಲ್ಲಿ ಆಗಿನ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಅವರ ಇಬ್ಬರು ಭದ್ರತಾ ಸಿಬ್ಬಂದಿಯ ಹಗಲು ಹತ್ಯೆಗೆ ಅಸಾದ್ ಮತ್ತು ಗುಲಾಮ್ ಇಬ್ಬರೂ ಪೊಲೀಸರಿಗೆ ಬೇಕಾಗಿದ್ದರು.

ಝಾನ್ಸಿಯಲ್ಲಿ ಅವರ ಹತ್ಯೆಯಾದ ಗಂಟೆಗಳ ನಂತರ, ಅಖಿಲೇಶ್‌ ಯಾದವ್ ಅವರು ಪೊಲೀಸ್ ಎನ್‌ಕೌಂಟರ್ "ನಕಲಿ" ಎಂದು ಸೂಚಿಸಿದರು. ಬಳಿಕ, ಮಾಯಾವತಿ ಕೂಡ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ನಡುಗಿದ ಮಾಫಿಯಾ, ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಪುತ್ರನ ಎನ್‌ಕೌಂಟರ್!

click me!