ಸಿಬಿಐಗೆ ಹಿನ್ನೆಡೆ: ಪಿಎನ್‌ಬಿ ವಂಚಕ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಆಂಟಿಗುವಾ ಕೋರ್ಟ್‌ ತಡೆ

By BK Ashwin  |  First Published Apr 15, 2023, 9:46 AM IST

ಏಪ್ರಿಲ್ 14 ರಂದು ಈ ಸಂಬಂಧ ತೀರ್ಪು ನೀಡಿದ ಅಲ್ಲಿನ ನ್ಯಾಯಾಲಯ ಮೆಹುಲ್ ಚೋಕ್ಸಿಯನ್ನು ಆಂಟಿಗುವಾ ಮತ್ತು ಬಾರ್ಬುಡಾದಿಂದ ಹಸ್ತಾಂತರಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.


ರೋಸೌ (ಏಪ್ರಿಲ್ 15, 2023): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,000 ಕೋಟಿ ರೂ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ, ವಜ್ರ ವ್ಯಾಪಾರಿ ಹಾಗೂ ಭಾರತಕ್ಕೆ ಬೇಕಾಗಿರುವ ಮೆಹುಲ್‌ ಚೋಕ್ಸಿ ಹೆಸರನ್ನು ಇತ್ತೀಚೆಗಷ್ಟೇ ಇಂಟರ್‌ಪೋಲ್‌ ತನ್ನ ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ಕೈಬಿಟ್ಟಿತ್ತು. ಇದೀಗ, ಭಾರತದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಮತ್ತಷ್ಟು ಹಿನ್ನೆಡೆಯಾಗಿದ್ದು,  ಆಂಟಿಗುವಾ ಮತ್ತು ಬಾರ್ಬುಡಾ ಹೈಕೋರ್ಟ್ ಮೆಹುಲ್‌ ಚೌಕ್ಸಿ ಪರವಾಗಿ ತೀರ್ಪು ನೀಡಿದೆ. 

ಏಪ್ರಿಲ್ 14 ರಂದು ಈ ಸಂಬಂಧ ತೀರ್ಪು ನೀಡಿದ ಅಲ್ಲಿನ ನ್ಯಾಯಾಲಯ ಮೆಹುಲ್ ಚೋಕ್ಸಿಯನ್ನು (Mehul Choksi) ಆಂಟಿಗುವಾ ಮತ್ತು ಬಾರ್ಬುಡಾದಿಂದ (Antigua and Barbuda) ಹಸ್ತಾಂತರಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ವಂಚನೆಯ ಕೇಸ್‌ ಬಗ್ಗೆ ಪ್ರತಿವಾದಿಗಳಾದ ಆಂಟಿಗುವಾದ (Antigua) ಅಟಾರ್ನಿ ಜನರಲ್ ಮತ್ತು ಪೊಲೀಸ್ ಮುಖ್ಯಸ್ಥರು ಸಹ ಸಮಗ್ರ ತನಿಖೆ ನಡೆಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಮೆಹುಲ್ ಚೋಕ್ಸಿ ತನ್ನ ಸಿವಿಲ್ ಮೊಕದ್ದಮೆಯಲ್ಲಿ ವಾದಿಸಿದ್ದಾರೆ ಎಂದು ಡೊಮಿನಿಕಾ (Dominica) ಮೂಲದ ನೇಚರ್ ಐಲ್ ನ್ಯೂಸ್ ವರದಿ ಮಾಡಿದೆ.

Tap to resize

Latest Videos

ಇದನ್ನು ಓದಿ: ಪಿಎನ್‌ಬಿ ವಂಚಕ ಚೋಕ್ಸಿ ಇಂಟರ್‌ಪೋಲ್‌ ಲಿಸ್ಟಿಂದ ಹೊರಕ್ಕೆ: ಭಾರತ ಆಕ್ಷೇಪ

ಫಿರ್ಯಾದಿಯು ಅಮಾನವೀಯ ಅಥವಾ ಅವಮಾನಕರವಾದ ಚಿಕಿತ್ಸೆ ಅಥವಾ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಮೆಹುಲ್ ಚೋಕ್ಸಿ ವಾದ ಮಾಡಿರುವುದು ಮಾನ್ಯವಾಗಿದೆ ಎಂದು ಆತನ ಪರ ವಕೀಲರು ಸಹ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.  ಮೆಹುಲ್‌ ಚೋಕ್ಸಿ ತಮ್ಮ ಮೇಲಿನ ಆರೋಪಗಳ ಕುರಿತು ತನಿಖೆಗೆ ವಿನಂತಿಸಿದ್ದಾರೆ ಮತ್ತು "ಮೇ 23, 2021 ರ ಸುಮಾರಿಗೆ ಆಂಟಿಗುವಾ ಮತ್ತು ಬಾರ್ಬುಡಾದಿಂದ ಬಲವಂತವಾಗಿ ಗಡೀಪಾರು ಮಾಡಿದ ಸುತ್ತಲಿನ ಘಟನೆಗಳ ಬಗ್ಗೆ ಸಮಯೋಚಿತ ಮತ್ತು ಸಮಗ್ರ ತನಿಖೆಗೆ ಅವರ ಅರ್ಹತೆಯನ್ನು ಪ್ರತಿಪಾದಿಸುವ ಘೋಷಣೆಯ ರೂಪದಲ್ಲಿ ಪರಿಹಾರವನ್ನು ಕೋರಿದ್ದಾರೆ ಎಂದೂ ಅವರ ಪರ ವಕೀಲರು ತಿಳಿಸಿದ್ದಾರೆ. 

ಇದಕ್ಕೂ ಮುನ್ನ ಮಾರ್ಚ್ 21 ರಂದು ಕೇಂದ್ರೀಯ ತನಿಖಾ ದಳ (Central Bureau of Investigation) (ಸಿಬಿಐ) (CBI) ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿತ್ತು. ಇನ್ನು, ಇಂಟರ್‌ಪೋಲ್ (Interpol) ಹಲವು ಸಂದರ್ಭಗಳಲ್ಲಿ ಮೆಹುಲ್‌ ಚೋಕ್ಸಿಯ ಮನವಿಯನ್ನು ವಜಾಗೊಳಿಸಿತ್ತು.

ಇದನ್ನೂ ಓದಿ: ಸಿಬಿಐಗೆ ಹಿನ್ನೆಡೆ: ಪಿಎನ್‌ಬಿ ವಂಚಕ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಆಂಟಿಗುವಾ ಕೋರ್ಟ್‌ ತಡೆ

ಫೆಬ್ರವರಿ 15, 2018 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆಗಾಗಿ ಮೆಹುಲ್ ಚೋಕ್ಸಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಬಿಐ ಈಗಾಗಲೇ ಮೆಹುಲ್‌ ಚೋಕ್ಸಿ ಮತ್ತು ಇತರರ ವಿರುದ್ಧ ಸೆಕ್ಷನ್ 120-ಬಿ,  409, 420, 477 ಎ, 201 ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಹಾಗೂ 13(2) 13(1)(ಸಿ)&(ಡಿ) ಅಡಿಯಲ್ಲಿ ಎರಡು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ. 2022 ರಲ್ಲಿ, ಸಿಬಿಐ ಚೋಕ್ಸಿ ಮತ್ತು ಇತರರ ವಿರುದ್ಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ವಂಚಿಸಿದ ಐದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ.

ಈ ನಡುವೆ, ಕಳೆದ ತಿಂಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13,000 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ, ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ ಹೆಸರನ್ನು ಇಂಟರ್‌ಪೋಲ್‌ ತನ್ನ ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ಕೈಬಿಟ್ಟಿತ್ತು. ಇಂಟರ್‌ಪೋಲ್‌ನ ಈ ಕ್ರಮಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.  ಪಿಎನ್‌ಬಿ ವಂಚನೆ ಬೆಳಕಿಗೆ ಬರುವ ಮುನ್ನ ಚೋಕ್ಸಿ ವಿದೇಶಕ್ಕೆ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಭಾರತದ ಕೋರಿಕೆ ಅನ್ವಯ 2018ರ ಡಿಸೆಂಬರ್‌ನಲ್ಲಿ ಆತನ ವಿರುದ್ಧ ಇಂಟರ್‌ಪೋಲ್‌ ಅರೆಸ್ಟ್‌ ವಾರಂಟ್‌ ಜಾರಿ ಮಾಡಿತ್ತು.

ಕಳೆದ ವರ್ಷ ಆ್ಯಂಟಿಗುವಾದಿಂದ ಡೊಮಿನಿಕಾ ದೇಶಕ್ಕೆ ಮೆಹುಲ್‌ ಚೋಕ್ಸಿಯನ್ನು ಅಪಹರಿಸಲಾಗಿತ್ತು. ಇದರ ಉದ್ದೇಶ ಆತನನ್ನು ಭಾರತಕ್ಕೆ ಗಡಿಪಾರು ಮಾಡುವುದಾಗಿರಬಹುದು. ಹೀಗಾದಲ್ಲಿ ಭಾರತದಲ್ಲಿ ಆತನ ವಿರುದ್ಧ ನ್ಯಾಯಸಮ್ಮತ ವಿಚಾರಣೆ ಕಷ್ಟ ಎಂದು ಮೆಹುಲ್‌ ಚೋಕ್ಸಿ ಇಂಟರ್‌ಪೋಲ್‌ಗೆ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ್ದ ಇಂಟರ್‌ಪೋಲ್‌ ಇದೀಗ ಮೆಹುಲ್‌ ಚೋಕ್ಸಿ ಹೆಸರನ್ನು ಕೈಬಿಟ್ಟಿದೆ.

click me!