ಗೀತಾ ಪ್ರೆಸ್‌ ಪ್ರಶಸ್ತಿ ವಿವಾದ: ಗಾಂಧಿ ಸರ್‌ನೇಮ್‌ ಇದ್ದ ಕೂಡಲೇ ಮಹಾತ್ಮ ಆಗಲ್ಲ; ಕಾಂಗ್ರೆಸ್‌ ಹಿಂದೂ ವಿರೋಧಿ ಎಂದ ಬಿಜೆಪಿ

By BK Ashwin  |  First Published Jun 20, 2023, 12:58 PM IST

ಮುಸ್ಲಿಂ ಲೀಗ್‌ ಅನ್ನು ಕಾಂಗ್ರೆಸ್‌ ಜಾತ್ಯಾತೀತ ಪಕ್ಷ ಎನ್ನುತ್ತೆ. ಆದರೆ, ಗೀತಾ ಪ್ರೆಸ್‌ ಜಾತ್ಯಾತೀತವಲ್ಲವೇ ಎಂದು ಬಿಜೆಪಿ ಕೈ ಪಕ್ಷವನ್ನು ಪ್ರಶ್ನೆ ಮಾಡಿದೆ. ಅಲ್ಲದೆ ಗಾಂಧಿ ಸರ್‌ನೇಮ್‌ ಅನ್ನು ಇಟ್ಟುಕೊಂಡ ಕೂಡಲೇ ಮಹಾತ್ಮನಾಗಲ್ಲ ಎಂದೂ ವ್ಯಂಗ್ಯವಾಡಿದೆ.  


ನವದೆಹಲಿ (ಜೂನ್ 20, 2023): ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವ ಸಂಬಂಧ ಕಾಂಗ್ರೆಸ್‌ ಟೀಕೆಯ ವಿರುದ್ಧ ಬಿಜೆಪಿ ಸುದ್ದಿಗೋಷ್ಠಿ ನಡೆಸಿದ್ದು, ಕೈ ಪಕ್ಷದ ವಿರುದ್ಧ ಹರಿಹಾಯ್ದಿದೆ. ಸೆಂಗೋಲ್ ವಿರೋಧಿಸಿದ್ದ ಕಾಂಗ್ರೆಸ್‌ ಈಗ ಗೀತಾ ಪ್ರೆಸ್‌ ವಿರೋಧಿಸುತ್ತಿದೆ. ಈ ಮೂಲಕ ಕಾಂಗ್ರೆಸ್‌ ಪಕ್ಷ ಸನಾತನ ಹಾಗೂ ಹಿಂದೂ ಧರ್ಮ ವಿರೋಧಿಯಾಗಿದೆ ಎಂದು ಬಿಜೆಪಿ ಟೀಕೆ ಮಾಡಿದೆ. ಅಲ್ಲದೆ, ಭಾರತೀಯ ಮೌಲ್ಯಗಳ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದೂ ಟೀಕಿಸಿದೆ.

ಮುಸ್ಲಿಂ ಲೀಗ್‌ (IUML) ಅನ್ನು ಜಾತ್ಯಾತೀತ ಅನ್ನೋ ಕಾಂಗ್ರೆಸ್, ಆರ್‌ಎಸ್‌ಎಸ್‌ ಅನ್ನು ಕೋಮುವಾದಿ ಎನ್ನುತ್ತೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದ್ದಿಗೋಷ್ಠಿಯಲ್ಲಿ ಟೀಕೆ ಮಾಡಿದ್ದಾರೆ. ಇನ್ನು, ಗಾಂಧಿ ಸರ್‌ನೇಮ್‌ ಇಟ್ಟುಕೊಂಡ ಕೂಡಲೇ ಮಹಾತ್ಮ ಆಗಲ್ಲ. ಕಾಂಗ್ರೆಸ್‌ ನಿಜವಾಗಿಯೂ ಮಹಾತ್ಮನ ಮೌಲ್ಯಗಳನ್ನು ಪಾಲಿಸುತ್ತದೆಯೇ ಎಂದೂ ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಪರೋಕ್ಷ ವ್ಯಂಗ್ಯವಾಡಿದೆ. 

Tap to resize

Latest Videos

ಇದನ್ನು ಓದಿ: ಗೀತಾ ಪ್ರೆಸ್‌ಗೆ 'ಶಾಂತಿ' ಪ್ರಶಸ್ತಿ ಕಾಂಗ್ರೆಸ್‌ನಲ್ಲೇ ಭಿನ್ನ ನಿಲುವು, ನಮಗೆ ಹಣ ಬೇಡ, ಪ್ರಮಾಣಪತ್ರವಷ್ಟೇ ಸಾಕು ಎಂದ ಸಂಸ್ಥೆ!

ಇನ್ನೊಂದೆಡೆ, ವಿಜ್ಞಾನಿಗಳು ಸಹ ಭಗವದ್ಗೀತೆಯನ್ನು ಉಲ್ಲೇಖಿಸುತ್ತಾರೆ. ಅದರೆ ಕಾಂಗ್ರೆಸ್‌ ಮಾತ್ರ ಹಿಂದೂ ಹಾಘು ಭಾರತೀಯ ಮೌಲ್ಯಗಳ ವಿರೋಧಿಯಾಗಿದೆ ಎಂದೂ ಟೀಕೆ ಮಾಡಿದ್ದಾರೆ. ಹಾಗೂ, ಗೀತಾ ಪ್ರೆಸ್‌ ಮಹಾತ್ಮ ಗಾಂಧಿಯ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಎಂದೂ ಈ ಸಂಸ್ಥೆಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದನ್ನು ಕೇಸರಿ ಪಕ್ಷ ಸಮರ್ಥಿಸಿಕೊಂಡಿದೆ. 

ಜೈರಾಮ್‌ ರಮೇಶ್‌ಗೆ ಭಗವದ್ಗೀತೆ ಪ್ರತಿ ಕಳಿಸಿದ ಬಿಜೆಪಿ ವಕ್ತಾರ

ಹಿಂದೂ ಧಾರ್ಮಿಕ ಗ್ರಂಥಗಳ ವಿಶ್ವದ ಅತಿದೊಡ್ಡ ಪ್ರಕಾಶಕ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡುವುದರ ಕುರಿತು ಗದ್ದಲವೆದ್ದಿದೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ನಿವಾಸಕ್ಕೆ ಭಗವದ್ಗೀತೆಯ ಪ್ರತಿಯನ್ನು ಕೊರಿಯರ್ ಮಾಡಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ಭಗವದ್ಗೀತೆ ಪ್ರತಿ ಮುದ್ರಿಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ: ಕಾಂಗ್ರೆಸ್ ಆಕ್ರೋಶ

ಅಹಿಂಸಾತ್ಮಕ ಮತ್ತು ಇತರ ಗಾಂಧಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಸಂಸ್ಥೆಯ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿದ ನಂತರ 2021 ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಭಾನುವಾರ (ಜೂನ್ 18) ಗೀತಾ ಪ್ರೆಸ್‌ಗೆ ನೀಡಿತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲು ಸರ್ವಾನುಮತದಿಂದ ನಿರ್ಧರಿಸಿದ ನಂತರ ಕಾಂಗ್ರೆಸ್ ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದೆ. ಪ್ರಕಾಶನ ಸಂಸ್ಥೆಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡುವುದು ವಿಡಿ ಸಾವರ್ಕರ್ ಮತ್ತು ನಾಥೂರಾಂ ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟೀಕೆಗೆ ಹರಿಹಾಯ್ದಿದೆ. 

ಇದನ್ನೂ ಓದಿ: ದೇಶಾದ್ಯಂತ ಹವಾಮಾನ ವೈಪರೀತ್ಯ: ಯುಪಿ, ಬಿಹಾರದಲ್ಲಿ ಬಿಸಿಗಾಳಿಗೆ 100 ಕ್ಕೂ ಅಧಿಕ ಮಂದಿ ಬಲಿ, ಹಲವೆಡೆ ಭೀಕರ ಮಳೆ

ಕಾಂಗ್ರೆಸ್‌ಗೆ ಗೀತಾ ಸಮಸ್ಯೆ
ಗೀತಾ ಪ್ರೆಸ್‌ಗೆ ಪ್ರಶಸ್ತಿಯನ್ನು ವಿರೋಧಿಸಿ ಕಾಂಗ್ರೆಸ್ ಪ್ರಚಾರ ಮಾಡಿದ ನಂತರ, ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ಅದನ್ನು ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಈ ಬಗ್ಗೆ ಮಾತನಾಡಿ, "ಕಾಂಗ್ರೆಸ್‌ಗೆ ಭಗವದ್ಗೀತೆ ಅಂದ್ರೆ ಸಮಸ್ಯೆ. ಹಾಗಾಗಿ ಅವರಿಗೆ ಗೀತಾ ಪ್ರೆಸ್‌ನಿಂದ ಸಮಸ್ಯೆ ಇದೆ. ಗೋವಿಂದ್ ಬಲ್ಲಭ್ ಪಂತ್ ಅವರೇ ಗೀತಾ ಪ್ರೆಸ್‌ನ ಸಂಸ್ಥಾಪಕ ಪೊದ್ದರ್ ಅವರನ್ನು ಭಾರತ ರತ್ನಕ್ಕೆ ನಾಮನಿರ್ದೇಶನ ಮಾಡಿದ್ದರು. ಅವರು ಅಸ್ಪೃಶ್ಯತೆಗೆ ವಿರುದ್ಧವಾಗಿದ್ದರು ಮತ್ತು ಬಹುಶಃ ಅದಕ್ಕಾಗಿಯೇ ಕಾಂಗ್ರೆಸ್‌ಗೆ ಸಮಸ್ಯೆ ಇದೆ’’ ಎಂದೂ ಬಿಜೆಪಿ ಟೀಕೆ ಮಾಡಿದೆ. 

 

click me!