
ಭೋಪಾಲ್: ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳ ಹಾವಳಿ ಮಿತಿ ಮೀರಿದ್ದು, ಸಿಕ್ಕಿದಲ್ಲೆಲ್ಲಾ ಡಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಯುವತಿಯೊಬ್ಬಳು ದೇಗುಲದ ಮುಂದೆ ಬಾಲಿವುಡ್ ಸಿನಿಮಾ ಹಾಡೊಂದಕ್ಕೆ ನೃತ್ಯ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಳು. ಈ ಘಟನೆ ಮಾಸುವ ಮುನ್ನವೇ ಈಗ ಇನ್ನೊಬ್ಬ ಯುವತಿ ದೇಗುಲದ ಮುಂದೆ ಡಾನ್ಸ್ ಮಾಡಿ ವಿವಾದ ಸೃಷ್ಟಿಸಿದ್ದಾಳೆ. ಈ ಬಗ್ಗೆ ತನಿಖೆ ನಡೆಸುವಂತೆ ಮಧ್ಯಪ್ರದೇಶದ ಸಚಿವರು ಆದೇಶಿಸಿದ್ದಾರೆ.
ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯ (Ujjain) ಮಹಾಕಾಲ ದೇಗುಲದ ಮುಂದೆ ಯುವತಿ ಹಾಡೊಂದಕ್ಕೆ ನರ್ತಿಸಿದ್ದಾಳೆ. ಈ ಬಗ್ಗೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ತನಿಖೆಗೆ ಆದೇಶಿಸಿದ್ದಾರೆ. ಡಾನ್ಸ್ ಮಾಡಿದ ಯುವತಿಯ ಹೆಸರು ಪತ್ತೆಯಾಗಿಲ್ಲ. ಆದರೆ ಇನ್ಸ್ಟಾಗ್ರಾಮ್ ರೀಲ್ಸ್‌ಗಾಗಿ ಈಕೆ ಬಾಲಿವುಡ್‌ನ ಹಲವು ಹಾಡುಗಳ ಸಂಯೋಜನೆಯ ರಿಮಿಕ್ಸ್‌ಗೆ ನರ್ತಿಸಿದ್ದಾಳೆ. ಮಹಾಕಾಲ ದೇಗುಲದ ಗರ್ಭಗುಡಿ ಮುಂದೆ ಈಕೆ ನರ್ತಿಸಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ(Narottam Mishra), ಈ ಬಗ್ಗೆ ತನಿಖೆ ನಡೆಸುವಂತೆ ನಾನು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರಿಗೆ ಆದೇಶಿಸಿದ್ದೇನೆ. ಧಾರ್ಮಿಕ ನಂಬಿಕೆಗಳ ಜೊತೆ ಚೆಲ್ಲಾಟವಾಡುವುದಕ್ಕ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ
ಮಹಾಕಾಲ ದೇಗುಲದ (Mahakal temple) ಗರ್ಭಗುಡಿಯಲ್ಲಿ (sanctum) ಶಿವನಿಗೆ ಜಲಾಭಿಷೇಕವಾಗುತ್ತಿದ್ದರೆ (Jalabhishek), ಹೊರಗೆ ಯುವತಿ ಸುತ್ತಲೂ ತಿರುಗುತ್ತಾ ಡಾನ್ಸ್ ಮಾಡುತ್ತಿದ್ದಳು. ಯುವತಿಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಹಾಕಾಲ ದೇಗುಲದ ಪುರೋಹಿತರು ಯುವತಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಈ ವಿಡಿಯೋ ಅವಹೇಳನಕಾರಿಯಾಗಿದ್ದು, ಸನಾತನ ಧರ್ಮಕ್ಕೆ ವಿರುದ್ಧವಾಗಿದೆ. ಈ ವಿಡಿಯೋ ದೇವಸ್ಥಾನದ ಪಾವಿತ್ರ್ಯತೆಯನ್ನು (sanctity) ಹಾಳು ಮಾಡಿದೆ. ಮಹಾಕಾಲ ದೇವಸ್ಥಾನದ ನೌಕರರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಪುರೋಹಿತರು ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯಿಸಿದ್ದಾರೆ.
Viral Video: ಊ ಅಂಟಾವ ಹಾಡಿಗೆ ಸಿರೆಯುಟ್ಟ ಯುವತಿಯರ ಮಸ್ತ್ ಡಾನ್ಸ್
ಹರ್ ಕೀ ಪೌರಿಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ಗಳ ಹಾವಳಿ
ಕೆಲ ದಿನಗಳ ಹಿಂದೆ ಹಿಂದೂ ಪವಿತ್ರ ತೀರ್ಥಕ್ಷೇತ್ರವಾದ ಹರಿದ್ವಾರದ (Haridwar) ಹರ್ ಕಿ ಪೌರಿಯಲ್ಲಿ ( Har Ki Pauri) ಯುವ ಸಮೂಹವೊಂದು ಈ ಕಾಲಾ ಚಸ್ಮಾ(Kala Chashma) ಹಾಡಿಗೆ ಕುಣಿಯುತ್ತಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಪವಿತ್ರ ಕ್ಷೇತ್ರದಲ್ಲಿ ಯುವಕ ಯುವತಿಯರಿರುವ ತಂಡ ಇನ್ಸ್ಟಾಗ್ರಾಮ್(Instagram) ರೀಲ್ ಮಾಡುವುದಕ್ಕೋಸ್ಕರ ಈ ಹಾಡಿಗೆ ಇಲ್ಲಿ ಕಾಲು ಕುಣಿಸಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಹರಿದ್ವಾರ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಬಗ್ಗೆ ಸೂರ್ ಗೋಸ್ವಾಮಿ ಎಂಬುವವರು ಟ್ವಿಟ್ ಮಾಡಿದ್ದು, ದೇಗುಲದ ಆವರಣದಲ್ಲಿ(temple premises) ಕ್ಯಾಮರಾ (Camera) ಹಾಗೂ ಮೊಬೈಲ್ ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು.
ಟ್ವಿಟ್ಟರ್ ಬಳಕೆದಾರರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ನೀವು ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ (Tourist places) ಬದಲಾಯಿಸಿದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದರು. ಕಾಶಿಯಲ್ಲಿ ಕೆಲವು ರೀತಿಯ ಸಂಸ್ಕೃತಿಯ ಅವನತಿ ನಡೆಯುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾವೇ ಹಿಂದೂ ಧರ್ಮವಲ್ಲ, ಅದೊಂದು ಜೀವನ ಪದ್ಧತಿ ಇದರಂತೆ ಯಾರೂ ತಮಗಿಷ್ಟ ಬಂದಂತೆ ಏನೂ ಬೇಕಾದರೂ ಮಾಡಬಹುದು ಎಂದು ಹೇಳುತ್ತಾ ಹಿಂದೂ ಧರ್ಮವನ್ನು (Hinduism) ಅವನತಿಯತ್ತ ಕೊಂಡೊಯ್ಯುತ್ತಿರುವುದರಿಂದ ಈ ವಿಪರ್ಯಾಸಗಳು ನಡೆಯುತ್ತಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ