ಸಂಬಳ ಡ್ರಾ ಮಾಡಿ ATM ಒಳಗೆ ತಕತಕ ಕುಣಿದ ಹುಡುಗಿ: ಖುಷಿ ನೋಡಿ

Published : Oct 10, 2021, 05:41 PM ISTUpdated : Oct 10, 2021, 05:53 PM IST
ಸಂಬಳ ಡ್ರಾ ಮಾಡಿ ATM ಒಳಗೆ ತಕತಕ ಕುಣಿದ ಹುಡುಗಿ: ಖುಷಿ ನೋಡಿ

ಸಾರಾಂಶ

ಸಂಬಳ ಬಂದಾಗ ಎಷ್ಟು ಖುಷಿಯಾಗುತ್ತೆ ಅಲ್ವಾ ? ನಿಮಗೆ ಖುಷಿಯಾಗುತ್ತೋ ಇಲ್ವೋ.. ಈ ಹುಡುಗಿಯ ಖುಷಿಯನ್ನೊಮ್ಮೆ ನೋಡಿ, ಪಕ್ಕಾ ಖುಷಿಯಾಗ್ತೀರಿ

ತಿಂಗಳು ಪೂರ್ತಿ ಕೆಲಸ ಮಾಡಿ ತಿಂಗಳ ಕೊನೆಯಲ್ಲಿ ಸಂಬಳ ಬಂದಾಗ ಎಷ್ಟು ಖುಷಿಯಾಗುತ್ತೆ ಅಲ್ವಾ? ಸಂಬಳ ಕಡಿಮೆ ಇರಲಿ, ಹೆಚ್ಚಿರಲಿ. ಆ ಮೊತ್ತಕ್ಕಾಗಿ ತಿಂಗಳು ಪೂರ್ತಿ ಕಾಯುತ್ತೀರಿ. ಒಂದಷ್ಟು ಅತ್ಯಗತ್ಯಗಳು, ಬಿಲ್‌ಗಳು, ಆ ಹಣದಿಂದ ಮುಗಿಯುವ ಸಮಸ್ಯೆಗಳು ಹೀಗೆ ಸಾಲು ದೊಡ್ಡದಿರುತ್ತದೆ. ಅಂತೂ ಸಂಬಳ ಬಂದಾಗ ಖುಷಿಯಾಗೋದು ಪಕ್ಕಾ.

ಸಂಬಳವನ್ನು ಎಟಿಎಂನಿಂದ(ATM) ಡ್ರಾ ಮಾಡಿದ ಹುಡುಗಿಯೊಬ್ಬಳು ಫುಲ್ ಖುಷ್ ಆಗಿದ್ದಾಳೆ. ಎಷ್ಟು ಖುಷಿ ಎಂದರೆ ಹಣ ಡ್ರಾ ಮಾಡಿ ಖುಷಿ ತಡೆಯಲಾರದೆ ಎಟಿಎಂ ಮೆಷಿನ್ ಒಳಗೆಯೇ ತಕ ತಕ ಎಂದು ಕುಣಿದುಬಿಟ್ಟಿದ್ದಾಳೆ.

1 ಕ್ವಾರ್ಟರ್‌ ಅಂದ್ರೆ ಎಷ್ಟು? ಟೀಚರ್‌ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ!

ಎಟಿಎಂನಿಂದ ಹಣ ತೆಗೆಯುವಾಗ ಒಂದು ಹುಡುಗಿ ಅನಿಯಂತ್ರಿತವಾಗಿ, ತನ್ನ ಖುಷಿಯನ್ನು ಕಂಟ್ರೋಲ್ ಮಾಡಲಾಗದೆ ಡ್ಯಾನ್ಸ್(Dance) ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು 'ಘಂಟಾ' ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಅದರ ಮೇಲೆ ಈ ಒಂದು ಸಾಲನ್ನೂ ಬರೆಯಲಾಗಿದೆ. ಸಂಬಳ ಸಿಗೋ ಖುಷಿ ನೋಡಿ ಎಂದು ಬರೆಯಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ 12 ಲಕ್ಷ ವೀಕ್ಷಣೆ ಪಡೆದಿದೆ. 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ಖಾಲಿ ಫ್ಲೈಟ್‌ನಲ್ಲಿ ಟಚ್ ಇಟ್ ಸಾಂಗ್‌ಗೆ ಗಗನ ಸಖಿ ಡ್ಯಾನ್ಸ್

ವೀಡಿಯೊದಲ್ಲಿ, ಕಪ್ಪು ಟಾಪ್ ಮತ್ತು ಕಪ್ಪು ಮಾಸ್ಕ್ ಧರಿಸಿದ ಹುಡುಗಿ ಹಣ ಡ್ರಾ ಮಾಡಿ ಖುಷಿ ತಡೆಯಲಾರದೆ ಸಖತ್ ಸ್ಟೆಪ್ಸ್ ಹಾಕಿ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಆಕೆ ಹಣವನ್ನು ಹಿಂತೆಗೆದುಕೊಂಡು ಅವಳು ಎಟಿಎಂ ಯಂತ್ರಕ್ಕೆ ತಲೆಬಾಗುತ್ತಿರುವುದನ್ನು ಕೃತಜ್ಞತೆಯಿಂದ ಅವಳ ಕೈಗಳನ್ನು ಮಡಚುವುದನ್ನು ಕಾಣಬಹುದು.

ವೀಡಿಯೋದಲ್ಲಿರುವ(Video) ಶೀರ್ಷಿಕೆಯು ಹುಡುಗಿ ತನ್ನ ಸಂಬಳವನ್ನು ಪಡೆಯುತ್ತಿರುವುದರಿಂದ ಸಂತೋಷವಾಗಿದ್ದಾರೆ ಎಂದು ಹೇಳುತ್ತಿದ್ದರೂ, ಇದರ ಹಿಂದಿನ ನಿಜವಾದ ಕಾರಣ ತಿಳಿದಿಲ್ಲ. ಆದರೂ ಸೋಶಿಯಲ್ ಮೀಡಿಯಾ(Social Media) ಬಳಕೆದಾರರು ಅವಳಿಗೆ ಅತ್ಯಂತ ಸಂತೋಷದಾಯಕ ಸಂಬಳ ದಿನ ಇದು ಎಂದು ನಂಬುತ್ತಾರೆ. ಅಂತಿಮವಾಗಿ ಆಕೆಯ ಕೈಗೆ ಹಣ ಬರುವುದನ್ನು ನೋಡಿದಾಗ ಡ್ಯಾನ್ಸ್ ಮಾಡದೆ ಇರಲು ಸಾಧ್ಯವಾಗಲಿಲ್ಲ. ಅವರು ತುಂಬಾ ಸಂತೋಷವಾಗಿರುವುದನ್ನು ನೋಡಿ ನೆಟ್ಟಿಗರೂ ಈ ವಿಡಿಯೋವನ್ನು ಮನಸಾರೆ ಆನಂದಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ