ಮೋದಿ ಕೋಟೆಯಲ್ಲಿ ರೈತ ಸಮರ, ಗಾಯಗೊಂಡಾತನಿಗೆ 4 ಕೋಟಿ ಪರಿಹಾರ; ಅ.10ರ ಟಾಪ್ 10 ಸುದ್ದಿ!

By Suvarna NewsFirst Published Oct 10, 2021, 4:47 PM IST
Highlights

ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಪ್ರಿಯಾಂಕ ಗಾಂಧಿ ಕಿಸಾನ್ ರ‍್ಯಾಲಿ ಆಯೋಜಿಸಿದ್ದಾರೆ. ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಹರಾಜಾಗಿದೆ. ಬಾಳೆಹಣ್ಣಿನಿಂದ ಗಾಯಗೊಂಡವನಿಗೆ 4 ಕೋಟಿ ರೂ ಪರಿಹಾರ ಸಿಕ್ಕಿದೆ. ಫೈನಲ್ ಪ್ರವೇಶಕ್ಕೆ ಚೆನ್ನೈ ಡೆಲ್ಲಿ ಹೋರಾಟ, ಕನ್ನಡದ ಹಿರಿಯ ನಟ ಸತ್ಯಜೀತ್ ಇನ್ನಿಲ್ಲ ಸೇರಿದಂತೆ ಅಕ್ಟೋಬರ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮೋದಿ ವಿಶ್ವನಾಯಕನಾಗಿದ್ದು ಹೇಗೆ? ಅಮಿತ್ ಶಾ ತೆರೆದಿಟ್ಟ ಸೀಕ್ರೆಟ್!

ಪ್ರಧಾನಿ ನರೇಂದ್ರ ಮೋದಿ(Narendra Modi) ಸಾರ್ವಜನಿಕ ಸೇವೆಯಲ್ಲಿ 20 ವರ್ಷ ಪೂರೈಸಿದ್ದಾರೆ. ಮೋದಿ 20 ವರ್ಷ ಸಾಧನೆಯನ್ನು ಬಿಜೆಪಿ(BJP) ಕೆಲ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah), ಪ್ರಧಾನಿ ಮೋದಿ ವಿಶ್ವನಾಯಕ ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ  ಮೋದಿ ಪ್ರತಿಯೊಬ್ಬರ ಮಾತುಗಳನ್ನು ಆಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೋದಿಯಂತ ಕೇಳುಗ ಪ್ರಧಾನಿಯನ್ನು ಭಾರತ ಕಂಡಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಮೋದಿ ಕೋಟೆಯಲ್ಲಿ 'ಕಿಸಾನ್ ನ್ಯಾಯ್ ರ‍್ಯಾಲಿ' ಆಯೋಜಿಸಿದ ಪ್ರಿಯಾಂಕಾ ಗಾಂಧಿ!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ(Priyanka gandhi)  ಪ್ರಧಾನಿ ನರೇಂದ್ರ ಮೋದಿಯ(Narendra Modi) ಸಂಸದೀಯ ಕ್ಷೇತ್ರ ವಾರಣಾಸಿ(Varanasi) ತಲುಪಿದ್ದಾರೆ. ಅಲ್ಲಿಂದಲೇ, ಅವರು 2022 ಯುಪಿ ವಿಧಾನಸಭಾ ಚುನಾವಣೆಯ(Uttar Pradesh Assembly Elections) ಪ್ರಚಾರಕ್ಕಾಗಿ ರಣಕಹಳೆ ಮೊಳಗಿಸಲಿದ್ದಾರೆ. 

'ಬಾಳೆಹಣ್ಣಿ'ನಿಂದ ಗಾಯಗೊಂಡಾತನಿಗೆ ಸಿಕ್ತು 4 ಕೋಟಿ ರೂ. ಪರಿಹಾರ!

ಅದೃಷ್ಟ ಖುಲಾಯಿಸಿತೆಂದರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಆಸ್ಟ್ರೇಲಿಯಾದ(Australia) ಕ್ವೀನ್ಸ್‌ಲ್ಯಾಂಡ್‌ನ((Queensland, Australia) ನಿವಾಸಿಯಾಗಿರುವ ಕಾರ್ಮಿಕನೊಬ್ಬನ ಅದೃಷ್ಟವೂ ಹೀಗೇ ತೆರೆದಿದೆ

ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಹರಾಜು..!

 ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ನೀಡಲಾಗಿದ್ದ ಉಡುಗೊರೆಗಳ ಇ-ಹರಾಜು (E Auction) ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಹರಾಜು ಪ್ರಕ್ರಿಯೆ ವೇಳೆ ಟೋಕಿಯೋ ಒಲಿಂಪಿಕ್ಸ್‌ (Neeraj Chopra) ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅವರ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಬಿಕರಿಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಮಾಹಿತಿ ನೀಡಿದೆ. 

IPL 2021 ಹೀಗಿತ್ತು ನೋಡಿ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇ ಆಫ್‌ವರೆಗಿನ ಹಾದಿ..!

 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು ಪ್ಲೇ ಆಫ್‌ (Play Off) ಪ್ರವೇಶಿಸಿದ ಮೊದಲ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 

ಕನ್ನಡದ ಹಿರಿಯ ನಟ ಸತ್ಯಜೀತ್ ಇನ್ನಿಲ್ಲ

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಸತ್ಯಜೀತ್ (Sathyajith) ಅಕ್ಟೋಬರ್ 9, 2021ರಂದು ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಗ್ಯಾಂಗ್ರಿನ್ (Gangrene) ಮತ್ತು ಹಾರ್ಟ್‌ ಸ್ಟ್ರೋಕ್‌ಗೆಂದು (Heart stroke) ಚಿಕಿತ್ಸೆ ಪಡೆಯುತ್ತಿದ್ದರು. 

ಈ ಬಟ್ಟೆಗೆ 'ಐರಾವತ' ನಟಿ ಊರ್ವಶಿ ರೌಟೇಲಾ 2 ಲಕ್ಷ ನೀಡಿದ್ದಾರಂತೆ!

ಐರಾವತ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಊರ್ವಶಿ ರೌಟೇಲಾ ಖಾಸಗಿ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಧರಿಸಿದ ಬಟ್ಟೆ ಮತ್ತು ಶೂ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಒಮ್ಮೆ ನೀವೂ ನೋಡಿ ಹೇಗಿದೆ ಈ ಔಟ್‌ಫಿಟ್‌ ಎಂದು...

ವೇತನದಿಂದ ಕಡಿತವಾಗುವ ಹಣ ಎಲ್ಲಿ ಡೆಪಾಸಿಟ್ ಆಗುತ್ತೆ? PF ಹಣ ಯಾವಾಗ ಪಡೆಯಬಹುದು?

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸಂಬಳ ಪಡೆಯುವವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. EPFO ನಲ್ಲಿ ಠೇವಣಿ ಮಾಡಿದ ಮೊತ್ತ ಅತ್ಯಂತ ಸುರಕ್ಷಿತ ಮೊತ್ತವಾಗಿದ್ದು, ಇದು ಅವರ ಭವಿಷ್ಯದ ಯೋಗಕ್ಷೇಮದ ದೃಷ್ಟಿಯಿಂದ ಬಹಳ ಮಹತ್ವ ಪಡೆಯುತ್ತದೆ. ಪ್ರತಿ ತಿಂಗಳು ಪಡೆಯುವ ಸಂಬಳದ ಒಂದು ಭಾಗವನ್ನು ಅದರಲ್ಲಿ ಜಮೆ ಮಾಡಲಾಗುತ್ತದೆ. 

click me!