ಹಿಂದೆ ಜೆಕೆಯ ಕೆಲ ಮಸೀದಿಗಳು ಉಗ್ರರ ಬೆಂಬಲಿಸುವಂತೆ ಕೇಳುತ್ತಿದ್ದವು ಆದರೆ ಈಗ... ಗುಲಾಂ ನಬೀ ಅಜಾದ್ ಹೇಳಿದ್ದೇನು?

Published : Apr 23, 2025, 02:41 PM ISTUpdated : Apr 23, 2025, 03:04 PM IST
ಹಿಂದೆ ಜೆಕೆಯ ಕೆಲ ಮಸೀದಿಗಳು ಉಗ್ರರ ಬೆಂಬಲಿಸುವಂತೆ ಕೇಳುತ್ತಿದ್ದವು ಆದರೆ ಈಗ... ಗುಲಾಂ ನಬೀ ಅಜಾದ್ ಹೇಳಿದ್ದೇನು?

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಗೆ ದೇಶದೆಲ್ಲೆಡೆಯ ಜನ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಜಮ್ಮು ಕಾಶ್ಮೀರದವರೆ ಆದ ಅಲ್ಲಿ ಡೆಮಾಕ್ರಟಿಕ್ ಪ್ರೊಗ್ರೇಸಿವ್‌ ಪಕ್ಷದ ಮುಖ್ಯಸ್ಥ ಗುಲಾಂ ನಬೀ ಅಜಾದ್‌ ಕೂಡ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಬದಲಾದ ಕಾಶ್ಮೀರದ ಸ್ಥಿತಿಯ ಬಗ್ಗೆ ಅವರು ಮಾತನಾಡಿದ್ದಾರೆ. 

ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಗೆ ದೇಶದೆಲ್ಲೆಡೆಯ ಜನ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಜಮ್ಮು ಕಾಶ್ಮೀರದವರೆ ಆದ ಅಲ್ಲಿ ಡೆಮಾಕ್ರಟಿಕ್ ಪ್ರೊಗ್ರೇಸಿವ್‌ ಪಕ್ಷದ ಮುಖ್ಯಸ್ಥ ಗುಲಾಂ ನಬೀ ಅಜಾದ್‌ ಕೂಡ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಬದಲಾದ ಕಾಶ್ಮೀರದ ಸ್ಥಿತಿಯ ಬಗ್ಗೆ ಅವರು ಮಾತನಾಡಿದ್ದಾರೆ. 

ಮೊದಲೆಲ್ಲಾ ಏನಾದರೂ ಭಯೋತ್ಪಾದಕ ದಾಳಿ ಆದರೆ ಕಾಶ್ಮೀರದ ಜನ ಅದನ್ನು ಖಂಡಿಸುತ್ತಿರಲಿಲ್ಲ, ಒಂದು ವೇಳೆ ಖಂಡಿಸಿದ್ದರೂ ಅದೂ ತುಂಬಾ ಅಪರೂಪ. ಏಕೆಂದರೆ ಅವರು ಅಂದು ಭಯೋತ್ಪಾದಕರ ವಿರುದ್ಧ ಮಾತನಾಡುವುದಕ್ಕೆ ಹೆದರುತ್ತಿದ್ದರು. ಒಂದು ವೇಳೆ ಭಯೋತ್ಪಾದಕರ ಬಗ್ಗೆ ಮಾತನಾಡಿದರೆ ತಮ್ಮ ಜೀವಕ್ಕೆ ಎಲ್ಲಿ ಅಪಾಯ ಉಂಟಾಗುವುದೋ ಎಂಬ ಭಯ ಅವರಲ್ಲಿತ್ತು. ಆದರೆ ಇದೇ ಮೊದಲ ಬಾರಿಗೆ ಇಡೀ ಜಮ್ಮು ಕಾಶ್ಮೀರವೇ ಶೋಕದಲ್ಲಿ ಮುಳುಗಿದೆ. ಈ ರೀತಿಯ ವಾತಾವರಣವನ್ನು ನಾನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ. ನಿನ್ನೆಯ ಘಟನೆಗೆ ಪ್ರತಿಕ್ರಿಯೆಯಾಗಿ ಜಮ್ಮು ಕಾಶ್ಮೀರದ ಪ್ರತಿ ಜಿಲ್ಲೆ ಪ್ರತಿ ಗ್ರಾಮ, ಪ್ರತಿ ನಗರ ಸಂಪೂರ್ಣವಾಗಿ ಸ್ತಬ್ಧವಾಗಿದೆ.

ಜಮ್ಮುಕಾಶ್ಮೀರದಲ್ಲಿ ಅದೊಂದು ಕಾಲವಿತ್ತು, ಇಲ್ಲಿನ ಕೆಲ ಮಸೀದಿಗಳು ಜನರಿಗೆ ಭಯೋತ್ಪಾದಕರಿಗೆ ಬೆಂಬಲ ನೀಡುವಂತೆ ಜನರನ್ನು ಕೇಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಮಸೀದಿಗಳಲ್ಲೂ ಘಟನೆಗೆ ಖಂಡನೆ ವ್ಯಕ್ತವಾಗುತ್ತಿದೆ. ಇಲ್ಲಿನ ಎಲ್ಲಾ ಮಸೀದಿಗಳ ಇಮಾಮ್‌ಗಳು ಭಯೋತ್ಪಾದಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಗುಲಾಂ ನಬೀ ಆಜಾದ್‌ ಹೇಳಿದ್ದು, ಇದು ಬದಲಾದ ಕಾಶ್ಮೀರದ ಚಿತ್ರಣವನ್ನು ನೀಡುತ್ತಿದೆ.  ಜಮ್ಮು ಕಾಶ್ಮೀರದಲ್ಲಿ ಶೇಕಡಾ 70ಕ್ಕಿಂತಲೂ ಹೆಚ್ಚು ಆದಾಯ ಪ್ರವಾಸಿಗರಿಂದಲೇ ಬರುತ್ತಿದೆ. ಈಗ ಅಲ್ಲಿನ ಜೀವನಾಡಿ ಎನಿಸಿರುವ ಪ್ರವಾಸಿಗರ ಮೇಲೆಯೇ ಭಯೋತ್ಪಾದಕರು ದಾಳಿ ಮಾಡಿದ್ದು, ಅಲ್ಲಿನ ಸ್ಥಳೀಯರನ್ನು ಸಂಕಟಕ್ಕೆ ದೂಡಿದೆ. ಆರ್ಟಿಕಲ್ 370 ರದ್ದಾದ ನಂತರ ಕಾಶ್ಮೀರದ ಜನರ ಜೀವನ ಸ್ಥಿತಿ ಬದಲಾಗಿರುವದಕ್ಕೆ ಇಂದು ಭಯೋತ್ಪಾದಕ ದಾಳಿಗೆ ಅವರು ನೀಡುತ್ತಿರುವ ಪ್ರತಿಕ್ರಿಯೆಯೇ ಸಾಕ್ಷಿಯಾಗಿದೆ. 

ಇಂದು, ಒಬ್ಬ ಉಗ್ರಗಾಮಿ (ಪ್ರವಾಸಿಗರನ್ನು) ನಿಮ್ಮ ಧರ್ಮ ಯಾವುದು ಎಂದು ಕೇಳಿದರೆ, ಅದರರ್ಥ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳು ನಮ್ಮ ಮಾನವೀಯತೆ ಮತ್ತು ಕಾಶ್ಮೀರಿಯರ ಮೇಲೆ ದಾಳಿ ಮಾಡಿದ್ದಾರೆ ಎಂದರ್ಥ.  ಬಹುಶಃ ಇದೇ ಕಾರಣಕ್ಕೆ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾದ ಜೆ & ಕೆ ಯಲ್ಲಿ ಮುಸ್ಲಿಮರು ಉಗ್ರಗಾಮಿಗಳ ವಿರುದ್ಧ ಎದ್ದು ನಿಂತು ಸಾಕು ಸಾಕು ಎಂದು ಹೇಳುತ್ತಿದ್ದಾರೆ. ಈ ಹಿಂದೆ, ಮುಸ್ಲಿಮರು ಅಂತಹ ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು. ಆದರೆ ಇಂದು, ಅವರು ಅಂತಹ ಉಗ್ರಗಾಮಿಗಳ ವಿರುದ್ಧ ನಿಂತಿದ್ದೇವೆ ಎಂದು ತೋರಿಸಿದ್ದಾರೆ. ಇಲ್ಲಿನ ಜನಸಂಖ್ಯೆಯನ್ನು ವಿಭಜಿಸುವ ಕೆಲಸವನ್ನು ತಪ್ಪಿಸಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಬದಲಾಗಿ ಕಾಶ್ಮೀರದ ಮುಸ್ಲಿಮರು ನೀಡಿದ ಸಕಾರಾತ್ಮಕ ಸಂದೇಶದ ಮೇಲೆ ನಾವು ಗಮನಹರಿಸಬೇಕು, ಅವರು ಕೊಲ್ಲಲ್ಪಟ್ಟ ನಮ್ಮ ಹಿಂದೂ ಸಹೋದರ ಸಹೋದರಿಯರೊಂದಿಗೆ ಇದ್ದಾರೆ ಮತ್ತು ಉಗ್ರಗಾಮಿಗಳ ವಿರುದ್ಧ ಇದ್ದಾರೆ ಎಂದು ಗುಲಾಂ ನಬೀ ಅಜಾದ್ ಹೇಳಿದ್ದಾರೆ. 


ಮತ್ತೊಂದೆಡೆ ಭಯೋತ್ಪಾದಕ ದಾಳಿ ಖಂಡಿಸಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿ ಮತ್ತು ಐ) ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. 
 


ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಜಾಮಿಯಾ ರುಕೈಯಾ ಲಿಲ್ ಬನಾತ್ ಮದರಸಾದ ಉಸ್ತುವಾರಿ ವಹಿಸಿರುವ ರಾಜ್ ಅಲಿ ಅವರು ಭಯೋತ್ಪಾದಕಾ ದಾಳಿಯನ್ನು ಖಂಡಿಸಿದ್ದು, .ಇದು ತುಂಬಾ ಖಂಡನೀಯ ಕೃತ್ಯ. ಅವರು (ಭಯೋತ್ಪಾದಕರು) ಮನುಷ್ಯರಲ್ಲ... ಅವರಿಗೆ ಯಾವುದೇ ಧರ್ಮವಿಲ್ಲ ಏಕೆಂದರೆ ಯಾವುದೇ ಧರ್ಮವು ಭಯೋತ್ಪಾದನೆಯನ್ನು ಕಲಿಸುವುದಿಲ್ಲ. ಅವರು ಧರ್ಮವನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ. ಈ ದಾಳಿಯ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನಾವು ಬಲವಾಗಿ ನಿಲ್ಲುತ್ತೇವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಹೇಗೆ ಶಿಕ್ಷೆ ಸಿಗಬೇಕು ಎಂದರೆ ಮುಂದೆಂದೂ ನಮಗೆ ಇಂತಹ ಘಟನೆಗಳು ಕೇಳಲೂ ಕೂಡ ಸಿಗಬಾರದು. ನಮ್ಮ ಮಕ್ಕಳಿಗೂ ಇಂತಹ ಘಟನೆಗಳು ನೋಡಲು ಸಿಗಬಾರದು, ಇಂತಹ ಘಟನೆಯಿಂದ ನಮಗೆ ನಾಚಿಕೆಯಾಗುತ್ತಿದೆ ಎಂದು  ಹೇಳಿದ್ದಾರೆ.
 

 

 

ಇದನ್ನೂ ಓದಿ:15 ನಿಮಿಷದ ಅಂತರದಲ್ಲಿ ಬದುಕುಳಿದ ಕುಟುಂಬ!

ಇದನ್ನೂ ಓದಿ:ಪಹಲ್ಗಾಮ್‌ ದಾಳಿ: ತಮ್ಮವರನ್ನು ಕಳೆದುಕೊಂಡು ಗೃಹಸಚಿವ ಅಮಿತ್ ಷಾ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಪ್ರವಾಸಿಗರು

ಇದನ್ನೂ ಓದಿ:'Kashmir Files'​ ಪ್ರಚಾರ ಅಂದ್ರಲ್ಲಾ.. ಈ ನರಮೇಧಕ್ಕೆ ಏನಂತೀರಾ? ಮಾತಾಡಿ ಸ್ವಾಮಿ.. ಅನುಪಮ್​ ಖೇರ್​ ಕಣ್ಣೀರು

ಇದನ್ನೂ ಓದಿ:ಮೋದಿಯನ್ನು ಬೆಂಬಲಿಸುವಿರಾ ಎಂದು ಕೇಳಿ ಟೆಂಟ್‌ನಿಂದ ಎಳೆದು ಗುಂಡಿಕ್ಕಿದರು 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ