
ನವದೆಹಲಿ(ಜು.02): ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡುವ ಪ್ರಕ್ರಿಯೆಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಹಾಗೂ ಜರ್ಮನಿ ವಿಳಂಬ ನೀತಿ ಅನುಸರಿಸಿದೆ. ಈ ಮೂಲಕ ಚೀನಾ, ಪಾಕ್ ಕುರಿತ ಅಸಮಾಧಾನ ಹೊರಹಾಕಿ, ಭಾರತದ ಬೆನ್ನಿಗೆ ನಿಂತಿವೆ ಪ್ರಮುಖ ರಾಷ್ಟ್ರಗಳು
ಜರ್ಮನಿ ಈ ಬಗ್ಗೆ ಹೇಳಿಕೆ ನೀಡಲು ತಡ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕವೂ ಇದೇ ದಾರಿಯನ್ನು ಅನುಸರಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖರೇಷಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರಾಚಿ ದಾಳಿಗೆ ಭಾರತವೇ ಕಾರಣ ಎಂದು ಆರೋಪಿಸಿದ ನಂತರ ಜರ್ಮನಿ ಹಾಗೂ ಅಮೆರಿಕ ಭಾರತದ ಜೊತೆ ನಿಂತು ಐಕ್ಯತೆ ತೋರಿಸಿದೆ.
ಅಮೆರಿಕದಲ್ಲಿ ದಿನಕ್ಕೆ 1 ಲಕ್ಷ ಕೊರೋನಾ ಕೇಸಿನ ಭೀತಿ!
ಉಗ್ರರ ದಾಳಿಯ ತಯಾರಿ, ಯೋಜನೆ, ಅದಕ್ಕೆ ಆರ್ಥಿಕ ನೆರವು ನೀಡುತ್ತಿರುವವರನ್ನು ಮಟ್ಟ ಹಾಕುವ ಅಗತ್ಯವಿದೆ. ಅಂತಾರಾಷ್ಟ್ರೀಯ ಕಾನೂನು ಹಾಗೂ ಭದ್ರತಾ ಮಂಡಳಿ ನಿಯಮಗಳಂತೆ ಉಗ್ರರನ್ನು ಮಟ್ಟ ಹಾಕಲು ಎಲ್ಲರೂ ಪಾಕಿಸ್ತಾನ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಚೀನಾ ಪತ್ರಿಕಾ ಹೇಳಿಕೆ ತಯಾರಿಸಿತ್ತು.
ಮೌನ ಅಂಗೀಕಾರಕ್ಕಾಗಿ ಚೀನಾ ಈ ಕರಡು ಹೇಳಿಕೆ ಪ್ರತಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಂದಿಟ್ಟಿತ್ತು. ಈ ಸಂದರ್ಭ ಯಾವ ದೇಶವೂ ವಿರೋಧ ವ್ಯಕ್ತ ಪಡಿಸದಿದ್ದರೆ ಅದನ್ನು ಅನುಮೋದನೆ ಎಂದು ಭಾವಿಸಲಾಗುತ್ತದೆ.
2036 ರವರೆಗೂ ರಷ್ಯಾಗೆ ಪುಟಿನ್ ಅಧ್ಯಕ್ಷ: ಜನಾಭಿಪ್ರಾಯದಲ್ಲಿ ಮೇಲುಗೈ!
ನಾಲ್ಕು ಗಂಟೆಗೆ ಹೇಳಿಕೆ ನೀಡುವಲ್ಲಿ ಜರ್ಮನಿ ತಡ ಮಾಡಿದ್ದು, ಈ ಸಂದರ್ಭ ಚೀನಾದ ಪ್ರತಿನಿಧಿಗಳು ಇದನ್ನು ವಿರೋಧಿಸಿದ್ದರು. ನಂತರದಲ್ಲಿ ಡೆಡ್‌ಲೈನ್‌ನ್ನು ಜುಲೈ 1 10 ಗಂಟೆಯ ತನಕ ಮುಂದೂಡಲಾಗಿತ್ತು.
ಎರಡನೇ ಸೆಷನ್‌ನ ಕೊನೆಗೆ ಅಮೆರಿಕ ಮಧ್ಯ ಪ್ರವೇಶಿಸಿ ಮತ್ತೊಂದು ದಿನಕ್ಕೆ ಸೆಷನ್ ಮುಂದೂಡಲಾಯಿತು. ಕೊನೆಗೂ ಹೇಳಿಕೆ ಬಿಡುಗಡೆಯಾದರೂ, ಇಡೀ ಪ್ರಕ್ರಿಯೆಯಲ್ಲಿ ಆದ ವಿಳಂಬದಿಂದ ಚೀನಾ ಹಾಗೂ ಪಾಕಿಸ್ತಾನದ ಬಗ್ಗೆ ಇತರ ರಾಷ್ಟ್ರಗಳಿಗಿರುವ ಅಸಮಾಧಾನ ಜಗಜ್ಜಾಹೀರಾತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ