
ಪುರಿ(ಜೂ.04): ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಕೊಂದ ಪ್ರಕರಣ ದೇಶದ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಪ್ರಾಣಿ-ಪಕ್ಷಿಗಳ ಮೇಲೆ ಕ್ರೂರತೆ ತೋರಿಸಬೇಡಿ, ಪ್ರೀತಿ ತೋರಿಸಿ ಎಂದು ಹಲವರು ಮನವಿ ಮಾಡುತ್ತಿದ್ದಾರೆ. ಇದರೊಂದಿಗೆ ಆನೆಯನ್ನು ಕೊಂದ ಕಟುಕರಿಗೆ ಶಿಕ್ಷೆ ನೀಡಿ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಿ ಅನ್ನೋ ಕೂಗು ಕೇಳಿಬರುತ್ತಿದೆ. ಇದೀಗ ಖ್ಯಾತ ಮರಳು ಶಿಲ್ಪಿ ಸುದರ್ಶನ ಪಟ್ನಾಯಕ್, ಘಟನೆಯನ್ನು ಖಂಡಿಸಿ ಪುರಿ ಸಮುದ್ರ ತೀರದಲ್ಲಿ ಮರುಳಿ ಶಿಲ್ಪ ರಚಿಸಿದ್ದಾರೆ. ಇದರೊಂದಿಗೆ ಸಂದೇಶವನ್ನು ಸಾರಿಸಿದ್ದಾರೆ.
ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!.
ತಾಯಿ ಹಾಗೂ ಮರಿ ಆನೆ ನೆಲಕ್ಕೆ ಬಿದ್ದು, ದಯನೀಯ ಸ್ಥಿತಿಯಿಂದ ನೋಡುತ್ತಿರುವ ಮರಳು ಶಿಲ್ಪರನ್ನು ಸುದರ್ಶನ್ ಪಟ್ನಾಯಕ್ ರಚಿಸಿದ್ದಾರೆ. ಮಾನವೀಯತೆ ಮತ್ತೆ ಸತ್ತು ಹೋಗಿದೆ ಎಂದು ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಶಿಲ್ಪದ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಸಂದೇಶ ಸಾರಿಸಿದ್ದಾರೆ.
ಸುದರ್ಶನ ಪಟ್ನಾಯಕ್ ಮರಳು ಶಿಲ್ಪಕ್ಕೆ ಕ್ಷಣಾರ್ಧಲ್ಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾನವೀಯತೆ ಸತ್ತು ಹೋಗುತ್ತಿದೆ. ಆದರೆ ತಪ್ಪುಗಳಿಂದ ಎಚ್ಚೆತ್ತುಕೊಳ್ಳುತ್ತಿಲ್ಲ, ಕಲಿಯುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ