
ಭೋಪಾಲ್: ಮಧ್ಯಪ್ರದೇಶದಲ್ಲಿ ಪೊಲೀಸರು ಪತ್ನಿಯನ್ನು ಕೊಲೆಗೈದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಪತ್ನಿಯ ಶಾಪಿಂಗ್ ಚಟದಿಂದ ಬೇಸತ್ತು ಕೊಲೆಗೈದಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಆಗಸ್ಟ್ 13ರಂದು 25 ವರ್ಷದ ಮುಸ್ಕಾನ್ ಕೊಲೆಯಾಗಿತ್ತು ಮತ್ತು ಆಕೆಯ ಸೋದರ ಸಂಜೇಶ್ ಗಾಯಗೊಂಡಿದ್ದನು. ಪೊಲೀಸ್ ತನಿಖೆಯಲ್ಲಿ ಮುಸ್ಕಾನ್ ಗಂಡ ಅಜಯ್ ಮಾಡಿದ ಕೊಲೆ ಎಂಬುವುದು ಬೆಳಕಿಗೆ ಬಂದಿತ್ತು.
ಆಗಸ್ಟ್ 13ರಂದ ಮುಸ್ಕಾನ್ ಮತ್ತು ಸಂಜೇಶ್ ಇಬ್ಬರು ಗಾರ್ಡನ್ ಸಿಟಿಯ ರಸ್ತೆಯಲ್ಲಿ ರಸ್ತೆ ಅಪಘಾತವೊಂದರಲ್ಲಿ ಭೀಕರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮುಸ್ಕಾನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಸೋದರ ಸಂಜೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಕ್ಟಿವ್ ಸ್ಕೂಟಿಯಲ್ಲಿ ತೆರಳುತ್ತಿರುವಾಗ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದೆ ಎಂದು ಅಜಯ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಹನುಮಾನ್ ದೇವಸ್ಥಾನದಿಂದ ಹಿಂದಿರುಗಿ ಬರುತ್ತಿರುವ ವೇಳೆ ಅಪಘಾತವಾಗಿದೆ ಎಂದು ಅಜಯ್ ದೂರಿನಲ್ಲಿ ಉಲ್ಲೇಖಿಸಿದ್ದನು. ಪ್ರಾಥಮಿಕ ತನಿಖೆ ವೇಳೆಯೂ ಇದೊಂದು ಅಪಘಾತ ಎಂದೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬೆಂಗಳೂರು ಪೊಲೀಸರು ಕೈತೊಳೆದುಕೊಂಡಿದ್ದ 11 ವರ್ಷ ಹಳೆಯ ರೇಪ್ ಅಂಡ್ ಮರ್ಡರ್ ಕೇಸ್ ಬೇಧಿಸಿದ ಸಿಐಡಿ ಪೊಲೀಸರು
ಪೊಲೀಸರು ಅನುಮಾನಗೊಂಡು ಪ್ರಕರಣದ ತನಿಖೆ ನಡೆಸಿದಾಗ ಸಿಸಿಟಿವಿ ದೃಶ್ಯದಲ್ಲಿ ಇಕೋ ಸ್ಪೋರ್ಟ್ ಕಾರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಸೆರೆಯಾಗಿತ್ತು. ಇತ್ತ ಅಜಯ್ ಹೇಳಿಕೆ ಮೇಲೆಯೂ ಪೊಲೀಸರಿಗೆ ಅನುಮಾನ ಮೂಡಿತ್ತು. ಹಾಗಾಗಿ ಅಜಯ್‌ನನ್ನು ವಶಕ್ಕೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಅಪಘಾತಕ್ಕಾಗಿ ಸೆಕೆಂಡ್ ಹ್ಯಾಂಡ್ ಖರೀದಿಸಿರೋದಾಗಿ ಹೇಳಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಪತ್ನಿಯ ಶಾಪಿಂಗ್, ಸಿನಿಮಾ, ಲಾಂಗ್ ಡ್ರೈವ್ ಸೇರಿದಂತೆ ಆಕೆಯ ಖರ್ಚುಗಳನ್ನು ಮೇಂಟೇ ನ್ ಮಾಡಲಾಗದೇ ಕೊಲೆ ಮಾಡಿರೋದಾಗಿ ಹೇಳಿಕೊಂಡಿದ್ದಾನೆ. 2022ರಲ್ಲಿ ಅಜಯ್ ಎರಡನೇ ಮದುವೆಯಾಗಿದ್ದನು. ಹೀಗಾಗಿ ಎರಡು ಸಂಸಾರಗಳನ್ನು ನಿರ್ವಹಿಸೋದು ಅಜಯ್‌ಗೆ ಆರ್ಥಿಕ ಹೊರೆಯಾಗಿತ್ತು.
2017ರಲ್ಲಿ ಗ್ವಾಲಿಯರ್‌ನಲ್ಲಿ ಪಿಎಸ್‌ಸಿ ಎಕ್ಸಾಂಗೆ ತೆರಳಿದ್ದ ವೇಳೆ ಅಜಯ್ ಮತ್ತು ಮುಸ್ಕಾನ್ ಭೇಟಿಯಾಗಿದ್ದರು. ನಂತರ ಪರಸ್ಪರ ಪ್ರೀತಿಸಿದ ಅಜಯ್ ಮತ್ತು ಮುಸ್ಕಾನ್ 2021ರಲ್ಲಿ ಮದುವೆ ಆಗ್ತಾರೆ. 2022ರಲ್ಲಿ ಅಜಯ್ ಮತ್ತೊಂದು ಮದುವೆಯಾಗುತ್ತಾನೆ. ಮುಸ್ಕಾನ್ ಶಾಪಿಂಗ್, ಮೂವಿಗೆ ಹೋಗುವುದು ಸೇರಿದಂತೆ ಆಕೆಯ ಖರ್ಚುಗಳನ್ನು ಭರಿಸಲಾಗದೇ ಒತ್ತಡದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೊಲೆಗಾಗಿ 2.5 ಲಕ್ಷ ರೂಪಾಯಿ ಸುಪಾರಿ ನೀಡಿದ್ದನು.
ಮಗಳನ್ನು ಮದುವೆ ಮಾಡಿ ಗಂಡನ ಜೊತೆಗೆ ಕಳಿಸಿದರೆ, ಮಾವ ನಿನ್ನ ಮಗಳ ಶವ ತಗೊಂಡೋಗು ಎಂದ ಅಳಿಮಯ್ಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ