20 ವರ್ಷಗಳ ಬಳಿಕ ಜಪಾನ್ ಪುತ್ರ, ಪಂಜಾಬಿ ತಂದೆಯ ಮಿಲನ; ಅಪ್ಪನನ್ನ ಹುಡ್ಕೊಂಡು ಬಂದ ಮಗ

By Mahmad Rafik  |  First Published Aug 24, 2024, 4:58 PM IST

ತಂದೆಯನ್ನು  ಹುಡುಕಿಕೊಂಡು 21 ವರ್ಷದ ಯುವಕ ಜಪಾನ್‌ನಿಂದ ಭಾರತಕ್ಕೆ ಬಂದಿದ್ದಾನೆ. ಮಗ ಬಂದಿರುವ ವಿಷಯ ತಿಳಿಯುತ್ತಲೇ ಪಕ್ಕದೂರಿಗೆ ಹೋಗಿದ್ದ ತಂದೆ ಓಡೋಡಿ ಬಂದಿದ್ದಾರೆ.


ಚಂಡೀಗಢ: ಪಂಜಾಬ್ ರಾಜ್ಯದ ಅಮೃತಸರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು 20 ವರ್ಷದ ಬಳಿಕ ಮಗನನ್ನು ಭೇಟಿಯಾಗಿದ್ದಾರೆ. 20 ವರ್ಷಗಳ ಹಿಂದೆ ಅಮೃತಸರ ನಿವಾಸಿ ಸುಖ್‌ಪಾಲ್ ಸಿಂಗ್ ಎಂಬವರು ಒಂದು ವರ್ಷದ ಮಗನನ್ನು ಜಪಾನ್‌  ದೇಶದಲ್ಲಿರುವ ತಾಯಿ ಬಳಿ ಬಿಟ್ಟು ಬಂದಿದ್ದರು. ಕಾಲೇಜಿನಲ್ಲಿ ನೀಡಲಾದ ಪ್ರೊಜೆಕ್ಟ್ ಕಾರಣದಿಂದಾಗಿ ಭಾರತಕ್ಕೆ ಬಂದಿರುವ ಮಗ ತಂದೆಯನ್ನು ಹುಡುಕಿಕೊಂಡು ಅಮೃತಸರ್ ನಗರಕ್ಕೆ ಬಂದು ಅಪ್ಪನ ಫೋಟೋ ಹಿಡಿದುಕೊಂಡು ಗಲ್ಲಿ ಗಲ್ಲಿ ಸುತ್ತುತ್ತಿದ್ದನು. ಜಪಾನ್‌ನಿಂದ ಬರುವಾಗ ತಂದೆಯ ಕೆಲ ಹಳೆ ಫೋಟೋ ಮತ್ತು ವಿಳಾಸವನ್ನು ಅಮ್ಮನಿಂದ ಪಡೆದುಕೊಂಡು ಭಾರತಕ್ಕೆ ಬಂದಿದ್ದನು. ತಾಯಿ  ನೀಡಿದ ವಿಳಾಸ 20 ವರ್ಷಗಳ ಹಿಂದಿನದ್ದು ಆಗಿದ್ದ ಕಾರಣ ಅಲ್ಲಿ ಸುಖ್‌ಪಾಲ್ ಸಿಗದ ಕಾರಣ ಹಳೆ ಫೋಟೋ ಹಿಡಿದು ಅಡ್ರೆಸ್ ಪತ್ತೆ ಮಾಡುತ್ತಿದ್ದನು. 

ಓಸಾಕಾ ಯುನಿವರ್ಸಿಟಿ ಕಲಾ ವಿಭಾಗದ ವಿದ್ಯಾರ್ಥಿಯಾಗಿರುವ ರಿನ್ ಟಕ್ಹಾಟ್ ಆಗಸ್ಟ್ 18ರಂದು ಅಮೃತಸರ್‌ಗೆ ಬಂದು ಹಳೆಯ ಅಡ್ರೆಸ್ ಚೀಟಿ ಹಿಡಿದುಕೊಂಡು ನಗರದಲ್ಲಿ ಸುತ್ತಾಡಿದ್ದಾನೆ. ಕೊನೆಗೆ ತಂದೆ ಲೊಕರ್ಹಾ ರಸ್ತೆಯಲ್ಲಿರುವ ನಿವಾಸದಲ್ಲಿರುವ ವಿಷಯ ಗೊತ್ತಾಗಿ ಓಡೋಡಿ ಹೋಗಿದ್ದಾನೆ. ನಾನು ರಕ್ಷಾಬಂಧನ ಹಿನ್ನೆಲೆ ಊರಿಗೆ ಹೋಗಿದ್ದೆ. ನನ್ನ ಸೋದರ ಫೋನ್ ಮಾಡಿ ಜಪಾನ್‌ನಿಂದ ಮಗ ಬಂದಿರುವ ವಿಷಯವನ್ನು ತಿಳಿಸಿದನು. ವಿಷಯ ತಿಳಿದ ಕೂಡಲೇ ನಾನು ಓಡೋಡಿ ಬಂದೆ. ನಾನು ಬರುವಷ್ಟರಲ್ಲಿ ಸೋದರನ ಮನೆಯಲ್ಲಿ ಮಗ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದನು ಎಂದು ಸುಖ್‌ಪಾಲ್ ಸಿಂಗ್ ಹೇಳಿದ್ದಾರೆ. 

Latest Videos

undefined

ಇದಕ್ಕೂ ಮೊದಲು ತಂದೆ ಮತ್ತು ಮಗ ಸೋಶಿಯಲ್ ಮೀಡಿಯಾದಲ್ಲಿ ಹುಡುಕುವ ಕೆಲಸ ಮಾಡಿದ್ದರು, ಆದ್ರೆ ಸಕ್ಸಸ್ ಸಿಕ್ಕಿರಲಿಲ್ಲ. ತಂದೆಯನ್ನು ಭೇಟಿಯಾದ ಬಳಿಕ ಮಾತನಾಡಿರುವ ರಿನ್, ನನಗೆ ಕಾಲೇಜಿನಲ್ಲಿ ಫ್ಯಾಮಿಲಿ ಟ್ರೀ ಮಾಡುವ ಪ್ರೊಜೆಕ್ಟ್ ನೀಡಲಾಗಿತ್ತು. ಅಂದು ತಾಯಿ ನನ್ನ ಕುಟುಂಬದ ಬಗ್ಗೆ ಎಲ್ಲಾ ವಿವರಗಳನ್ನು ಹೇಳಿದರು. ತಂದೆ ಹೆಸರು ಸುಖ್‌ಪಾಲ್ ಸಿಂಗ್ ಎಂದು ಮಾತ್ರ ನನಗೆ ಗೊತ್ತಿತ್ತು. ಹಾಗಾಗಿ ತಂದೆಯನ್ನು ಹುಡುಕುವ ಕುತೂಹಲ ಹೆಚ್ಚಾಯ್ತು ಎಂದು ಹೇಳಿದ್ದಾನೆ. 

'ಯುದ್ಧದಲ್ಲಿ ಮಕ್ಕಳ ಸಾವು ಸಹಿಸಲಾಗದು..' ಝೆಲೆನ್ಸ್ಕಿ ಭೇಟಿ ಮಾಡಿದ ಬಳಿಕ ಪಿಎಂ ಮೋದಿ ಮಾತು!

ಸುಖ್‌ಪಾಲ್ ಥೈಲ್ಯಾಂಡ್‌ನಲ್ಲಿದ್ದಾಗ ಸಾಚಿ ಎಂಬ ಮಹಿಳೆ ಜೊತೆ ಪ್ರೇಮಾಂಕುರವಾಗಿತ್ತು. 2002ರಲ್ಲಿ ಸಾಚಿ ಮತ್ತು ಸುಖ್‌ಪಾಳ್ ಸಿಂಗ್ ಜಪಾನಿನಲ್ಲಿ ಮದುವೆಯಾಗಿದ್ದರು. ಟೋಕಿಯೋ ಸಮೀಪದ ಚಿಬಾ ಕೇನ್ ಎಂಬಲ್ಲಿ ವಾಸವಾಗಿದ್ದರು. 2003ರಲ್ಲಿ ರಿನ್ ಜನಸಿದ ಬಳಿಕ ಇಬ್ಬರ ಜೀವನದಲ್ಲಿ ಒಡಕು ಮೂಡಿದ್ದರಿಂದ ಪತ್ನಿ-ಮಗುವನ್ನು ತೊರೆದು 2004ರಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ಇದೇ ವೇಳೆ ಸಾಚಿ ಭಾರತಕ್ಕೆ ಬಂದಿದ್ದರು. ಕೆಲದಿನಗಳ ಬಳಿಕ ಮತ್ತೆಮ ಇಬ್ಬರು ಜಪಾನ್‌ಗೆ ಹೋಗಿದ್ದರು. ಆದರೂ ಇಬ್ಬರ ನಡುವಿನ ಮನಸ್ತಾಪ ಮುಂದುವರಿದಿತಯ್ತು. ಕೊನೆಯದಾಗಿ 2007ರಲ್ಲಿ  ಪ್ರತ್ಯೇಕವಾಗಲು ನಿರ್ಧರಿಸಿದಾಗ ಸುಖ್‌ಪಾಲ್ ಎಲ್ಲರನ್ನೂ ತೊರೆದು ಭಾರತಕ್ಕೆ ಬಂದು ಅಮೃತಸರದಲ್ಲಿ ಸೆಟೆಲ್ ಆಗಿದ್ರು. ನಂತರ ಇಲ್ಲಿಗೆ ಬಂದು ಗುರವಿಂದರ್‌ಜಿತ್ ಎಂಬವರನ್ನು ಮದುವೆಯಾಗಿದ್ದು, ದಂಪತಿಗೆ ಅಲ್ವಿಯಾ ಎಂಬ ಮಗಳಿದ್ದಾಳೆ. 

ರಿನ್ ಬಂದ ಬಳಿಕ ಸಾಚಿ ಜೊತೆ ಫೋನ್‌ನಲ್ಲಿ ಮಾತನಾಡಿರುವ ಸುಖ್‌ಪಾಲ್ ಸಿಂಗ್, ಮಗ ನಮ್ಮ ಜೊತೆ ಸುರಕ್ಷಿತವಾಗಿದ್ದಾನೆ. ಮಗ ದೊಡ್ಡವನಾಗಿದ್ದು, ಆತ ಎಲ್ಲಿರಬೇಕು ಎಂಬುದರ ಬಗ್ಗೆ ನಿರ್ಧಾರ ತೆಗದುಕೊಳ್ಳಲು ಸಮರ್ಥನಾಗಿದ್ದಾನೆ ಎಂದು ಹೇಳಿದ್ದಾರೆ. ಮರುದಿನವೇ ರಕ್ಷಾ ಬಂಧನ ಇರೋದರಿಂದ ಜಪಾನಿ ಅಣ್ಣನಿಗೆ ಅಲ್ವಿಯಾ ರಾಕಿ ಕಟ್ಟಿದ್ದಾಳೆ.

ಸೌತೆಕಾಯಿಗೆ ಬರಗಾಲ ಸೃಷ್ಟಿಸಿದ ಟಿಕ್‌ಟಾಕ್ ವಿಡಿಯೋ - ಯುವಕನ ರೆಸಿಪಿಗೆ ಜನರು ಫಿದಾ

click me!