
ಮುಂಬೈ(ಆ.15): ಲಸಿಕೆ ಅಭಾವದಿಂದ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರ ವಿಸ್ತರಣೆ ಮಾಡಲಾಗಿದೆ ಎಂದು ಕೋವಿಶೀಲ್ಡ್ ತಯಾರಿ ಸೀರಂ ಸಂಸ್ಥೆಯ ಅಧ್ಯಕ್ಷ ಸೈರಸ್ ಪೂನಾವಾಲಾ ಹೇಳಿದ್ದಾರೆ.
ಇಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಪೂನಾವಾಲಾ, ಎರಡೂ ಡೋಸ್‌ಗಳ ಮಧ್ಯೆ 3-4 ತಿಂಗಳ ಅಂತರವಿರಬೇಕು ಎಂಬುದು ಸರಿಯಲ್ಲ. ಆದರೆ ಕೋವಿಡ್‌ನಿಂದ ಗುಣಮುಖರಾದ ವ್ಯಕ್ತಿಯು 3-4 ತಿಂಗಳ ಅಂತರದಲ್ಲಿ ಲಸಿಕೆ ಪಡೆಯಬಹುದು. ಸಾಮಾನ್ಯ ಪ್ರಕರಣಗಳಲ್ಲಿ ಇದು ಮರುಕಳಿಸಬಾರದು. ಆದಾಗ್ಯೂ, ದೇಶದಲ್ಲಿ ಲಸಿಕೆಗಳ ಕೊರತೆ ಕಾರಣದಿಂದಾಗಿ ಭಾರತ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿತ್ತು ಎಂದರು.
ಅಲ್ಲದೆ ಎರಡೂ ಡೋಸ್‌ಗಳನ್ನು ಪಡೆದ ವ್ಯಕ್ತಿಯಲ್ಲಿ 6 ತಿಂಗಳ ಬಳಿಕ ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳ ಸಾಮರ್ಥ್ಯ ಕುಸಿಯುತ್ತದೆ. ಹೀಗಾಗಿ ಎರಡೂ ಡೋಸ್ ಪಡೆದ 6 ತಿಂಗಳ ಬಳಿಕ 3ನೇ ಡೋಸ್(ಬೂಸ್ಟರ್) ಅನ್ನು ಪಡೆಯಬಹುದು ಎಂದರು.
ಈ ಹಿಂದೆ ವೈಜ್ಞಾನಿಕ ಕಾರಣ ಹಿನ್ನೆಲೆಯಲ್ಲಿ 4-8 ವಾರಗಳ ಅಂತರದಲ್ಲಿ ಪಡೆಯಬಹುದಾಗಿದ್ದ ಕೋವಿಶೀಲ್ಡ್ ಲಸಿಕೆಯ 2 ಡೋಸ್‌ಗಳ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ