'ಅವಿವಾಹಿತ ಯುವತಿಯರು ದೈಹಿಕ ಸಂಬಂಧದಲ್ಲಿ ತೊಡಗಬೇಡಿ'

By Suvarna NewsFirst Published Aug 15, 2021, 1:52 PM IST
Highlights

* ಭಾರತವು ಸಾಂಪ್ರದಾಯಿಕ ದೇಶ

* ಅವಿವಾಹಿತ ಯುವತಿಯರು ಯಾವುದೇ ಕಾರಣಕ್ಕೂ ಶಾರೀರಿಕ ಸಂಬಂಧದಲ್ಲಿ ತೊಡಗಬಾರದು

* ಅತ್ಯಾಚಾರಿ ಆರೋಪಿಯೊಬ್ಬನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌

ಭೋಪಾಲ್‌(ಆ.15): ‘ಭಾರತವು ಸಾಂಪ್ರದಾಯಿಕ ದೇಶವಾದ ಕಾರಣ ಅವಿವಾಹಿತ ಯುವತಿಯರು ಯಾವುದೇ ಕಾರಣಕ್ಕೂ ಶಾರೀರಿಕ ಸಂಬಂಧದಲ್ಲಿ ತೊಡಗಬಾರದು’ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅತ್ಯಾಚಾರಿ ಆರೋಪಿಯೊಬ್ಬನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾ| ಸುಬೋಧ್‌ ಅಭ್ಯಾಂಕರ್‌ ಅವರು, ‘ಅವಿವಾಹಿತ ಯುವತಿಯರು ಭವಿಷ್ಯದಲ್ಲಿ ಮದುವೆಯ ಭರವಸೆ ಸಿಗದ ಹೊರತಾಗಿ ಯುವಕರ ಜತೆ ತಮಾಷೆಗಾಗಿ ಶಾರೀರಿಕ ಸಂಬಂಧ ಹೊಂದುವಷ್ಟರ ಮಟ್ಟಿಗೆ ಭಾರತ ಇನ್ನೂ ಮುಟ್ಟಿಲ್ಲ. ಪ್ರಸ್ತುತ ಪ್ರಕರಣದಂತೆ ಅತ್ಯಾಚಾರಕ್ಕೆ ಸಿಲುಕಿದ ಸಂತ್ರಸ್ತೆಯು ಪ್ರತೀ ಬಾರಿಯು ಆತ್ಮಹತ್ಯೆಗೆ ಪ್ರಯತ್ನಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

ಅವಿವಾಹಿತ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸುವ ಹುಡುಗ ತನ್ನ ಕ್ರಿಯೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಅದನ್ನು ಎದುರಿಸಲು ಅವನು ಸಿದ್ಧನಾಗಿರಬೇಕು ಎಂದು ಕೂಡ ಪೀಠ ಹೇಳಿದೆ.

ಮದುವೆಯ ನೆಪದಲ್ಲಿ ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪವಿರುವ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ವಿವಾಹದ ನೆಪದಲ್ಲಿ ಆರೋಪಿಯು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 366 (ಅಪಹರಣ, ಒತ್ತೆ ಅಥವಾ ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸುವುದು) ಮತ್ತು ಪೋಕ್ಸೊ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.
 

click me!