ಗಣೇಶ ಹಬ್ಬದ ಪ್ರಯುಕ್ತ ಮುಸ್ಲಿಂ ಬಿಜೆಪಿ ನಾಯಕಿ ತಮ್ಮ ಕ್ಷೇತ್ರದಲ್ಲಿ ಗಣೇಶನ ಕೂರಿಸಿದ್ದಾರೆ. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ. ಬಿಜೆಪಿ ನಾಯಕಿ ವಿರುದ್ಧ ಫತ್ವಾ ಹೊರಡಿಸಿದ್ದು, ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಉತ್ತರ ಪ್ರದೇಶ(ಸೆ.03): ದೇಶದೆಲ್ಲಡೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಸಲಾಗಿದೆ. ಕರ್ನಾಟಕದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ವಿವಾದದ ನಡುವೆಯೂ ಗಣಪತಿ ಹಬ್ಬ ಆಚರಣೆಯಾಗಿದೆ. ಇದೀಗ ಉತ್ತರ ಪ್ರದೇಶದಲ್ಲಿನ ಘಟನೆ ಭಾರಿ ಸದ್ದು ಮಾಡುತ್ತಿದೆ. ತಮ್ಮ ಕ್ಷೇತ್ರದಲ್ಲಿ ಗಣಪತಿ ಕೂರಿಸಿದ ಮುಸ್ಲಿಂ ಬಿಜೆಪಿ ನಾಯಕಿ ರುಬಿ ಆಸಿಫ್ ಖಾನ್‌ಗೆ ಸಂಕಷ್ಟ ಎದುರಾಗಿದೆ. ಮುಸ್ಲಿಂ ಮುಖಂಡರು ರುಬಿ ಆಸಿಫ್ ಖಾನ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿದ್ದು, ಮತ್ತೊಂದು ದೇವರ ಪೂಜೆ ನಿಷಿದ್ಧವಾಗಿದೆ. ಇಸ್ಲಾಂ ಅನುಸರಿಸಿದರೆ ಮಾತ್ರ ಮುಸ್ಲಿಂ ಆಗಲು ಸಾಧ್ಯ. ಅಲ್ಲಾ ಹೊರತು ಪಡಿಸಿ ಇತರ ದೇವರ ಮುಂದೆ ಕೈಮುಗಿಯುವುದು, ತಲೆ ಬಾಗುವುದು ಕೂಡ ಇಸ್ಲಾಂಗೆ ವಿರುದ್ಧವಾಗಿದೆ. ಹೀಗಾಗಿ ರುಬಿ ಆಸಿಫ್ ಖಾನ್ ಮುಸ್ಲಿಂ ಅಲ್ಲ. ಆಕೆಯ ವಿರುದ್ದ ಫತ್ವಾ ಹೊರಡಿಸಲಾಗಿದೆ ಎಂದು ಮೌಲ್ವಿ ಹೇಳಿದ್ದಾರೆ.
ಉತ್ತರ ಪ್ರದೇಶದ(Uttar Pradesh) ದಿಯೋಬಾಂದ್‌ನಲ್ಲಿ ಈ ಘಟನೆ ನಡೆದಿದೆ. ರುಬಿ ಆಸಿಫ್ ಖಾನ್ ಕ್ಷೇತ್ರದಲ್ಲಿನ ಗಣೇಶನ ಹಬ್ಬಕ್ಕೆ(Ganesh Festival) ಸ್ಥಳೀಯ ಶಾಸಕಿ ರುಬಿ ಆಸಿಫ್ ಖಾನ್‌ಗೆ ಆಹ್ವಾನ ನೀಡಲಾಗಿದೆ. ಹಿಂದೂ ಮುಖಂಡರು, ಹಿಂದೂ ಸಂಘಟನೆಗಳು ಸೇರಿ ಈ ಗಣೇಶ ಹಬ್ಬ(Ganesh Chaturthi) ಆಚರಿಸಿತ್ತು. ಆಹ್ವಾನದ ಮೇರೆಗೆ ಗಣೇಶ ಹಬ್ಬಕ್ಕೆ ಆಗಮಿಸಿದ ಶಾಸಕಿ ಗಣಪತಿ ಕೂರಿಸಿ, ಆರಿತಿ ಎತ್ತಿದ್ದಾರೆ. ಬಳಿಕ ಕೈಮುಗಿದು ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿತ್ತು.
ಗಣಪತಿ ಭಕ್ತ PSI ಆರೀಫ್ ಮುಶಾಪುರಿಗೆ ಹನುಮಂತ ಎಂದರೆ ಅಚ್ಚುಮೆಚ್ಚು..!
ಮುಸ್ಲಿಂ ನಾಯಕಿ(BJP Muslims leader) ಗಣೇಶನ ಹಬ್ಬ ಆಚರಿಸುತ್ತಿರುವುದಾಗಿ ವಿಡಿಯೋ ಹರಿದಾಡಿತ್ತು. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ. ಇದರಿಂದ ಮುಸ್ಲಿಂ ಧರ್ಮಗುರು ಮುಫ್ತಿ ಅರ್ಶದ್ ಫಾರೂಖಿ, ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಸಮುದಾಯ ನಿಮ್ಮನ್ನು ಹೊರಗೆ ಹಾಕುತ್ತಿದೆ. ನೀವು ಅಲ್ಲಾಗೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ ಎಂದು ಫಾರೂಖಿ ಹೇಳಿದ್ದಾರೆ.
ರುಬಿ ಆಸಿಫ್ ಖಾನ್ ಇಸ್ಲಾಂ ವಿರೋಧಿಯಾಗಿದ್ದಾರೆ. ಹಿಂದೂ(Hindu) ದೇವರ ಪೂಜಿಸಿ ಇಸ್ಲಾಂ ಅವಮಾನಿಸಿದ್ದಾರೆ ಎಂದು ಮುಸ್ಲಿಂ ಸಮುದಾಯ ಆಕ್ರೋಶ ಹೊರಹಾಕಿದೆ. ಬಿಜೆಪಿ ನಾಯಕಿ ಪ್ರಚಾರಕ್ಕಾಗಿ ಈ ಕಸರತ್ತು ಮಾಡಿದ್ದಾರೆ. ಇದು ಒಪ್ಪುವ ವಿಚಾರವಲ್ಲ. ಹಿಂದೂಗಳ ಮತ ಸೆಳೆಯಲು ಈ ರೀತಿ ಮಾಡಿದ್ದಾರೆ. ಇಸ್ಲಾಂ ವಿರುದ್ಧ ನಡೆಯನ್ನು ಮುಸ್ಲಿಮರು ಎಂದಿಗೂ ಒಪ್ಪುವುದಿಲ್ಲ. ಇಂತಹ ನಡೆಗಳಿಂದ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶ ನೀಡಿದ್ದೀರಿ ಎಂದು ಮುಸ್ಲಿಂ ಮಂಚ್ ಉಪಾಧ್ಯಕ್ಷ ಆರೋಪಿಸಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ದರ್ಶನ ಪಡೆದ ಮುಸ್ಲಿಂ ಕುಟುಂಬ
ಈ ಆರೋಪ, ಫತ್ವಾಗಳಿಗೆ ಬಿಜೆಪಿ ನಾಯಕ ರುಬಿ ಆಸಿಫ್ ಖಾನ್ ತಿರುಗೇಟು ನೀಡಿದ್ದಾರೆ. ಮುಸ್ಲಿಂ ಮುಖಂಡರು, ಧರ್ಮಗುರುಗಳು ಭಾರತವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾನು ಗಣೇಶ ಹಬ್ಬದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ್ದೇನೆ. ಗಣೇಶ ಹಬ್ಬವನ್ನು ಅಷ್ಟೇ ಭಕ್ತಿಯಿಂದ ಆಚರಿಸಿದ್ದೇನೆ. ಇದರಿಂದ ನಾನು ಹಿಂದೂ ಆಗಿಲ್ಲ. ಅಥವಾ ಮುಸ್ಲಿಂ ಸಮುದಾಯದಿಂದ ಹೊರಹೋಗಿಲ್ಲ. ಇತರ ಧರ್ಮವನ್ನು ಗೌರವಿಸುವುದನ್ನು ಮೌಲ್ವಿಗಳು ಕಲಿಯಬೇಕಿದೆ ಎಂದು ರುಬಿ ಆಸಿಫ್ ಖಾನ್ ತಿರುಗೇಟು ನೀಡಿದ್ದಾರೆ.