Maha Vir Chakra;  ಪ್ರಾಣತ್ಯಾಗ ಮಾಡಿದ ಕಮಾಂಡಿಂಗ್‌ ಆಫೀಸರ್‌ ಸಂತೋಷ್‌ ಬಾಬು ಅವರಿಗೆ ಮಹಾವೀರ ಚಕ್ರ

By Suvarna News  |  First Published Nov 23, 2021, 5:43 PM IST

* ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಸಂತೋಷ್‌ ಬಾಬು ಅವರಿಗೆ ಮರಣೋತ್ತರ ಮಹಾವೀರ ಚಕ್ರ 
* ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರದಾನ
* ಕಳೆದ ವರ್ಷ ಜೂನ್ ನಲ್ಲಿ ಚೀನಾ ಸೈನಿಕರೊಂದಿಗೆ ನಡೆದಿದ್ದ ಹೋರಾಟ
* ಭಾರತದ ಇಪ್ಪತ್ತು ಯೋಧರು ಪ್ರಾಣ ತ್ಯಾಗ ಮಾಡಿದ್ದರು


ನವದೆಹಲಿ(ನ. 23) ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಮಾಂಡಿಂಗ್‌ ಆಫೀಸರ್‌  ಸಂತೋಷ್‌ ಬಾಬು (Colonel Santosh Babu) ಅವರಿಗೆ ಮರಣೋತ್ತರವಾಗಿ  ಮಹಾವೀರ ಚಕ್ರ ಪ್ರದಾನ (Maha Vir Chakra posthumously) ಮಾಡಲಾಗಿದೆ . ರಾಷ್ಟ್ರಪತಿ ರಾಮನಾಥ್ ಕೋವಿಂದ (Ram Nath Kovind) ಗೌರವ ನೀಡಿದ್ದಾರೆ.

16ನೇ ಬಿಹಾರ ಬೆಟಾಲಿಯನ್‌ನ ಕಮಾಂಡಿಂಗ್‌ ಆಫೀಸರ್‌ ಆಗಿದ್ದ ಸಂತೋಷ್‌ ಬಾಬು (Colonel Santosh Babu) ಅವರಿಗೆ ಭಾರತ ಸರ್ಕಾರ(Indian Govt) ಮರಣೋತ್ತರವಾಗಿ ಎರಡನೇ ಅತೀ ದೊಡ್ಡ ಶೌರ್ಯ ಪುರಸ್ಕಾರ ನೀಡಿ ಗೌರವಿಸಿದೆ.

Tap to resize

Latest Videos

undefined

ಕಳೆದ ವರ್ಷ ಜೂನ್ ನಲ್ಲಿ  ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಭಾರತ (India) ಹಾಗೂ ಚೀನಾ (China) ಸಂಘರ್ಷದಲ್ಲಿ ಹುತಾತ್ಮರಾಗಿದ್ದರು.  16ನೇ ಬಿಹಾರ ಬೆಟಾಲಿಯನ್‌ನ ಕಮಾಂಡಿಂಗ್‌ ಆಫೀಸರ್‌ ಆಗಿದ್ದ ಸಂತೋಷ್‌ ಬಾಬು ಹೋರಾಟದಲ್ಲಿ ಬಲಿದಾನ ಮಾಡಿದ್ದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್   ಗೌರವವನ್ನು  ಸಂತೋಷ್ ಬಾಬು ಅವರ ಪತ್ನಿ ಬಿ ಸಂತೋಷಿ ಮತ್ತು ತಾಯಿ ಮಂಜುಳಾ ಅವರಿಗೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿದ್ದರು.

Vir Chakra: ಭಾರತೀಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್‌ಗೆ ಇಂದು ಪ್ರಶಸ್ತಿ ಪ್ರದಾನ!

ಚೀನಾದೊಂದಿಗಿನ  ಘರ್ಷಣೆಯಲ್ಲಿ ಬದುಕುಳಿದ 3 ಮಧ್ಯಮ ರೆಜಿಮೆಂಟ್‌ನ ಹವಾಲ್ದಾರ್ ತೇಜಿಂದರ್ ಸಿಂಗ್ ಅವರಿಗೂ ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ 20 ಯೋಧರು ಪ್ರಾಣ ತ್ಯಾಗ ಮಾಡಿದ್ದರು. ಡ್ರ್ಯಾಗನ್ ರಾಷ್ಟ್ರ ಕಾರಣವಿಲ್ಲದೆ ನಮ್ಮ ಸೈನಿಕರ ಮೇಲೆ ದಾಳಿ ಮಾಡಿತ್ತು. ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ನಾಯಿಬ್ ಸುಬೇದಾರ್ ನುದುರಾಮ್ ಸೊರೆನ್, ಕೆ ಪಳನಿ, ನಾಯಕ್ ದೀಪಕ್ ಸಿಂಗ್ ಮತ್ತು ಸಿಪಾಯಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ (Vir Chakra)ಪುರಸ್ಕಾರ ನೀಡಿ ಗೌರವ ನಮನ ಸಲ್ಲಿಸಲಾಯಿತು.

ಜೂನ್ 15, 2020 ರಂದು, 20 ಭಾರತೀಯ ಸೈನಿಕರು ಚೀನಾದೊಂದಿಗೆ  ಮುಖಾಮುಖಿಯಾಗುತ್ತಾರೆ  ಗಾಲ್ವಾನ್ ವ್ಯಾಲಿ ಪ್ರದೇಶವು ಲಡಾಖ್ ಮತ್ತು ಅಕ್ಸಾಯ್ ಚೀನಾ ನಡುವಿನ ಇಂಡೋ-ಚೀನಾ ಗಡಿಗೆ ಹತ್ತಿರದಲ್ಲಿದೆ. ಈ ಪ್ರದೇಶದಲ್ಲಿ, ಅಕ್ಸೈನ್ ವಾಸ್ತವ ನಿಯಂತ್ರಣ ರೇಖೆ ಚೀನಾವನ್ನು ಭಾರತದಿಂದ ವಿಭಜಿಸುತ್ತದೆ.

ಗಾಲ್ವಾನ್ ನದಿಯ ಮೂಲವು ನಿಯಂತ್ರಣ ಗಡಿಯುದ್ದಕ್ಕೂ ಚೀನಾದ ಕಡೆಗೆ ಇರುವ ಅಕ್ಸಾಯ್ ಚಿನ್‌ನಲ್ಲಿದೆ ಮತ್ತು ಪೂರ್ವದ ಕಡೆ ಲಡಾಖ್‌ಗೆ ಹರಿಯುತ್ತದೆ, ಮತ್ತು ಇದು ನಿಯಂತ್ರಣ ಗಡಿಯನ್ನು ದಾಟಿ ಭಾರತದ ಕಡೆಗೆ ಇರುವ ಶಿಯೋಕ್ ನದಿಯನ್ನು  ಸೇರುವ ಪ್ರದೇಶ ಕಣಿವೆಗಳಿಂದ ಕೂಡಿದ್ದು ದುರ್ಗಮವಾಗಿದೆ. ಗಾಲ್ವಾನ್ ಕಣಿವೆ ಪಶ್ಚಿಮದಲ್ಲಿ ಲಡಾಖ್ ಮತ್ತು ಪೂರ್ವದಲ್ಲಿ ಅಕ್ಸಾಯ್ ಚಿನ್ ನಡುವೆ ಇದೆ. ಪಶ್ಚಿಮ ತುದಿಯಲ್ಲಿ ಶ್ಯೋಕ್ ನದಿ ಮತ್ತು ‘ದಾರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ’  ರಸ್ತೆಯೂ ಇದೆ.

ವೀರ ಚಕ್ರ ಅಭಿನಂದನ್;   ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Wing Commander Abhinandan Varthaman) ಅವರಿಗೆ ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅವರು ವೀರ ಚಕ್ರವನ್ನು (Vir Chakra) ಪ್ರದಾನ ಮಾಡಿದ್ದರು.

ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ವಾಯುಪಡೆ ಬಡ್ತಿ ನೀಡಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ F-16 ಅನ್ನು ಹೊಡೆದುರುಳಿಸಿದ್ದರು.  ಆದರೆ ಅವರ ವಿಮಾನವನ್ನು ಶತ್ರು ಪಡೆಗಳು ಹೊಡೆದುರುಳಿಸಿದ ನಂತರ ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ವಾಯುದಾಳಿ áááಮರುದಿನವೇ, ವಾಯುಪಡೆ ವಿಮಾನದ ಪತನದ ಕಾರಣ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ  ಗಡಿಯೊಳಗೆ ಹೋಗಿ ಬಿದ್ದಿದ್ದರು. ಆದರೆ ಭಾರತದ ವೀರ ಪುತ್ರನನ್ನು ಪಾಕಿಸ್ತಾನಿಗಳು ಗಡಿಯವರೆಗೆ ತಂದು ಹಸ್ತಾಂತರ ಮಾಡಿ ಹೋಗಿದ್ದರು.

 

click me!