ಎನರ್ಜಿ ಕ್ಷೇತ್ರದಲ್ಲಿ ಭಾರತದಲ್ಲಿ ಆಗಿರುವ ಬದಲಾವಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಗೋವಾದಲ್ಲಿ ನಡೆದ ಜಿ20 ಎನರ್ಜಿ ಸಭೆಯಲ್ಲಿ ಕಳೆದ 9 ವರ್ಷದಲ್ಲಿ ಭಾರತ ಎನರ್ಜಿ ಸೆಕ್ಟರ್‌ನಲ್ಲಿ ಆಗಿರುವ ಸಾಧನೆಯ್ನು ವಿವರಿಸಿದ್ದಾರೆ.
ನವದೆಹಲಿ(ಜು.22) ಕಳೆದ 9 ವರ್ಷದಲ್ಲಿ ಭಾರತ 190 ಕುಟುಂಬಕ್ಕೆ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಭಾರತದ ಪ್ರತಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗೋವಾದಲ್ಲಿ ನಡೆದ ಜಿ20 ಎನರ್ಜಿ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ಸಮಾನ, ಎಲ್ಲರನ್ನೂ ಒಳಗೊಳ್ಳುವ ಹಾಗೂ ಸುಸ್ಥಿರ ಎನರ್ಜಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
2015ರಲ್ಲಿ ನಾವು LED ಲೈಟ್ ವಿತರಿಸುವ ಸಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆವು. ಇದೀಗ ವಿಶ್ವದ ಅತೀ ದೊಡ್ಡ LED ವಿತರಣೆ ಕಾರ್ಯಾಕ್ರಮವಾಗಿ ಹೊರಹೊಮ್ಮಿದೆ. ಇದರಿಂದ ಪ್ರತಿ ವರ್ಷ ಭಾರತ 45 ಬಿಲಿಯನ್ ಯುನಿಟ್ ವಿದ್ಯುತ್ ಉಳಿತಾಯ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಗ್ರೀನ್ ಎನರ್ಜಿ ಹಾಗೂ ಶಕ್ತಿ ಪರಿವರ್ತನೆಯನ್ನು ಭಾರತ ತನ್ನ ಶಕ್ತಿ ಮೀರಿ ಪ್ರಯತ್ನಗಳನ್ನು ಮಾಡುತ್ತಿದೆ. ಹವಾಮಾನ ವೈಪರಿತ್ಯ ಸೇರಿದಂತೆ ಎದುರಾಗುತ್ತಿರುವ ಹಲವು ಸವಾಲುಗಳಿಗೆ ಭಾರತ ಪರಿಸರಕ್ಕೆ ಪೂರಕವಾಗಿ ಸಾಗುವ ಬದ್ಧತೆಯನ್ನು ತೋರಿದೆ ಎಂದು ಮೋದಿ ಹೇಳಿದ್ದಾರೆ.
ಯುಪಿಐ 4 ದೇಶಗಳಿಗೆ ವಿಸ್ತರಣೆ: ಶ್ರೀಲಂಕಾದಲ್ಲೂ ಈಗ ಯುಪಿಐ ಹಣ ಪಾವತಿ ಸೇವೆ ಲಭ್ಯ
ಸೌರ ಮತ್ತು ಪವನ ಶಕ್ತಿಯ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತ ಜಾಗತಿಕ ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದಕ್ಕಾಗಿ ಹಲವು ಯೋಜನೆಗಳ ಮೂಲಕ ಗುರಿ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ಪಾವಗಡ ಸೋಲಾರ್ ಪಾರ್ಕ್, ಮೊಧೇರಾ ಸೋಲಾರ್ ಗ್ರಾಮಕ್ಕೆ ಭೇಟಿ ನೀಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಮೋದಿ ಹೇಳಿದ್ದಾರೆ.
ಕೃಷಿಯಲ್ಲಿ ಸೋಲಾರ ಬಳಕೆಯನ್ನು ಭಾರತ ಹೆಚ್ಚಿಸಿದೆ. ಈ ಮೂಲಕ ಪರಿಸರಕ್ಕೆ ಪೂರಕವಾಗಿ ಹಾಗೂ ಸ್ವಾಭಾವಿಕ ಶಕ್ತಿ ಬಳಕೆ ಮೂಲಕ ಕೃಷಿಯಲ್ಲಿ ಸ್ವಾಲಂಬಿಯಾಗಲು ಭಾರತ ಹೆಜ್ಜೆ ಇಡುತ್ತಿದೆ. 2023ರ ವೇಳೆಗೆ ಭಾರತದ ಎಲೆಕ್ಟ್ರಿಕ್ ವಾಗನ ಮಾರುಕಟ್ಟೆ 10 ಮಿಲಿಯನ್ ವಾರ್ಷಿಕ ಮಾರಾಟ ಪಡೆಯಲಿದೆ. ಪ್ರಸಕ್ತ ವರ್ಷದಿಂದ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಆರಂಭಿಸಲಾಗಿದೆ. 2025ರ ವೇಳೆಗೆ ಸಂಪೂರ್ಣ ಭಾರತದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಾಗಲಿದೆ. ಇನ್ನು ಡಿಕಾಬ್ರನೈಸ್ ಮಾಡಲು ಹಸಿರು ಹೈಡ್ರೋಜನ್ ಮಿಷನ್ ಆರಂಭಿಸಲಾಗಿದೆ. ಹಸಿರು ಹೈಡ್ರೋಜನ್ ಉತ್ಪನ್ನಗಳ ಬಳಕೆ ಹಾಗೂ ರಫ್ತಿಗೆ ಭಾರತ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿದೇಶ ಭೇಟಿಗಾಗಿ ಸರ್ಕಾರದಿಂದ 5 ವರ್ಷದಲ್ಲಿ 254 ಕೋಟಿ ಖರ್ಚು!
ಹವಾಮಾನ ಗುರಿಗಳನ್ನು ಪೂರೈಸಲು, ಹಸಿರು ಹೂಡಿಕೆಯನ್ನು ಉತ್ತೇಜಿಸಲು ಭಾರತ ಕೆಲಸ ಮಾಡುತ್ತಿದೆ. ಲಕ್ಷಾಂತರ ಹಸಿರು ಉದ್ಯೋಗ ಸೃಷ್ಟಿಸಲು ಈ ಯೋಜನೆಗಳು ಸಹಕಾರಿಯಾಗಿದೆ. ಜಿ20 ಎನರ್ಜಿ ಸಭೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಗ್ರೀನ್ ಗಿಡ್ಸ್ ಯೋಜನಾ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಒಂದುು ಸೂರ್ಯ, ಒಂದು ಜಗತ್ತು ಹಾಗೂ ಸೌರ ಒಕ್ಕೂಟದ ಒಂದು ಗ್ರಿಡ್ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.