Covid 19 Vaccine: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಲಸಿಕೆ ಪಡೆದವರಿಗೆ 10% ಡಿಸ್ಕೌಂಟ್!‌

By Suvarna NewsFirst Published Nov 29, 2021, 11:03 AM IST
Highlights

*ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಶೇ 10% ರಿಯಾಯಿತಿ
*ಮಧ್ಯಪ್ರದೇಶದ ಮಂಡಸೌರ್ ಜಿಲ್ಲಾ ಅಬಕಾರಿ ಇಲಾಖೆ ಆದೇಶ
*ವ್ಯಾಕ್ಸಿನೇಷನ್ ಪ್ರೋತ್ಸಾಹಿಸಲು ಈ ಕ್ರಮ : ಅಬಕಾರಿ ಅಧಿಕಾರಿ

ಮಂಡಸೌರ್(ನ.29): ಜಗತ್ತಿನ್ನೆಲ್ಲೆಡೆ ಕೊರೊನಾ ಹೊಸ ತಳಿ ಒಮಿಕ್ರೋನ್‌ (Omicron) ಭೀತಿ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಕೊರೊನಾ ತಡೆಗಟ್ಟಲು ಪ್ರಜೆಗಳಿಗೆ ಲಸಿಕೆ (Vaccine) ನೀಡಲು ಪ್ರಪಂಚದ ಎಲ್ಲ ದೇಶಗಳು ಇನ್ನಿಲ್ಲದ ಹರಸಾಹಸಪಡುತ್ತಿವೆ. ಭಾರತದಲ್ಲಿ ಈಗಾಗಲೇ 117 ಕೋಟಿ ಲಸಿಕೆ ನೀಡಿದ್ದು ಲಸಿಕಾಕರಣ ಪ್ರಕ್ರಿಯೆ ಭರದಿಂದ ಸಾಗಿದೆ. ಈ ಮಧ್ಯೆ  ಲಸಿಕಾಕರಣವನ್ನು ಉತ್ತೇಜಿಸಲು ಸಾಂಕ್ರಾಮಿಕ ಕೊರೊನಾವೈರಸ್ ವಿರುದ್ಧ ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮದ್ಯದ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ನೀಡಲು ಮಧ್ಯಪ್ರದೇಶದ ಮಂಡಸೌರ್ (Mandsaur- Madhya Pradesh) ಜಿಲ್ಲಾ ಅಬಕಾರಿ ಇಲಾಖೆ ಮಂಗಳವಾರ (ನ.23) ಆದೇಶ ಹೊರಡಿಸಿದೆ.

ಮಂಡಸೌರ್‌ನ ಜಿಲ್ಲಾ ಅಬಕಾರಿ ಅಧಿಕಾರಿ (excise officer) ಅನಿಲ್ ಸಚನ್ ಮಾತನಾಡಿ, ಸಿತಾಮೌ ಫಾಟಕ್, ಭೂನಿಯಾಖೇಡಿ ಮತ್ತು ಹಳೆಯ ಬಸ್ ನಿಲ್ದಾಣದ ಮದ್ಯದ ಅಂಗಡಿಗಳಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್‌ನ (Covid 19 Vaccination) ಎರಡೂ ಡೋಸ್‌ಗಳ ಪುರಾವೆ (Proof) ನೀಡಿದರೆ ಜನರಿಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Amy Winehouse: ಡ್ರಗ್ಸ್, ಮದ್ಯ ವ್ಯಸನಿಯಾಗಿದ್ದ ಸಿಂಗರ್ ಕೊನೆಯ Concertನಲ್ಲಿ ಧರಿಸಿದ್ದ ಡ್ರೆಸ್ 1.80 ಕೋಟಿಗೆ ಮಾರಾಟ

ಮದ್ಯ ಗ್ರಾಹಕರನ್ನು ವ್ಯಾಕ್ಸಿನೇಷನ್ ಕಡೆಗೆ ಆಕರ್ಷಿಸಲು ಮತ್ತು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಎರಡೂ ಪ್ರಮಾಣದ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತರುವ ಗ್ರಾಹಕರಿಗೆ ಮದ್ಯದ ಖರೀದಿಯಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುವುದು. ಅಲ್ಲದೆ, ಈ ಯೋಜನೆಯಲ್ಲಿ ಯಾವುದೇ ದುರುಪಯೋಗವಾಗದಂತೆ ವಿಶೇಷ ಕಾಳಜಿ ಕೂಡ ವಹಿಸಲಾಗುವುದು" ಎಂದು ಎಂದು ಸಚನ್ ಹೇಳಿದ್ದಾರೆ. ಭಾರತದಲ್ಲಿ ನೀಡಲಾದ COVID-19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 117 ಕೋಟಿ ದಾಟಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ (ನ. 23) ತಿಳಿಸಿದೆ.

ವಿಶ್ವದ ಅತ್ಯಂತ ಪುರಾತನ ಮದ್ಯ ಫ್ಯಾಕ್ಟರಿಯಲ್ಲಿ ಸಿಕ್ತು 1,400 ವರ್ಷ ಹಳೆಯ ಉಂಗುರ!

ಇಸ್ರೇಲ್‌ನ ಪುರಾತತ್ವ ಶಾಸ್ತ್ರಜ್ಞರು ವಿಶ್ವದ ಅತಿದೊಡ್ಡ ಪುರಾತನ ಮದ್ಯದ ಕಾರ್ಖಾನೆಯಲ್ಲಿ ಎರಡು ಚಿನ್ನದ ಉಂಗುರಗಳನ್ನು ಪತ್ತೆ ಹಚ್ಚಿದ್ದಾರೆ. ಆ ಸಮಯದಲ್ಲಿ ಜನರು ಹ್ಯಾಂಗೊವರ್ ತಡೆಯಲು ಈ ಉಂಗುರವನ್ನು ಧರಿಸುತ್ತಿದ್ದರು ಎಂದು ತಜ್ಞರು ಅಂದಾಜಿಸಿದ್ದಾರೆ. ಇಸ್ರೇಲಿ ಪುರಾತತ್ವಶಾಸ್ತ್ರಜ್ಞರು ಈ ಅದ್ಭುತ ಉಂಗುರಗಳನ್ನು ದೇಶದ ಮಧ್ಯ ಪ್ರದೇಶದಲ್ಲಿರುವ ಯವ್ನೆ ನಗರದಲ್ಲಿ ಕಂಡುಕೊಂಡಿದ್ದಾರೆ. 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಬೈಜಾಂಟೈನ್ ಲಿಕ್ಕರ್ ಫ್ಯಾಕ್ಟರಿ ಇರುವ ಸ್ಥಳವೂ ಇದೇ.

Crime News; ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಮಗಳ ಕತ್ತು ಸೀಳಿದ ಕಲಬುರಗಿಯ ಪಾಪಿ

ಪ್ರಾಚೀನ ಕಾಲದಲ್ಲಿ ಈ ಕಾರ್ಖಾನೆಯಿಂದ ಪ್ರತಿ ವರ್ಷ 20 ಲಕ್ಷ ಲೀಟರ್ ಮದ್ಯ ಉತ್ಪಾದನೆಯಾಗುತ್ತಿತ್ತು. ನೇರಳೆ ಬಣ್ಣದ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಈ ಉಂಗುರಗಳು ತುಂಬಾ ಹೊಳೆಯುತ್ತವೆ. ಈ ಉಂಗುರಗಳನ್ನು ಶ್ರೀಮಂತ ವ್ಯಕ್ತಿಯೊಬ್ಬರು ಧರಿಸಿದ್ದರು ಎಂದು ಹೇಳಲಾಗಿದೆ. ಈ ಉಂಗುರಗಳು ಏಳನೇ ಶತಮಾನದ್ದು ಎನ್ನಲಾಗಿದ್ದು, ಈ ಉಂಗುರಗಳನ್ನು ಧರಿಸಿದ ಕೊನೆಯ ವ್ಯಕ್ತಿ ವೈನ್ ಟೇಸ್ಟರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ನೇರಳೆ ಕಲ್ಲು ಮದ್ಯದ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.

ಉಂಗುರವನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಧರಿಸಬಹುದು

ಪ್ರಾಚೀನ ಕಾಲದಲ್ಲಿ, ನೇರಳೆ ಕಲ್ಲು ಹ್ಯಾಂಗೊವರ್‌ನಿಂದ ದೂರವಿರಿಸುತ್ತದೆ ಎಂದು ನಂಬಲಾಗಿತ್ತು. ಇಸ್ರೇಲ್‌ನ ಪುರಾತತ್ವ ಇಲಾಖೆಯು ಈ ಉಂಗುರಗಳ ಚಿತ್ರಗಳನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಬೈಬಲ್ ನಲ್ಲೂ ಜಂಬುಮಣಿ (ಹರಳೆಣ್ಣೆ) ಉಲ್ಲೇಖವಿದೆ ಎಂದೂ ಅವರು ತಿಳಿಸಿದ್ದಾರೆ. ಈ ಕಲ್ಲಿನಲ್ಲಿ ಅನೇಕ ಗುಣಗಳು ಅಡಗಿವೆ ಎಂದು ನಂಬಲಾಗಿದೆ. ವಿಪರ್ಯಾಸವೆಂದರೆ, ಮದ್ಯದ ಕಾರ್ಖಾನೆಯ ಬಳಿ ಉಂಗುರ ಕಂಡುಬಂದಿರುವುದರಿಂದ ಹ್ಯಾಂಗೊವರ್‌ ತಡೆಯುವುದು ಬಳಸಲಾಘುತ್ತಿತ್ತು ಎನ್ನಲಾಗಿದೆ.

click me!