Bengaluru: Ambedkar School of Economics University ನೂತನ ಕಟ್ಟಡ ಉದ್ಘಾಟಿಸಲಿರುವ ಪ್ರಧಾನಿ ಮೋದಿ!

By Kannadaprabha NewsFirst Published Nov 29, 2021, 7:19 AM IST
Highlights

*ಬೇಸ್‌ ಕ್ಯಾಂಪಸ್‌ನ ನೂತನ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣ
*ಡಿ.6ಕ್ಕೆ ಜ್ಞಾನಭಾರತಿ ಕ್ಯಾಂಪಸ್‌ನ ಎಕನಾಮಿಕ್ಸ್‌ ಸ್ಕೂಲ್‌ ವಿವಿ ಉದ್ಘಾಟನೆ
*ಮೋದಿ ಸಾಗುವ ದಾರಿಯನ್ನು ಡಾಂಬರೀಕರಿಸುವ ಕಾರ್ಯ ಶುರು

ಬೆಂಗಳೂರು(ನ.29): ಬೆಂಗಳೂರು ವಿಶ್ವವಿದ್ಯಾಲಯದ (Bengaluru University) ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ‘ಅಂಬೇಡ್ಕರ್‌ ಸ್ಕೂಲ್‌ ಆಫ್‌  ಎಕನಾಮಿಕ್ಸ್‌ ವಿಶ್ವವಿದ್ಯಾಲಯದ’ (Dr. B. R. Ambedkar School of Economics University) (BASE) ನೂತನ ಕಟ್ಟಡ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ  (PM Narendra Modi) ಅವರು ಡಿ.6ರಂದು ಆಗಮಿಸುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಮೋದಿ ಅವರು ಸಾಗುವ ದಾರಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಡಾಂಬರೀಕರಿಸುವ ಕಾರ್ಯ ಶುರುವಾಗಿದೆ. ನಾಗರಬಾವಿ ಜಂಕ್ಷನ್‌ನಿಂದ ಬೇಸ್‌ ಕ್ಯಾಂಪಸ್‌ವರೆಗೂ ರಸ್ತೆಗೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇನ್ನು ಮೋದಿ ಅವರು ಉದ್ಘಾಟಿಸಲಿರುವ ಬೇಸ್‌ ಕ್ಯಾಂಪಸ್‌ನ ನೂತನ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕ್ಯಾಂಸಪ್‌ನಲ್ಲಿರುವ ಡಾ ಬಿ.ಆರ್‌.ಅಬೇಡ್ಕರ್‌ ಅವರ ಬೃಹತ್‌ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಇಡೀ ಕ್ಯಾಂಪಸ್‌ ಅನ್ನು ಸ್ವಚ್ಛಗೊಳಿಸಿ ಆಕರ್ಷಣೀಯಗೊಳಿಸಲಾಗುತ್ತಿದೆ.

ಇನ್ನು, ಇಲ್ಲಿನ ಸಿದ್ಧತೆಗಳ ಉಸ್ತುವಾರಿ ಹೊತ್ತಿರುವ ಸ್ಥಳೀಯ ಶಾಸಕರೂ ಆದ ವಸತಿ ಸಚಿವ ವಿ.ಸೋಮಣ್ಣ (V Somanna) , ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ (D CN Ashwath Narayan) ನಿಗದಿತ ದಿನಕ್ಕೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರ ಕೂಡ ಸಚಿವ ಸೋಮಣ್ಣ ಕ್ಯಾಂಪಸ್‌ಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ (London Scholl of Economics) ಮಾದರಿಯಲ್ಲಿ ಸ್ಥಾಪಿಸಲಾಗಿರುವ ಬೇಸ್‌ ಅನ್ನು 2017ರಲ್ಲಿ ಸ್ಥಾಪಿಸಿ ಬಿಎಸ್ಸಿ (ಹಾನರ್ಸ್‌) ಎಕನಾಮಿಕ್ಸ್‌ ಕೋರ್ಸಿಗೆ ಮೊದಲ ಬ್ಯಾಚ್‌ ವಿದ್ಯಾರ್ಥಿಗಳನ್ನು ದಾಖಲಿಸಲಾಗಿತ್ತು. ನಂತರ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನೀಡಲಾದ ನಿರ್ಧಿಷ್ಟಪ್ರದೇಶದಲ್ಲಿ ತನ್ನದೇ ಆದ ಸುಂದರ ಕ್ಯಾಂಪಸ್‌, ಸುಸಜ್ಜಿತ ಕಟ್ಟಡದೊಂದಿಗೆ ಮೋದಿ ಅವರ ಸ್ವಾಗತಕ್ಕೆ ಸಿದ್ಧವಾಗಿದೆ.

ಗ್ರಂಥಪಾಲಕರಿಗೆ ತಾಂತ್ರಿಕ ಪರಿಣಿತಿ ಮುಖ್ಯ, ವಿಟಿಯು ಉಪಕುಲಪತಿ ಕರಿಸಿದ್ದಪ್ಪ ಅಭಿಪ್ರಾಯ

ವಿಷಯ ಮತ್ತು ಕಲಿಕೆಯ ಸ್ಥಳವು ಹೆಚ್ಚು ಕ್ರಿಯಾತ್ಮಕವಾಗುತ್ತಿರುವ ಕಾರಣ ಗ್ರಂಥಪಾಲಕರು (Librarians) ತಾಂತ್ರಿಕ ಪರಿಣತರಾಗಿರಬೇಕು ಎಂದು ವಿಟಿಯು ಉಪಕುಲಪತಿ ಪ್ರೊ.ಕರಿಸಿದ್ದಪ್ಪ (VTU  vice chancellor) ಹೇಳಿದರು. ವಿಟಿಯು ಬೆಳಗಾವಿ (VTU belagavi) ಮತ್ತು ಎಲ್ಐಎಸ್ ಅಕಾಡೆಮಿ ಬೆಂಗಳೂರು (bengaluru) ಸಹಯೋಗದೊಂದಿಗೆ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದ ವೃತ್ತಿಪರರಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾವೀಣ್ಯತೆಯ ಕೋರ್ಸ್‌ಗಳ ಕುರಿತಾಗಿ ನಗರದ ನಾಗರಭಾವಿ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು (Seminar) ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಪಿಟಿಇಎಲ್‌ ಮತ್ತು ಸ್ವಯಂ ಮೂಲಕ ವಿಷಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು. 

students scholarship: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಲ್‌ಐಎಸ್ ಅಕಾಡೆಮಿಯೊಂದಿಗೆ ಒಡಂಬಡಿಕೆ (ಎಂಒಯು) ಗೆ ಸಹಿ ಹಾಕಿದ ನಂತರ ವಿಟಿಯುನ ರಿಜಿಸ್ಟ್ರಾರ್ ಪ್ರೊ.ಎ.ಎಸ್.ದೇಶಪಾಂಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ವಿಟಿಯುನ ಪ್ರಾವೀಣ್ಯತೆಯ ಕೋರ್ಸ್‌ಗಳ ಸಹಾಯದಿಂದ ಗ್ರಂಥಪಾಲಕ ಸಮುದಾಯವನ್ನು ಮೇಲ್ದರ್ಜೆಗೆ ಏರಿಸುವಂತೆ ಸಲಹೆ ನೀಡಿದರು. ಎನ್‍ಇಪಿ-2020 ರ ಪ್ರಮುಖ ಅಡಿಯಲ್ಲಿ ವಿಟಿಯು ವಿಶಾಲವಾದ ಗ್ರಂಥಾಲಯಗಳಿಗೆ ಸೇವೆ ಸಲ್ಲಿಸಲು ಹೊಸ ತಲೆಮಾರಿನ ಗ್ರಂಥಪಾಲಕರನ್ನು ಉತ್ಪಾದಿಸಲು ಲೈಬ್ರರಿ ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ವಿಟಿಯು ಮಾಸ್ಟರ್ ಇನ್ ಲೈಬ್ರರಿ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ (ಎಂಎಸ್‌ಸಿ-ಎಲ್‌ಟಿಎಂ) ಪ್ರೋಗ್ರಾಂ ಅನ್ನು ಸಹ ಕಾರ್ಯಗತಗೊಳಿಸುತ್ತದೆ. ಎಲ್‍ಐಎಸ್ ಅಕಾಡೆಮಿಯು ಈ ಕೋರ್ಸ್‌ಗಳ ಶೈಕ್ಷಣಿಕ ಭಾಗವನ್ನು ನಡೆಸುತ್ತದೆ ಎಂದರು.

click me!