
ಹೈದರಾಬಾದ್(ನ.29): ಸಂಬಂಧಿ ಮಹಿಳೆಯ ಮನೆಯಲ್ಲಿ ಉಪದ್ರ ಮಾಡಿದ ಎಂದು 8 ವರ್ಷದ ಬಾಲಕನಿಗೆ ಕುಡುಕ ತಂದೆಯೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತೆಲಂಗಾಣ(Telangana) ರಾಜಧಾನಿ ಹೈದರಾಬಾದ್(Hyderabad)ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚತ್ರಿನಾಕ ಪೊಲೀಸ್(Chatrinaka police station)ಠಾಣೆಯಲ್ಲಿ ಮಗುವಿನ ತಾಯಿ ಕೇಸ್ ದಾಖಲಿಸಿದ್ದು, ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯೂ ಕರ್ನಾಟಕದ ಬೀದರ್(Bidar) ಮೂಲದವನಾಗಿದ್ದು, ಸೇಲ್ಸ್‌ಮ್ಯಾನ್( salesman) ಕೆಲಸ ಮಾಡುತ್ತಿದ್ದ, ಈತನ ಸಂಬಂಧಿ ಮಹಿಳೆಯೊಬ್ಬಳು ಈತನೊಂದಿಗೆ, 'ತಮ್ಮ ಮಗ ತನಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಸಿಟ್ಟಿನಿಂದ ಹಾರಿದ ವ್ಯಕ್ತಿ, ಮಗುವನ್ನು ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಅಲ್ಲದೇ ಈ ಘಟನೆಯನ್ನು ಮೊಬೈಲ್ ಫೋನ್(mobile phone)ನಲ್ಲಿ ಚಿತ್ರೀಕರಿಸುವಂತೆ ತನ್ನ ಮಗಳಿಗೆ ಹೇಳಿದ್ದ ಎಂದು ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ನಂತರ ಘಟನೆಯ ಬಗ್ಗೆ ತಿಳಿದ ಬಾಲಕನ ತಾಯಿ, ತನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರು ಮಗುವಿನ ತಂದೆಯನ್ನು ಬಂಧಿಸಿದ್ದಾರೆ. ಬಾಲ ನ್ಯಾಯ ಕಾಯ್ದೆ ಸೆಕ್ಷನ್ 324(voluntarily causing hurt)ರ ಅಡಿ ಸ್ವಯಂಪ್ರೇರಿತ ಹಲ್ಲೆ ಹಾಗೂ ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪುಸ್ತಕ ಯಾಕೆ ತಂದಿಲ್ಲ ಅಂದ್ರೆ, ಕಣ್ಣೀರಿಡುತ್ತಾ ಶಿಕ್ಷಕರ ಬಳಿ ಬಾಲಕ ಹೇಳಿದ್ದೇನು ನೋಡಿ
ಗುಜರಾತ್‌ನ ಸೂರತ್(Surat)ನಲ್ಲಿ ನಿನ್ನೆಯಷ್ಟೇ 39 ವರ್ಷದ ಮಹಿಳೆಯೊಬ್ಬಳು ತನ್ನ 18 ವರ್ಷದ ಮಗಳನ್ನು ಕೊಂದು ತಾಪಿ ನದಿಯಲ್ಲಿ ಬಿಸಾಕಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ತಂದೆಯೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾನೆ. ಗುಜರಾತ್ ಪ್ರಕರಣವೂ ಆರೋಪಿ ಮಹಿಳೆ ತನ್ನ ಗಂಡನೊಂದಿಗೆ ಗಲಾಟೆ ಮಾಡುವ ಭರದಲ್ಲಿ ತನ್ನ ತಪ್ಪನ್ನು ಬಾಯ್ಬಿಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಸಹೀನಾ ಶೇಕ್ ಆರೋಪಿ ಮಹಿಳೆ. ಮಗಳನ್ನು ಕೊಂದು ನದಿಗೆ ಬಿಸಾಕಿದ ಆಕೆ ಬಳಿಕ ತನ್ನ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಕತೆ ಕಟ್ಟಿದ್ದಳು. ಅಲ್ಲದೇ ಈ ಬಗ್ಗೆ ಸಚಿನ್ ಜಿಐಡಿಸಿ ಪೊಲೀಸ್ ಠಾಣೆ(GIDC police station)ಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಳು. ವಿಚಾರಣೆ ವೇಳೆ ಆಕೆ ಮತ್ತೆ ಹೇಳಿಕೆಗಳನ್ನು ಬದಲಿಸುತ್ತಿದ್ದಳು ಹಾಗೂ ಅಂತಿಮವಾಗಿ ಮಗಳನ್ನು ಕೊಂದು ನದಿಗೆ ಬಿಸಾಕಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.
Mangaluru Rape Case : ಸ್ಲೀಪರ್ ಬಸ್ಸಿನಲ್ಲಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ - ಸಾಬೀತು
ಸಹೀನಾ ಶೇಕ್ ಹಾಗೂ ಆಕೆಯ ಪತಿ ಹಾರೂನ್ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೂ ಆಗಾಗ ಜಗಳಗಳಾಗುತ್ತಿದ್ದವು. ಈ ಬಗ್ಗೆ ಸಹೀನಾ ತನ್ನ ಪೋಷಕರಿಗೂ ಹೇಳಿದ್ದಳು. ಆದರೆ ಅವರು ಈ ವಿಚಾರದಲ್ಲಿ ಆಕೆಯನ್ನು ಬೆಂಬಲಿಸಲು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆಕೆ ತನ್ನ ಮಗಳನ್ನೇ ಕೊಂದಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ