ಮಧುರೈ ಪೀಠಕ್ಕೆ ನಾನೇ ಅಧಿಪತಿ: ಕೈಲಾಸದಿಂದ ನಿತ್ಯಾನಂದ ಘೋಷಣೆ!

Published : Aug 19, 2021, 09:04 AM ISTUpdated : Aug 19, 2021, 09:16 AM IST
ಮಧುರೈ ಪೀಠಕ್ಕೆ ನಾನೇ ಅಧಿಪತಿ: ಕೈಲಾಸದಿಂದ ನಿತ್ಯಾನಂದ ಘೋಷಣೆ!

ಸಾರಾಂಶ

* ಇಲ್ಲಿನ ಅಧೀನಮ್‌ ಪೀಠದ 293ನೇ ನೂತನ ಪೀಠಾಧಿಪತಿಯಾಗಿ ತಾನು ಅಧಿಕಾರ ವಹಿಸಿಕೊಂಡಿದ್ದೇನೆ * ಕೈಲಾಸದಿಂದಲೇ ತಾನು ಮಧುರೈ ಪೀಠಾಧಿಪತಿ ಎಂದ ನಿತ್ಯಾನಂದ

ಮಧುರೈ(ಆ.19): ಇಲ್ಲಿನ ಅಧೀನಮ್‌ ಪೀಠದ 293ನೇ ನೂತನ ಪೀಠಾಧಿಪತಿಯಾಗಿ ತಾನು ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಕೈಲಾಸ ದೇಶದಲ್ಲಿ ವಾಸವಾಗಿರುವ ವಿವಾದಿತ ಸ್ವಾಮಿ ನಿತ್ಯಾನಂದ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದಾನೆ.

ಪೀಠದ 292ನೇ ಗುರುವಾಗಿದ್ದ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು ಆ.14ರಂದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಕಿರಿಯ ಸ್ವಾಮಿಗಳಾಗಿದ್ದ ಹರಿಹರ ದೇಶಿಕ ಪರಮಾಚಾರ್ಯ ಅವರನ್ನು ನೂತನ ಗುರುಗಳೆಂದು ಘೋಷಿಸಲಾಗಿತ್ತು. ಇದರ ಹೊರತಾಗಿಯೂ ನಿತ್ಯಾನಂದ, ತಾನೇ ಮಠದ ನೂತನ ಸ್ವಾಮಿ ಎಂದು ಘೋಷಿಸಿಕೊಂಡಿದ್ದಾನೆ.

2012ರಲ್ಲಿ ಅಧೀನಮ್‌ ಪೀಠದಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದ ನಿತ್ಯಾನಂದ, ನಂತರ ನಡೆದ ಗಲಾಟೆಗಳಿಂದ ಪೀಠದಿಂದ ಹೊರಹಾಕಲ್ಪಟಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ