ಅದೊಂದು ಆಸೆಗಾಗಿ ವಿಮಾನ ತೊಳೆಯುವ ಕೆಲಸವನ್ನೂ ಮಾಡಿದ್ದ ರತನ್ ಟಾಟಾ

By Anusha KbFirst Published Oct 10, 2024, 12:18 PM IST
Highlights

ಅನೇಕರ ಬದುಕಿಗೆ ಸ್ಪೂರ್ತಿಯಾಗಿದ್ದ ಟಾಟಾ ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬ ಬಗ್ಗೆ ಇಲ್ಲಿದೆ ಪುಟ್ಟ ವರದಿ.

ಮುಂಬೈ: ದೇಶ ಕಂಡ ಅತ್ಯಂತ ಧೀಮಂತ ಉದ್ಯಮಿ ಕೊಡುಗೈ ದಾನಿ ರತನ್ ಟಾಟಾ ಅವರ ನಿಧನಕ್ಕೆ ಇಡೀ ದೇಶವೇ ಮರುಗುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರತಿಯೊಬ್ಬ ಸಾಮಾನ್ಯ ಜನರು ಕೂಡ ಟಾಟಾ ನಿಧನಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. . ಅನೇಕರ ಬದುಕಿಗೆ ಸ್ಪೂರ್ತಿಯಾಗಿದ್ದ ಟಾಟಾ ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬ ಬಗ್ಗೆ ಇಲ್ಲಿದೆ ಪುಟ್ಟ ವರದಿ.

1937 ರಲ್ಲಿ ಮುಂಬೈನಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು ತಮ್ಮ 10 ನೇ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡರು. ಅವರನ್ನು ಅಜ್ಜಿ ಬೆಳೆಸಿದರು.  ನಂತರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ಹೋದ ಟಾಟಾ ಅವರು ಅಲ್ಲಿ ವಾಸ್ತುಶಿಲ್ಪದ ವಿದ್ಯಾರ್ಥಿಯಾಗಿ ಅಮೆರಿಕಾದ ಕಾರ್ನೆಲ್‌ನಲ್ಲಿ ವ್ಯಾಸಂಗ ಮಾಡಲು ಶುರು ಮಾಡಿದ್ದರು. ವಿಮಾನ ಹಾಗೂ ವಿಮಾನ ಹಾರಾಟದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ರತನ್ ಟಾಟಾ ಅವರು ಅಲ್ಲಿ ಲೋಕಲ್ ಪ್ಲೈಯಿಂಗ್ ಕ್ಲಬ್‌ ಸೇರಿದ್ದರು.

Latest Videos

ತಾತ ಮೊಮ್ಮಗನಂತಿದ್ದ ಅಪರೂಪದ ಸ್ನೇಹವಿದು: ಟಾಟಾಗೆ ನಂಬಿಕಸ್ಥ ಸಹಾಯಕನ ಭಾವುಕ ವಿದಾಯ

ವಿಮಾನದಲ್ಲಿ ಹಾರಾಡುವ ಅವಕಾಶ ಸಿಗುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಲೋಕಲ್ ಪ್ಲೈಯಿಂಗ್ ಕ್ಲಬ್‌ನಲ್ಲಿ ವಿಮಾನವನ್ನು ತೊಳೆಯುವ ಕೆಲಸ ಮಾಡುತ್ತಿದಿದ್ದಾಗಿ ಅವರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದು 1950ರ ಸಮಯ ಆಗ ಭಾರತ ಸರ್ಕಾರ ವಿದೇಶದಲ್ಲಿ ಒಬ್ಬ ವ್ಯಕ್ತಿ ಖರ್ಚು ಮಾಡುವ ಹಣಕ್ಕೆ ನಿಗದಿತ ಮಿತಿ ಹೇರಿತ್ತು. ಹೆಚ್ಚೆಂದರೆ 180 ಡಾಲರ್‌ ಅಷ್ಟೇ ತಿಂಗಳಿಗೆ ವಿದೇಶದಲ್ಲಿ ಹಣ ಖರ್ಚು ಮಾಡಬೇಕು ಎಂಬ ನಿಯಮ ಹೇರಿತ್ತು. ಆದರೆ ವಿಮಾದಲ್ಲಿ ಹಾರಾಡುವುದಕ್ಕೆ ಜಾಸ್ತಿ ಹಣ ಬೇಕು ಹೀಗಾಗಿ ರತನ್ ಟಾಟಾ ಅವರು ವಿಮಾನದಲ್ಲಿ ಹಾರಾಡುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿ ವಿಮಾನದ ಕ್ಲೀನರ್ ಆಗಿ ಕೆಲಸ ಮಾಡಿದ್ದರು. 

ಆದರೆ ನಂತರ ಭಾರತಕ್ಕೆ ಮರಳಿದ ರತನ್ ಟಾಟಾ ಅವರು  ಟಾಟಾ ಸ್ಟೀಲ್‌ಗೆ ವರ್ಚುವಲ್ ಪೈಲಟ್‌ ಆಗಿ ಸೇರಿದರು. ಅಲ್ಲದೇ ಉದ್ಯಮದ ಕೆಲಸಗಳಿಗಾಗಿ ದೇಶದೆಲ್ಲೆಡೆ ಸಂಚರಿಸುವ ಉದ್ಯಮ ಲೋಕದ ವ್ಯಕ್ತಿಗಳನ್ನು ಕರೆದೊಯ್ಯುವ ಪೈಲಟ್ ಆದರು. ಆದರೂ ರತನ್ ಟಾಟಾ ಅವರಿಗೆ ರಿಯಲ್ ಥ್ರಿಲ್ ನೀಡಿದ್ದು  ಏರೋನಾಟಿಕಲ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವಾಗ ನಡೆಸಿದ ಮಿರಾಜ್‌ ಸೂಪರ್ ಸಾನಿಕ್‌ನಲ್ಲಿ ನಡೆಸಿದ ನೂರು ನಿಮಿಷಗಳ ಹಾರಾಟ. 

ಭಾರತ ತನ್ನ ಅತ್ಯಂತ ಪ್ರೀತಿಯ ಪುತ್ರನನ್ನು ಕಳೆದುಕೊಂಡಿದೆ: ಟಾಟಾ ನಿಧನಕ್ಕೆ ಅಂಬಾನಿ ಸಂತಾಪ

ಫ್ರಾನ್ಸ್‌ನ ಡಸ್ಟಾಲ್‌ನಿಂದ ಅಮೆರಿಕಾಗೆ ಈ ಹಾರಾಟ ನಡೆಸಿದ್ದರು. ಆದರೆ ಥ್ರಿಲ್ ಜೊತೆ ಎದೆ ಝೆಲ್ ಎನಿಸುವ ಘಟನೆಯೂ ಒಮ್ಮೆ ನಡೆದಿತ್ತು.  ತಾವು ಹಾರಾಟ ನಡೆಸುತ್ತಿದ್ದ ವಿಮಾನದ ಎಂಜಿನ್ ನಡುಮಾರ್ಗದಲ್ಲಿ ವಿಫಲವಾಗಿತ್ತು.  ಮೊದಲಿಗೆ  ವಿಮಾನ ನರಕದಂತೆ  ಅಲುಗಾಡಲು ಶುರುವಾಗಿತ್ತು. ಇದಾದ ನಂತರ ಇಂಜಿನ್ ಸ್ಥಗಿತಗೊಂಡಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದರು.  ವಿಮಾನದ ಪ್ರೊಫೆಲ್ಲರ್ ತಿರುಗುವುದನ್ನು ನಿಲ್ಲಿಸಿತ್ತು.  ನಾವು ಕೆಳಗಿಳಿಯುವುದು ಹೇಗೆ ಎಂಬುದರ ಬಗ್ಗೆ ಪೋಕಸ್ ಮಾಡಬೇಕಿತ್ತು. ಆದರೆ ನನ್ನ ಪ್ರಯಾಣಿಕರು ತುಂಬಾ ಶಾಂತವಾಗಿದ್ದರೂ, ಒಬ್ಬರು ಕೂಡ ಇಳಿಯುವವರೆಗೆ ಏನನ್ನೂ ಮಾತನಾಡಿರಲಿಲ್ಲ ಎಂದು ರತನ್ ಟಾಟಾ ನೆನಪು ಮಾಡಿಕೊಂಡಿದ್ದಾರೆ. 

ಆದರೆ 2007ರಲ್ಲಿ  ಮಹತ್ವದ ಸಾಧನೆಯೊಂದರಲ್ಲಿ ರತನ್ ಟಾಟಾ ಅವರು  F-16 ಫಾಲ್ಕನ್ ಅನ್ನು ಹಾರಿಸಿದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆ ಗಳಿಸಿದರು. ಇದು ವಾಯುಯಾನ ಕ್ಷೇತ್ರದಲ್ಲಿದ್ದ ಅವರ ಉತ್ಸಾಹ ಹಾಗೂ ಆಸಕ್ತಿಗೆ ಸಾಕ್ಷಿಯಾಗಿದೆ.

click me!