'ನೀವು ಹೋದ್ರಿ ಅಂತ ಎಲ್ಲರೂ ಹೇಳ್ತಿದ್ದಾರೆ' ರತನ್ ಟಾಟಾ ನಿಧನಕ್ಕೆ ಕಣ್ಣೀರಿಟ್ಟ ಮಾಜಿ ಗೆಳತಿ 

Published : Oct 10, 2024, 11:06 AM ISTUpdated : Oct 10, 2024, 11:26 AM IST
'ನೀವು ಹೋದ್ರಿ ಅಂತ ಎಲ್ಲರೂ ಹೇಳ್ತಿದ್ದಾರೆ' ರತನ್ ಟಾಟಾ ನಿಧನಕ್ಕೆ ಕಣ್ಣೀರಿಟ್ಟ ಮಾಜಿ ಗೆಳತಿ 

ಸಾರಾಂಶ

ತಮ್ಮನ್ನು ಬಿಟ್ಟು ಹೋದ ರತನ್ ಟಾಟಾ ಅವರನ್ನು ನೆನೆದು ಮಾಜಿ ಗೆಳತಿ ಕಣ್ಣೀರಿಟ್ಟಿದ್ದಾರೆ. ಟಾಟಾ ಅವರನ್ನು ಕಳೆದುಕೊಂಡ ನೋವು ಮರೆಯೋದು ಕಷ್ಟ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಮುಂಬೈ: ನೀವು ನಮ್ಮೆಲ್ಲರನ್ನೂ ಬಿಟ್ಟು ಹೋಗಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ರತನ್ ಟಾಟಾ ನಿಧನಕ್ಕೆ ಅವರ ಮಾಜಿ ಗೆಳತಿ ಸಿಮಿ ಗರೆವಾಲಾ ಹೇಳುತ್ತಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರತನ್ ಟಾಟಾ, ಬುಧವಾರ ರಾತ್ರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರತನ್ ಟಾಟಾ ನಿಧನದಿಂದ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶ-ವಿದೇಶದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ರತನ್ ಟಾಟಾ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಮಾಜಿ ಗೆಳತಿಯೇ ಎಂದೇ ಬಿಂಬಿತವಾಗಿದ್ದ ಸಿಮಿ ಗರೆವಾಲಾ ಸಹ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. 

86 ವರ್ಷದ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ದೇಶದ ಜನತೆಗೆ ಕಷ್ಟವಾಗುತ್ತಿದೆ. ಭಾರವಾ ಹೃದಯದಿಂದಲೇ ರತನ್ ಟಾಟಾ ನಿಧನಕ್ಕೆ ದೇಶದ ಜನತೆ ಸಂತಾಪ ನುಡಿಗಳನ್ನಾಡುತ್ತಿದ್ದಾರೆ. ಸೀಮಾ ಗರೆವಾಲಾ ಸಹ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಹೇಳುತ್ತಿದ್ದಾರೆ ನೀವು ಹೋಗಿದ್ದೀರಿ ಅಂತ… ನಿಮ್ಮನ್ನು ಕಳೆದುಕೊಂಡ ನೋವನ್ನು ಮರೆಯೋದು ಅಷ್ಟು ಸುಲಭವಲ್ಲ. ನನ್ನ ಗೆಳೆಯನಿಗೆ ವಿದಾಯ.. ರತನ್ ಟಾಟಾ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ರತನ್ ಟಾಟಾ ಜೊತೆಗಿನ ತಮ್ಮ ಎಡಿಟೆಡ್ ಫೋಟೋವನ್ನು ಹಂಚಿಕೊಂಡಿದ್ದಾರೆ.

2011ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರತನ್ ಟಾಟಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ರತನ್ ಮತ್ತು ನಾನು ತುಂಬಾ ಹಿಂದೆ ಹೋಗಿದ್ದೇವೆ. ರತನ್ ಒಬ್ಬ ಪರ್ಫೆಕ್ಷನ್ ವ್ಯಕ್ತಿ. ಅವರು ಒಳ್ಳೆಯ ಹಾಸ್ಯಪ್ರಜ್ಞೆಯುಳ್ಳವರು. ಅತ್ಯಂತ ವಿನಮ್ರ, ಸಭ್ಯ ಮತ್ತು ಪರಿಪೂರ್ಣ ಸಂಭಾವಿತ ವ್ಯಕ್ತಿ. ಹಣವು ಅವರಿಗೆ ಎಂದಿಗೂ ಪ್ರೇರಕ ಶಕ್ತಿಯಾಗಿರಲಿಲ್ಲ. ರತನ್ ಟಾಟಾ  ವಿದೇಶದಲ್ಲಿರುವಷ್ಟು ನಿರಾಳರಾಗಿ ಭಾರತದಲ್ಲಿಲ್ಲ ಎಂಬ ಮಾತುಗಳನ್ನಾಡಿದ್ದರು. 

ರತನ್ ಟಾಟಾ ವಾಸಿಸುತ್ತಿದ್ದ ಮುಂಬೈನ ನಿವಾಸದಲ್ಲಿ ಏನೆಲ್ಲಾ ಇತ್ತು?

“ನಾನು ಲಾಸ್ ಏಂಜಲೀಸ್‌ನಲ್ಲಿದ್ದಾಗ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ನಾನು ಆಕೆಯನ್ನು ಮದುವೆಯಾಗಲು ಬಯಸಿದ್ದೆ. ಆದರೆ, ನನ್ನ ಅಜ್ಜಿಗೆ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ಬಂದ ಕಾರಣ ನಾನು ಭಾರತಕ್ಕೆ ಹಿಂತಿರುಗಿದೆ. ಆ ಸಮಯದಲ್ಲಿ ಭಾರತದಲ್ಲಿ ನಮ್ಮ ಮದುವೆ ನಡೆಯಬೇಕಿತ್ತು. ಆದರೆ, ಭಾರತ-ಚೀನಾ ಯುದ್ಧ ಪ್ರಾರಂಭವಾದ ನಂತರ, ಆಕೆಯ ಪೋಷಕರು ಆಕೆಯನ್ನು ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ ಮತ್ತು ನಾವು ಬೇರ್ಪಟ್ಟೆವು. ನಮ್ಮ ಮದುವೆಯೂ ನಡೆಯಲಿಲ್ಲ” ಎಂದು ರತನ್ ಟಾಟಾ ಅವರೇ ಹೇಳಿಕೊಂಡಿದ್ದರು.

ಇಷ್ಟು ಮಾತ್ರವಲ್ಲದೇ   ನನಗೆ ಬೇರೆ ಪ್ರೇಮ ಸಂಬಂಧಗಳಿದ್ದವು, ಆದರೆ ನಾನು ಯಾರನ್ನೂ ನನ್ನ ಹೆಂಡತಿ ಎಂದು ಭಾವಿಸುವಷ್ಟು ಪ್ರೀತಿಸಲಿಲ್ಲ. ಆದರೆ ಇಂದು ನಾನು ಹಿಂತಿರುಗಿ ನೋಡಿದಾಗ, ನಡೆದದ್ದಕ್ಕೆಲ್ಲ ನಾನು ಎಂದಿಗೂ ವಿಷಾದಿಸುವುದಿಲ್ಲ ಎಂದಿದ್ದರು. 

ರತನ್ ಟಾಟಾ ಜೊತೆ ಡೇಟಿಂಗ್, ರಾಜನ ಜೊತೆ ಲವ್, ಇನ್ನೊಬ್ರ ಜೊತೆ ಮದ್ವೆ; ಇಳಿ ವಯಸ್ಸಲ್ಲಿ ಸಿಂಗಲ್ ಈ ಜನಪ್ರಿಯ ನಟಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್