From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

By Suvarna News  |  First Published Feb 27, 2023, 12:13 PM IST

ದಿನಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ತುಂಬಾ ಸ್ವಾರಸ್ಯಕರವಾಗಿರುತ್ತವೆ. ಆದರೂ, ಅನೇಕ ಬೆಳವಣಿಗೆಗಳು ವರದಿಯಾಗೋದೇ ಇಲ್ಲ. ಕೇವಲ ಬಾಯಿಮಾತಿನಲ್ಲಿ ಮಾತ್ರ ಅಂದರೆ, ಹೆಚ್ಚಾಗಿ ಗುಸುಗುಸು ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ ನೋಡಿ.. 


ಕನಸಿನ ವ್ಯಾಪಾರಿಗಳು

2024ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಎದುರಿಸಲು ಕಾಂಗ್ರೆಸ್‌ ಪಕ್ಷ ಮಾತ್ರ ಪರಿಣಾಮಕಾರಿ ವಿರೋಧ ಒಕ್ಕೂಟವನ್ನು ಸೇರಿಸಬಲ್ಲದು ಎಂದು ನಯಾ ರಾಯ್‌ಪುರದಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನ ಮತ್ತೊಮ್ಮೆ ಪ್ರತಿಪಾದಿಸಿದೆ. ಆದರೆ ಇಂತಹ ಹೇಳಿಕೆಗಳನ್ನು ನೀಡಿದರೆ ರಾಜಕೀಯ ವಿಶ್ಲೇಷಕರಿಗೆ ತಮ್ಮ ನಗುವನ್ನು ತಡೆದುಕೊಳ್ಳಲು ಸಾಧ್ಯವಿಲ್ಲವಂತೆ.  ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢ ಸೇರಿ ಶೀಘ್ರದಲ್ಲೇ ಚುನಾವಣೆ ನಡೆಯುವ 4 ರಾಜ್ಯಗಳನ್ನು ನೋಡಿದ್ರೆ 
ಕಾಂಗ್ರೆಸ್ ಪಕ್ಷದೊಳಗಿನ ಬಿರುಕು ಬಹಿರಂಗವಾಗುತ್ತದೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್‌ನಲ್ಲು ಒಗ್ಗಟ್ಟಿದೆ ಎಂಬುದನ್ನು ಪ್ರದರ್ಶಿಸಲಾಯಿತಾದ್ರೂ ಪಕ್ಷದಲ್ಲಿ ಹೆಚ್ಚೇನೂ ಬದಲಾಗಿಲ್ಲ. 

Tap to resize

Latest Videos

ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಲಿಯಾಸ್ ಡಿಕೆಶಿ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದ್ದರೆ, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಜಿದ್ದಾಜಿದ್ದಿನ ಹೋರಾಟವಿದೆ. ಗೆಹ್ಲೋಟ್ ಅವರು ಮುಖ್ಯಮಂತ್ರಿಯಾಗಲು ಅರ್ಹರಾಗಿರುವ ಏಕೈಕ ನಾಯಕ ತಾವೇ ಎಂದು ಪರಿಗಣಿಸುತ್ತಾರೆ.

ಇದನ್ನು ಓದಿ: From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

ಇನ್ನೊಂದೆಡೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ತೀವ್ರವಾದ ಆಂತರಿಕ ಕಲಹವಿದೆ ಎಂಬ ಮಾತು ಕೇಳಿಬರುತ್ತದೆ. ಸಂಸದರ ಒಂದು ಬಣವು ಕಮಲ್ ನಾಥ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದೆ ಮತ್ತು ತಮ್ಮ ಬೆಂಬಲವನ್ನು ಪಿಸಿಸಿ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕವೇ ಸೂಚಿಸಿದೆ.

ಛತ್ತೀಸ್‌ಗಢದಲ್ಲಿ, ಟಿ.ಎಸ್. ಸಿಂಗ್ ಡಿಯೋ ಅವರು ಅಧಿಕಾರದಲ್ಲಿರುವ ಭೂಪೇಶ್ ಬಘೇಲ್ ಅವರನ್ನು ಅತಂತ್ರಗೊಳಿಸಲು ಯಾವ ದಾಳ ಉರುಳಿಸುತ್ತಾರೆ ಎಂಬ ಆತಂಕದಲ್ಲಿ ಅನೇಕ ಹಿರಿಯ ನಾಯಕರು ಇದ್ದಾರೆ. ಈ ಹಿನ್ನೆಲೆ ಈ ರಾಜ್ಯಗಳಲ್ಲಿ ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್‌ ಎಷ್ಟು ರಾಜ್ಯಗಳಲ್ಲಿ ಬಹುಮತ ಪಡೆಯುತ್ತದೆ ಅನ್ನೋದು ಸಮೀಕ್ಷೆದಾರರಿಗೆ ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

ಏನು ಮಾಡಬೇಕೆಂದೇ ತಿಳೀತಿಲ್ಲ..
ಮಧ್ಯಪ್ರದೇಶದ ಮೊರೆನಾದಲ್ಲಿ ರೈಲ್ವೆ ಜಾಗವನ್ನು ಭಗವಂತ ಅತಿಕ್ರಮಿಸಿಕೊಂಡಿದ್ದಾರಂತೆ. ಈ ಹಿನ್ನೆಲೆ, ಏಳು ದಿನಗಳಲ್ಲಿ ಖಾಲಿ ಮಾಡಿ ಇಲ್ಲವೇ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಅಂತ ನೋಟಿಸ್‌ ಕಳಿಸಲಾಗಿದೆ. ಯಾರಿಗೆ ಅಂತೀರಾ..? ಸೀತೆಯನ್ನು ಕಾಪಾಡಲು ಲಂಕೆಯಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ ಭಜರಂಗಿ ಅಥವಾ ಹನುಮಾನ್‌ಗೆ ನೋಟಿಸ್‌ ಕಳಿಸಲಾಗಿದೆ. ಈ ಹಿನ್ನೆಲೆ ದೇವರು ರೈಲ್ವೆ ಭೂಮಿಯಿಂದ ಜಿಗಿಯದಿದ್ದರೆ ಈ ಕಟ್ಟಡವನ್ನು ಕೆಡವಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ದೇಗುಲವನ್ನು ನೆಲಸಮಗೊಳಿಸುವ ವೆಚ್ಚವನ್ನು ಭಗವಂತನೇ ಭರಿಸಬೇಕಾಗುತ್ತದೆ ಎಂದು ನೋಟಿಸ್ ಸ್ಪಷ್ಟಪಡಿಸಿದೆ.

ಡಬಲ್‌ ಎಂಜಿನ್‌ ಸರ್ಕಾರ ಈ ರೀತಿ ನೋಟಿಸ್‌ ಕಳಿಸಿರೊದು ಸಾಮಾಜಿಕ ಮಾಧ್ಯಮದ ಮೂಲಕ ವೈರಲ್‌ ಆಗಿದೆ. ನಂತರ, ಎಚ್ಚೆತ್ತ ಸರ್ಕಾರ ನೋಟಿಸ್ ಹಿಂಪಡೆದು ಪ್ರಧಾನ ಅರ್ಚಕರ ಹೆಸರಿನಲ್ಲಿ ಹೊಸ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟಿಸ್‌ಗೆ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ ಎಂದು ಹನುಮಂತನಿಗೆ ಅನಿಸಿರಬೇಕು ಅಲ್ವಾ..?

ಇದನ್ನೂ ಓದಿ: From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ರಾಂಗ್ ನಂಬರ್

20,000 ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಲು ಯಾರಾದರೂ 1 ಲಕ್ಷ ರೂಪಾಯಿವರೆಗೆ ಖರ್ಚು ಮಾಡ್ತಾರಾ..? ಜಾತ್ರೆಯ ಸಂದರ್ಭದಲ್ಲಿ ಪಿಕ್ ಪಾಕೆಟ್ ಮಾಡಲಾದ ತನ್ನ ಫೋನ್ ಅನ್ನು ಪತ್ತೆಹಚ್ಚಲು ಅಂದ್ರೆ 20 ಸಾವಿರ ಮೊಬೈಲ್ ಹುಡುಕಿಸಲು ಲಕ್ಷ ಖರ್ಚಾದರೂ ಪರ್ವಾಗಿಲ್ಲ ಎಂದು ಪೊಲೀಸರ ಬೆನ್ನತ್ತಿದ್ದರು. ಇಷ್ಟಕ್ಕೂ ಅಂತಹ ಮಹತ್ವದ್ದು ಆ ಮೊಬೈಲ್‌ನಲ್ಲಿ ಏನಿತ್ತು ಅನ್ನೋ ಪ್ರಶ್ನೆ ಕೇಳಿಬಂದಿದ್ದು, ಈ ಪ್ರಶ್ನೆಗೆ  ದೇವರಾಣೆ ಯಾವ ವಿಡಿಯೋ ಇರಲಿಲ್ಲ ಮಾರಾಯ ಎಂದು ಆ ನಾಯಕ ಅವಲತ್ತುಕೊಂಡರೂ ಯಾರೂ ನಂಬುತ್ತಿಲ್ಲ..!

ಆದರೆ, 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ ಕಳೆದುಕೊಂಡ ಮತ್ತೊಬ್ಬ ರಾಜಕೀಯ ನಾಯಕರೇ 20 ಸಾವಿರ ರೂ. ಮೌಲ್ಯದ ಫೋನ್‌ ಕಳೆದುಕೊಂಡ ರಾಜಕೀಯ ನಾಯಕನಷ್ಟು ಬೇಸರವಾಗಿಲ್ಲವಂತೆ. ಈ ಇಬ್ಬರೂ ನಾಯಕರು ಮತ್ತು ಅವರ ಇತರ ಅನೇಕರು ಮಂಗಳೂರಿನ ಜಾತ್ರೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದು, ಅನೇಕರು ಹಣವನ್ನು ಕಳೆದುಕೊಂಡರೂ ಪೊಲೀಸರಿಗೆ ದೂರು ನೀಡಿಲ್ಲ.

ಪೋಲೀಸರು ಹೇಳುವಂತೆ ಪಿಕ್ ಪಾಕೆಟ್ ಎಷ್ಟು ವೃತ್ತಿಪರನಾಗಿದ್ದನೆಂದರೆ ಜನ ಸಾಮಾನ್ಯರು ಮಾತ್ರವಲ್ಲ, ಜಾತ್ರೆಗೆ ಬಂದಿದ್ದ ಸುಮಾರು 15 ಜನ ಮುಖಂಡರು ತಮ್ಮ ಬೆಲೆಬಾಳುವ ಸೊತ್ತುಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಫ್ರೀಜ್ ಫ್ರೇಮ್
ಉತ್ತರ ಪ್ರದೇಶದ ಮಾಜಿ ಸಚಿವರೊಬ್ಬರು ಈಗಲೂ ಸಹ ತಾವು ಹೆಸರಲ್ಲಿರೋಕೆ ನಾನಾ ಪ್ರಯತ್ನ ಮಾಡಿದ್ದು, ಇದಕ್ಕೆ ಪಕ್ಷದಿಂದಲೂ ಭಾರಿ ಅಪಸ್ವರ ಕೇಳಿಬರ್ತಿದೆ. ಮುಖ್ಯಮಂತ್ರಿಯಂತಹ ಹಿರಿಯ ನಾಯಕರ ಜೊತೆ ಫೋಟೋಗೆ ಫೋಸ್‌ ಕೊಟ್ಟು ಜನಪ್ರಿಯತೆಯಲ್ಲಿರೋದು ಈ ರಾಜಕೀಯ ನಾಯಕನಿಗೆ ಅಭ್ಯಾಸವಾಗಿದೆ. ಅವರನ್ನು ನಿಭಾಯಿಸಲು ಆಗದೆ ರಾಜ್ಯ ನಾಯಕರು ಹೈಕಮಾಂಡ್‌ ಮೊರೆ ಹೋಗಿದ್ದಾರೆ. ಮತ್ತು ಅವರು ಸದ್ಯಕ್ಕೆ ಈ ಮಾಜಿ ಸಚಿವರನ ಆಟಾಟೋಪ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನಲಾಗಿದೆ.

ಮಹಿಳೆಯರಿಗೆ ಸಮಾಜವಾದಿ ಪಕ್ಷದ ಗೌರವ..!
ಮಹಿಳೆಯರನ್ನು ಗೌರವಿಸುವ ವಿಚಾರದಲ್ಲಿ ಸಮಾಜವಾದಿ ಪಕ್ಷದ ದಾಖಲೆ ತೀರಾ ಕಳಪೆ. ಹಾಗಾಗಿ ಈ ಪಕ್ಷದ ನಾಯಕರು ಇಂತಹ ಕಾರಣಕ್ಕೆ ಬೆಂಬಲ ಕೊಟ್ರೆ ಸಹಜವಾಗಿ ಅಚ್ಚರಿ ಮೂಡುತ್ತದೆ.

ಉತ್ತರ ಪ್ರದೇಶ ಸರ್ಕಾರವು 'ಕಾ ಬಾ ಇನ್ ಯುಪಿ' ಹಾಡಿಗೆ ಗಾಯಕಿಯೊಬ್ಬರಿಗೆ ನೋಟಿಸ್ ನೀಡಿದ್ದಕ್ಕೆ, ಪ್ರಮುಖ ವಿರೋಧ ಪಕ್ಷವು ಅವರನ್ನು ಬೆಂಬಲಿಸಲು ಪ್ರಾರಂಭಿಸಿತು. ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರು ಸಹ ಅವರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದು, ಈ ಗಾಯಕಿ ಶೀಘ್ರದಲ್ಲೇ ಪಕ್ಷಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಊಹಾಪೋಹಗಳಿಗೂ ಇದು ಕಾರಣವಾಯಿತು.

ಅಲ್ಲದೆ, ಈ ಗಾಯಕಿಗೆ ಕಾನೂನು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಪಕ್ಷದ ಅಧ್ಯಕ್ಷರು ಸಂಬಂಧಪಟ್ಟ ಎಲ್ಲರಿಗೂ ಸೂಚನೆಗಳನ್ನು ನೀಡಿದ್ದಾರೆ. ಸ್ವಾಭಾವಿಕವಾಗಿ, ಈ ಸೌಂದರ್ಯವರ್ಧಕ ಉಪಕ್ರಮವು ಮಹಿಳಾ ವಿರೋಧಿ ರಾಜಕೀಯ ಪಕ್ಷ ಅನ್ನಿಸಿಕೊಂಡಿರೋ ತನ್ನ ಇಮೇಜ್ ಅನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಪಕ್ಷವು ಆಶಿಸುತ್ತಿದೆ.

click me!