ಗೋವಾದಲ್ಲಿ ಬಿಜೆಪಿಗೆ ಕೇಜ್ರಿವಾಲ್ ಟಕ್ಕರ್, ರಾಜ್ಯದಲ್ಲಿ ರದ್ದಾಗುತ್ತಾ ವೀಕೆಂಡ್ ಕರ್ಫ್ಯೂ,ಜ.20ರ ಟಾಪ್ 10 ಸುದ್ದಿ!

By Suvarna NewsFirst Published Jan 20, 2022, 5:00 PM IST
Highlights

ಬಿಜೆಪಿ ಪಟ್ಟಿಯಿಂದ ಪರಿಕ್ಕರ್ ಪುತ್ರನ ಹೆಸರು ಕೈಬಿಟ್ಟ ಬೆನ್ನಲ್ಲೇ ಇದರ ಲಾಭ ಪಡೆಯಲು ಅರವಿಂದ್ ಕೇಜ್ರಿವಾಲ್ ಮುಂದಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಭಾರತದ 17ರ ಬಾಲಕನನ್ನು ಚೀನಾ ಸೇಲೆ ಹೊತ್ತೊಯ್ದಿದೆ. ನಾಳೆ ಸಭೆಯಲ್ಲಿ ರಾಜ್ಯದ ವೀಕೆಂಡ್ ಕುರಿತು ನಿರ್ಧಾರ ಹೊರಬೀಳಲಿದೆ. ಕಾರು ಡೆಲಿವರಿ ವೇಳೆ ಎಡವಟ್ಟು,  ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌ ಆರಂಭ ಸೇರಿದಂತೆ ಜನವರಿ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

Goa Elections: ಬಿಜೆಪಿ ಪಟ್ಟಿಯಿಂದ ಪರಿಕ್ಕರ್ ಪುತ್ರನ ಹೆಸರು ಔಟ್, ಲಾಭ ಪಡೆಯಲು ಕೇಜ್ರಿ ಯತ್ನ!

ಗೋವಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಗುರುವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ರಕ್ಷಣಾ ಸಚಿವ ಹಾಗೂ ಬಿಜೆಪಿ ನಾಯಕ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರ ಹೆಸರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿರಿಸಲಾಗಿದೆ. 

UP Elections: ಸೊಸೆ ಬೆನ್ನಲ್ಲೇ ಮುಲಾಯಂ ನಾದಿನಿ ಗಂಡ, ಕಾಂಗ್ರೆಸ್‌ 'ಪೋಸ್ಟರ್ ಗರ್ಲ್' ಕೂಡಾ ಬಿಜೆಪಿಗೆ!

ಉತ್ತರ ಪ್ರದೇಶದಲ್ಲಿ (UP Election 2022) ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ಇದೀಗ ಮುಲಾಯಂ ಸಿಂಗ್ ಯಾದವ್ ಅವರ ನಾದಿನಿ ಗಂಡ ಪ್ರಮೋದ್ ಗುಪ್ತಾ ಮತ್ತು ಕಾಂಗ್ರೆಸ್ ನ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯ ಬಿಜೆಪಿ ಸೇರಿದ್ದಾರೆ. ಈ ಹಿಂದೆ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದ್ದರು.

India China Dispute: ಅರುಣಾಚಲ ಪ್ರದೇಶದಿಂದ 17ರ ಬಾಲಕನನ್ನು ಹೊತ್ತೊಯ್ದ ಚೀನಾ ಸೇನೆ!

ಭಾರತದೊಂದಿಗೆ ಅನಾವಶ್ಯಕ ಗಡಿ ವಿವಾದ ಹುಟ್ಟುಹಾಕುತ್ತಿರುವ ಚೀನಾ, ಅರುಣಾಚಲ ಪ್ರದೇಶದ 17ರ ಹರೆಯದ ಬಾಲಕನನ್ನು ಏಕಾಏಕಿ ಹೊತ್ತೊಯ್ದಿದೆ. ರಾಜ್ಯ ಸಂಸದ ತಪಿರ್ ಗಾವೊ ಸುದ್ದಿ ಸಂಸ್ಥೆ ಪಿಟಿಐಗೆ ಈ ಮಾಹಿತಿ ನೀಡಿದ್ದಾರೆ. 

ಇಂದಿನಿಂದ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌: ಭಾರತ ಆತಿಥ್ಯ

2022ರ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌ ಟೂರ್ನಿಗೆ (AFC Women's Asian Cup) ಗುರುವಾರ ಚಾಲನೆ ದೊರೆಯಲಿದ್ದು, 20ನೇ ಆವೃತ್ತಿಗೆ ಭಾರತ ಆತಿಥ್ಯ ವಹಿಸಲಿದೆ. ಮುಂಬೈ, ನವಿ ಮುಂಬೈ ಹಾಗೂ ಪುಣೆಯಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತ ಸೇರಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಬರೋಬ್ಬರಿ 43 ವರ್ಷಗಳ ಬಳಿಕ ಭಾರತ ಎರಡನೇ ಬಾರಿಗೆ ಎಎಫ್‌ಸಿ ಏಷ್ಯನ್‌ ಕಪ್‌ ಮಹಿಳಾ ಫುಟ್ಬಾಲ್‌ ಟೂರ್ನಿ ಆತಿಥ್ಯ ವಹಿಸುತ್ತಿದೆ. 

Covid-19: ರಾಜ್ಯದಲ್ಲಿ ರದ್ದಾಗುತ್ತಾ ನೈಟ್, ವೀಕೆಂಡ್ ಕರ್ಫ್ಯೂ?

ರಾಜ್ಯದಲ್ಲಿ ನೈಟ್ ಹಾಗೂ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದು ಈ ಕುರಿತಾಗಿ ಶುಕ್ರವಾರ ರಾಜ್ಯ ಸರ್ಕಾರದ ಸಭೆ ನಡೆಯಲಿದೆ. ಈವರೆಗೂ ವೀಕೆಂಡ್ ಕರ್ಫ್ಯೂ ರದ್ದುಗೊಳ್ಳುವ ಬಗ್ಗೆ ಒಂಚೂರು ಬಾಯ್ಬಿಡದ ಆರೋಗ್ಯ ಸಚಿವ ಕೆ. ಸುಧಾಕರ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕೆಜಿಎಫ್‌ 2ನಲ್ಲಿ Sanjay dutt ಜೊತೆ ಸೀನ್‌ ಇಲ್ಲ: Raveena tandon

ನಾನೂ ಸಂಜಯ್‌ ಹಿಂದಿನಂತೇ ಕೆಜಿಎಫ್‌ 2 ಸೆಟ್‌ನಲ್ಲಿ ಧೂಳೆಬ್ಬಿಸುವ ಕನಸು ಕಾಣುತ್ತಿದ್ದೆವು. ಆದರೆ ನಾವಿಬ್ಬರೂ ಕೆಜಿಎಫ್‌ 2 ಚಿತ್ರದಲ್ಲಿ ನಟಿಸಿದ್ದರೂ ಜೊತೆಯಾಗಿ ಸ್ಕ್ರೀನ್‌ ಹಂಚಿಕೊಳ್ಳಲಾಗದ್ದಕ್ಕೆ ಬೇಸರವಿದೆ’ ಎಂದು ಬಾಲಿವುಡ್‌ ನಟಿ ರವೀನಾ ಟಂಡನ್‌ ಹೇಳಿದ್ದಾರೆ.

Whatsapp ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ!

ಪಾಕಿಸ್ತಾನದಲ್ಲಿ ಧರ್ಮನಿಂದನೆ ಅಂದರೆ ಇಸ್ಲಾಂ ಧರ್ಮವನ್ನು ಅವಮಾನಿಸಿದ ಮಹಿಳೆಗೆ ಮರಣದಂಡನೆ ವಿಧಿಸಲಾಗಿದೆ. ಆರೋಪಿ ಮಹಿಳೆಯ ಹೆಸರು ಅನಿಕಾ ಅತೀಕ್. ಅವರ ವಿರುದ್ಧ 2020ರಲ್ಲಿ ಧರ್ಮನಿಂದನೆ ಪ್ರಕರಣ ದಾಖಲಾಗಿತ್ತು.

Mahindra Thar ಕಾರು ಡೆಲಿವರಿ ವೇಳೆ ಗ್ರಾಹಕನ ಎಡವಟ್ಟು, ಶೋ ರೂಂ ಗಾಜು ಪುಡಿ ಪುಡಿ, ಅತೀ ದೊಡ್ಡ ದುರಂತದಿಂದ ಪಾರು!

ವಾಹನ ಡೆಲಿವರಿ ವೇಳೆ ಹಲವು ಅಪಘಾತಗಳು, ದುರಂತಗಳು ನಡೆದಿದೆ. ಹೊಚ್ಚ ಹೊಸ ಕಾರು(cars) ನಜ್ಜುಗುಜ್ಜಾದ ಹಲವು ಘಟನೆಗಳು ವರದಿಯಾಗಿದೆ. ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಇದು ಬೆಂಗಳೂರಿನ(Bengaluru) ಮಹೀಂದ್ರ ಶೋ ರೂಂನಲ್ಲಿ(Mahindra Show Room) ನಡೆದ ಘಟನೆ. ಶೋ ರೂಂ ಒಳಗ ನಿಲ್ಲಿಸಿದ್ದ ಮಹೀಂದ್ರ ಥಾರ್(Mahindra Thar) ವಾಹನವನ್ನು ಗ್ರಾಹಕನೋರ್ವ ಡ್ರೈವ್ ಮಾಡಿದ ಕಾರಣ ಕಾರು ನೇರವಾಗಿ ಶೋ ರೂಂ ಪುಡಿ ಪುಡಿಯಾಗಿದೆ.  ಶೋ ರೂಂನಿಂದ ಕೆಳಕ್ಕೆ ಉರುಳುಬೀಳುವ ಅಪಾಯದಿಂದ ಪಾರಾಗಿದೆ. 
 

click me!