3.16 ಕೋಟಿ ಮಂದಿಗೆ ಇನ್ಮುಂದೆ ಸಿಗಲ್ಲ ಗ್ಯಾಸ್​! ನೀವೂ ಈ ತಪ್ಪು ಮಾಡಿದ್ರೆ ಕೂಡಲೇ ಸರಿಪಡಿಸಿಕೊಳ್ಳಿ

Published : Sep 21, 2026, 07:14 PM IST
Gas E-KYC

ಸಾರಾಂಶ

ಅಕ್ಟೋಬರ್ 1ರಿಂದ ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್ ಮತ್ತು ಸಬ್ಸಿಡಿ ಪಡೆಯಲು ಆಧಾರ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ದೇಶದಲ್ಲಿ ಇನ್ನೂ 3.16 ಕೋಟಿ ಗ್ರಾಹಕರು ಈ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಗ್ರಾಹಕರು ಗ್ಯಾಸ್ ಏಜೆನ್ಸಿ, ಡೆಲಿವರಿ ಸಿಬ್ಬಂದಿ ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಬರುವ ಅಕ್ಟೋಬರ್ 1ರಿಂದ ಗ್ಯಾಸ್ ಬುಕ್ಕಿಂಗ್ ಮಾಡಲು ಆಧಾರ್ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ, ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಲಭ್ಯವಿರುವುದಿಲ್ಲ. ಇ-ಕೆವೈಸಿ ಮಾಡಿಕೊಳ್ಳುವಂತೆ ಕಳೆದೊಂದು ವರ್ಷದಿಂದ ಸರ್ಕಾರ ಹೇಳುತ್ತಲೇ ಬಂದಿದೆ. ಗ್ಯಾಸ್​ ಏಜೆನ್ಸಿಗಳಿಂದಲೂ ಮೆಸೇಜ್​ ಬಂದಿದೆ. ಮನೆಯಲ್ಲಿಯೇ ಕುಳಿತು ಬುಕ್ಕಿಂಗ್​ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗ್ಯಾಸ್ ಕಾಳಸಂತೆಯನ್ನು ತಡೆಗಟ್ಟಲು, ಅರ್ಹರಿಗೆ ಮಾತ್ರ ಗ್ಯಾಸ್​ ಸಿಗುವಂತೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಆದರೆಕುತೂಹಲ ಎಂದರೆ, ಇನ್ನೂ 3.16 ಕೋಟಿ ಮಂದಿ ದೇಶದಲ್ಲಿ ಇ-ಕೆವೈಸಿ ಮಾಡಿಸಿಕೊಂಡಿಲ್ಲ ಎಂದು ವರದಿಗಳು ಹೇಳುತ್ತವೆ! ಸರ್ಕಾರದ ಪ್ರಕಾರ, ದೇಶದ ಸಕ್ರಿಯ ದೇಶೀಯ LPG ಗ್ರಾಹಕರಲ್ಲಿ 274.3 ಮಿಲಿಯನ್ (89.9%) ಜನರು ಈಗಾಗಲೇ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇವರಿಗೆ LPG ಬುಕಿಂಗ್‌ಗಳು ಮೊದಲಿನಂತೆಯೇ ಮುಂದುವರಿಯುತ್ತವೆ. ಇದರರ್ಥ ಈಗಾಗಲೇ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಿದ ಗ್ರಾಹಕರು LPG ಸಬ್ಸಿಡಿಗಳನ್ನು ಬುಕ್ ಮಾಡಲು ಮತ್ತು ಸ್ವೀಕರಿಸಲು ಸುಲಭವಾಗುತ್ತದೆ. ಆದರೆ 3.16 ಕೋಟಿ ಮಂದಿ ಇನ್ನೂ ಇ-ಕೆವೈಸಿ ಮಾಡಿಸಿಕೊಳ್ಳಲಿಲ್ಲ.

ಒಂದು ವಾರ ಗಡುವು

ಇದೀಗ 21ನೇ ತಾರೀಖು. ಇನ್ನೂ ಒಂದು ವಾರ ನಿಮಗೆ ಕಾಲಾವಕಾಶ ಇದೆ. ನೀವು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಇಲ್ಲದೇ ಹೋದರೆ ಅಕ್ಟೋಬರ್​ 1ರಿಂದ ನಿಮಗೆ ಗ್ಯಾಸ್​​ ಸಿಗುವುದಿಲ್ಲ. ನೀವು ಇನ್ನೂ ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸದಿದ್ದರೆ, ಹಲವಾರು ಆಯ್ಕೆಗಳಿವೆ. LPG ಸಿಲಿಂಡರ್ ವಿತರಣೆಯ ಸಮಯದಲ್ಲಿ ಗ್ರಾಹಕರು ವಿತರಣಾ ವ್ಯಕ್ತಿಯ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಆಧಾರ್ ಅನ್ನು ಪರಿಶೀಲಿಸಬಹುದು. ಹೆಚ್ಚುವರಿಯಾಗಿ, LPG ವಿತರಕರ ಶೋ ರೂಂಗೆ ಭೇಟಿ ನೀಡುವ ಮೂಲಕ ಅಥವಾ ಆಯಾ OMC ಯ ಮೊಬೈಲ್ ಅಪ್ಲಿಕೇಶನ್ ಬಳಸಿ ಮನೆಯಲ್ಲಿ ಪರಿಶೀಲನೆಯನ್ನು ಮಾಡಬಹುದು.

ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತೆ?

ಅಕ್ಟೋಬರ್ 1, 2026 ರಿಂದ, ಬಯೋಮೆಟ್ರಿಕ್ ಆಧಾರ್ ದೃಢೀಕರಣ (BAA) ಪೂರ್ಣಗೊಳಿಸದ ಗ್ರಾಹಕರು ತಮ್ಮ ನೇರ LPG ಸಬ್ಸಿಡಿಯನ್ನು ಕಳೆದುಕೊಳ್ಳುತ್ತಾರೆ. ಪ್ರಮಾಣಿತ 14.2 ಕೆಜಿ ಸಬ್ಸಿಡಿ ಸಿಲಿಂಡರ್‌ಗಳನ್ನು ಅವರಿಗೆ ಒದಗಿಸಲಾಗುವುದಿಲ್ಲ. ಬದಲಿಗೆ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳಿಗೆ ಸೀಮಿತಗೊಳಿಸಲಾಗುತ್ತದೆ. ಪೂರ್ಣ, ಸಬ್ಸಿಡಿ ರಹಿತ ಮಾರುಕಟ್ಟೆ ಬೆಲೆಯಲ್ಲಿ ಇದನ್ನು ನೀಡಲಾಗುತ್ತದೆ.

ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಮೊಬೈಲ್ ಆ್ಯಪ್‌ನಲ್ಲಿ ಬೆರಳಚ್ಚು (ಬಯೋಮೆಟ್ರಿಕ್) ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭವಾಗಿ ಮುಗಿಸಬಹುದು. ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಬಳಿಗೆ ನೇರವಾಗಿ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದು. ಗ್ರಾಹಕರು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕುಳಿತು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು.

ನಿಮ್ಮ ಏಜೆನ್ಸಿ ತಕ್ಕಂತೆ ಹೀಗೆ ಮಾಡಿ

ಇಂಡಿಯನ್ ಆಯಿಲ್ ಬಳಕೆದಾರರು ‘ಇಂಡಿಯನ್ ಆಯಿಲ್ ಒನ್’ (Indian Oil One), ಭಾರತ್ ಗ್ಯಾಸ್ ಬಳಕೆದಾರರು ‘ಹಲೋ ಬಿಪಿಸಿಎಲ್’ (Hello BPCL) ಮತ್ತು ಹೆಚ್‌ಪಿ ಬಳಕೆದಾರರು ‘ಹೆಚ್ ಪಿ ಪೇ’ (HP Pay) ಆ್ಯಪ್‌ ಮೂಲಕ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಸಬ್ಸಿಡಿ ದರದಲ್ಲಿ ಗ್ಯಾಸ್ ಬೇಡವೆಂದಾದಲ್ಲಿ, ತಮಗೆ ಮೊಬೈಲ್ ಆ್ಯಪ್‌ ಬಯೋಮೆಟ್ರಿಕ್ ಮಾಡಿಸುವುದು ಅಗತ್ಯವಿಲ್ಲ ಎಂದು ಗ್ರಾಹಕರು ಘೋಷಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ChatGPT ಬಳಸಿ ಪರೀಕ್ಷೆಯಲ್ಲಿ ಕಾಪಿ? ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್​: ಜಾತಿ ನಿಂದನೆ ಕೇಸ್​
ಮದ್ಯಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್, ಕಡಿಮೆ ಬೆಲೆಗೆ ಎಣ್ಣೆ; ಕೇಂದ್ರದಿಂದ ಬಿಗ್ ಅಪ್‌ಡೇಟ್ಸ್‌