ಮದ್ಯಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್, ಕಡಿಮೆ ಬೆಲೆಗೆ ಎಣ್ಣೆ; ಕೇಂದ್ರದಿಂದ ಬಿಗ್ ಅಪ್‌ಡೇಟ್ಸ್‌

Published : Sep 21, 2026, 05:28 PM IST
India New Zealand trade agreement

ಸಾರಾಂಶ

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA) ಏರ್ಪಟ್ಟಿದ್ದು, ಅಕ್ಟೋಬರ್ 20 ರಿಂದ ಜಾರಿಗೆ ಬರಲಿದೆ. ಇದರಿಂದ ನ್ಯೂಜಿಲೆಂಡ್‌ನಿಂದ ಬರುವ ವಸ್ತುಗಳ ಮೇಲಿನ ಆಮದು ಸುಂಕ ಶೇ.95ರಷ್ಟು ಕಡಿಮೆಯಾಗಲಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ನವದೆಹಲಿ: ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವ ಪಿಯೂಷ್ ಗೋಯೆಲ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA) ಏರ್ಪಟ್ಟಿದ್ದು, ಅಕ್ಟೋಬರ್ 20 ರಿಂದ ನೂತನ ನಿಯಮ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

FTA ಒಪ್ಪಂದದ ಉದ್ದೇಶ ಏನು?

ಈ ಒಪ್ಪಂದದ ಪ್ರಮುಖ ಉದ್ದೇಶ ಎರಡು ದೇಶಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸುವುದು. ಎರಡು ದೇಶಗಳ ನಡುವೆ ಹೂಡಿಕೆಯನ್ನ ಉತ್ತೇಜಿಸುವ ಗುರಿ ಹೊಂದಲಾಗಿದೆ. ಮುಂದುವರಿದ ಭಾಗವಾಗಿ, ನ್ಯೂಜಿಲೆಂಡ್ ಸರಕುಗಳ ಶೇಕಡಾ 95 ರಷ್ಟು ಸುಂಕವನ್ನು ತೆಗೆದುಹಾಕಲಾಗುತ್ತದೆ ಎಂದು ಗೋಯಲ್ ತಿಳಿಸಿದ್ದಾರೆ. ಅಂದರೆ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಬರುವ ವಸ್ತುಗಳ ಮೇಲಿನ ಶುಂಕವನ್ನು ಶೇಕಡಾ 95 ರಷ್ಟು ತೆಗೆದುಹಾಕಲಾಗುತ್ತದೆ. ಇದು ಭಾರತದಲ್ಲಿರುವ ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್ ಆಗಿದೆ.

ಎಣ್ಣೆ ಪ್ರಿಯರಿಗೆ ಏನು ಪ್ರಯೋಜನ?

ಹೆಚ್ಚಾಗಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ವೈನ್‌ಗಳು, ಕಿವಿ ಹಣ್ಣುಗಳು, ಸೇಬು ಹಣ್ಣುಗಳ ಉತ್ಪನ್ನಗಳು ಭಾರತಕ್ಕೆ ಬರುತ್ತವೆ. ಈ ಎಲ್ಲಾ ಸರಕುಗಳು ಸುಂಕ-ಮುಕ್ತ ಮಾರುಕಟ್ಟೆ ಪ್ರವೇಶವನ್ನು ಪಡೆಯುತ್ತವೆ.ಜೊತೆಗೆ ಭಾರತೀಯ ಕಂಪನಿಗಳು ತಮ್ಮ ಉತ್ಪನ್ನವನ್ನು ನ್ಯೂಜಿಲೆಂಡ್‌ನಲ್ಲೂ ಮಾರಾಟ ಮಾಡಲು ಅನುಕೂಲ ಮಾಡಿಕೊಡುತ್ತದೆ.

ವಿದ್ಯಾರ್ಥಿಗಳಿಗೂ ಬಿಗ್ ರಿಲೀಫ್

ಭಾರತದ ವಿದ್ಯಾರ್ಥಿಗಳು, ಕಾರ್ಮಿಕರು ನ್ಯೂಜಿಲೆಂಡ್‌ಗೆ ಹೋಗಿ ಬದುಕು ರೂಪಿಸುವ ಕನಸು ಕಂಡರೆ, ಅಂತವರಿಗೆ ಇದ್ದ ನಿಯಮದಲ್ಲಿ ಭಾರೀ ಸಿಡಲಗೊಳಿಸಲಾಗುತ್ತಿದೆ. ಇನ್ನು, ಮುಂದಿನ 15 ವರ್ಷಗಳಿಲ್ಲಿ ನ್ಯೂಜಿಲೆಂಡ್ ಭಾರತದಲ್ಲಿ ಬರೋಬ್ಬರಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.

ಈ ಒಪ್ಪಂದ ಮೂಲಕ ಏನೆಲ್ಲ ಬದಲಾವಣೆ?

  • ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಬರುವ ವಸ್ತುಗಳ ಮೇಲಿನ ಆಮದು ಸುಂಕ ಶೇಕಡಾ 95 ರಷ್ಟು ಕಡಿಮೆ ಆಗಲಿದೆ.
  • ಇದರಲ್ಲಿ ವೈನ್, ಕಿವಿ ಮತ್ತು ಸೇಬು ಹಣ್ಣಿನ ಉತ್ಪನ್ನಗಳು ಸೇರಿವೆ
  • ಜೊತೆಗೆ ಭಾರತದಿಂದ ನ್ಯೂಜಿಲೆಂಡ್‌ಗೆ ಹೋಗುವ ವಸ್ತುಗಳು ಕೂಡ ಅಲ್ಲಿ ಮುಕ್ತ ಅವಕಾಶ ಪಡೆಯಲಿವೆ
  • ಭಾರತೀಯ ವಿದ್ಯಾರ್ಥಿಗಳು, ಕಾರ್ಮಿಕರು ಪ್ರಯಾಣಿಸಲು ಮತ್ತು ಅಲ್ಲಿ ಕೆಲಸ ಮಾಡಲು ಮೊದಲಿದ್ದ ನಿಯಮದಲ್ಲಿ ಭಾರೀ ಸಡಿಲಿಕೆ
  • ಮುಂದಿನ 20 ವರ್ಷದಲ್ಲಿ ಬರೋಬ್ಬರಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧಾರ

ಅಮೆರಿಕಗೆ ಶಾಕ್

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕವು ಭಾರತಕ್ಕೆ ಶೇಕಡಾ 100 ಶುಂಕ ವಿಧಿಸಲು ಮುಂದಾಗಿದೆ. ಪ್ರಸ್ತುತ ಭಾರತಕ್ಕೆ ಅಮೆರಿಕವು ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆ ಆಗಿದೆ. ಹೀಗಾಗಿ ಭಾರತವು ತನ್ನ ರಫ್ತಿಗೆ ನಿರಂತರವಾಗಿ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಿದೆ. ಯುಕೆ ಮತ್ತು ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದಗಳ ನಂತರ, ನ್ಯೂಜಿಲೆಂಡ್‌ನೊಂದಿಗಿನ FTA ಅನ್ನು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ಎಟಿಎ ಒಪ್ಪಂದದಿಂದಾಗಿ ಅಕ್ಟೋಬರ್ 20 ರಿಂದ ಮದ್ಯ ಅಗ್ಗವಾಗಲಿದೆ. ಶೇಕಡಾ 95 ರಷ್ಟು ಸುಂಕವನ್ನು ತೆಗೆದುಹಾಕಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಂದೂ ಕೋಮುವಾದ, ಉಗ್ರವಾದ ದೇಶಕ್ಕೆ ಅಪಾಯ: ಹಮೀದ್ ಅನ್ಸಾರಿ ವಿವಾದಾತ್ಮಕ ಹೇಳಿಕೆಗೆ ಮುಸ್ಲಿಂ ಮುಖಂಡರ ಖಂಡನೆ
Tata Sons vs Trusts: ಟಾಟಾ ಸನ್ಸ್‌ಗೆ ಚಂದ್ರಶೇಖರನ್ ನೇಮಕ ಒಪ್ಪದ ಟ್ರಸ್ಟ್‌, ದೇಶದ ಅಗ್ರಗಣ್ಯ ವಕೀಲರ ನೇಮಕ!