ಮಮತಾಗೆ ಮತ್ತೊಂದು ಶಾಕ್ ಕೊಟ್ಟ ಅಮಿತ್ ಶಾ!

By Suvarna News  |  First Published Dec 21, 2020, 2:51 PM IST

ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ಸದ್ಯ ಎರಡು ದಿನಗಳ ಬಂಗಾಳ ಭೇಟಿ ಕೈಗೊಂಡಿರುವ ಅಮಿತ್ ಶಾ| ಮಹತ್ವದ ಘೋಷಣೆ ಬೆನ್ನಲ್ಲೇ ಮಮತಾಗೆ ಮತ್ತೊಂದು ಶಾಕ್ ಕೊಟ್ಟ ಕೇಂದ್ರ ಗೃಹ ಸಚಿವ


ಕೋಲ್ಕತಾ(ಡಿ.21): ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ಸದ್ಯ ಎರಡು ದಿನಗಳ ಬಂಗಾಳ ಭೇಟಿ ಕೈಗೊಂಡಿರುವ ಬಿಜೆಪಿ ಹಿರಿಯ ನಾಯಕ ಅಮಿತ್‌ ಶಾ, 2021ರಿಂದ ಪ್ರತಿ ತಿಂಗಳಲ್ಲಿ ಕನಿಷ್ಠ 7 ದಿನ ಬಂಗಾಳದಲ್ಲಿ ವಾಸ್ತವ್ಯ ಹೂಡಲಿದ್ದಾರಂತೆ.

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌, ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಶಾ ಭೇಟಿ ಪ್ರಮಾಣ ಹೆಚ್ಚಲಿದೆ. ಏಪ್ರಿಲ್‌-ಮೇ ನಲ್ಲಿ ನಡೆಯುವ ಚುನಾವಣೆಗೂ ಮುನ್ನಾ ತಿಂಗಳಲ್ಲಿ ಅವರು ತಿಂಗಳಲ್ಲಿ ಕನಿಷ್ಠ 7 ದಿನ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಿದ್ದಾರೆ ಎಂದು ತಿಳಿಸಿದ್ದಾರೆ.

Latest Videos

undefined

ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಸಿಎಎ ಜಾರಿ: ಅಮಿತ್‌ ಶಾ

 

ಓಲೈಕೆ ರಾಜಕಾರಣದಲ್ಲಿ ನಂಬಿಕೆ ಹೊಂದಿರುವ ತೃಣಮೂಲ ಕಾಂಗ್ರೆಸ್ಸಿನಿಂದ ಬಾಂಗ್ಲಾ ವಲಸಿಗರ ವಲಸೆಯನ್ನು ತಡೆಯಲು ಎಂದಿಗೂ ಆಗುವುದಿಲ್ಲ. ಆ ಕೆಲಸ ಏನಿದ್ದರೂ ಬಿಜೆಪಿಯಿಂದ ಮಾತ್ರ ಸಾಧ್ಯ. ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿಯ ನಂ.2 ನಾಯಕ ಅಮಿತ್‌ ಶಾ ಹೇಳಿದ್ದಾರೆ.

ಏಪ್ರಿಲ್‌- ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ 2ನೇ ದಿನವೂ ರೋಡ್‌ ಶೋ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದ ಜನ ಬದಲಾವಣೆ ಬಯಸಿದ್ದಾರೆ. ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ, ಸುಲಿಗೆ ಹಾಗೂ ಬಾಂಗ್ಲಾದೇಶೀಯರ ವಲಸೆಯಿಂದ ಮುಕ್ತಿ ಬಯಸಿದ್ದಾರೆ ಎಂದು ಹೇಳಿದರು.

click me!