ವಿಶೇಷ ಅಧಿವೇಶನದಲ್ಲಿ ಕೇಂದ್ರ ಕೃಷಿ ಕಾನೂನು ವಿರುದ್ಧ ನಿರ್ಣಯಕ್ಕೆ ಕೇರಳ ಸಜ್ಜು!

By Suvarna NewsFirst Published Dec 21, 2020, 2:43 PM IST
Highlights

ಕೇಂದ್ರ ಕೃಷಿ ಕಾನೂನು ವಿರುದ್ಧ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಕೇರಳ ಇದೀಗ ವಿಶೇಷ ಅಧಿವೇಶನ ಕರೆದಿದೆ. ಇಷ್ಟೇ ಅಲ್ಲ ಕೇಂದ್ರ ಕೃಷಿ ಮಸೂದೆ ವಿರುದ್ಧ ನಿರ್ಣಯ ಅಂಗೀಕರಿಸಲು ನಿರ್ಧರಿಸಿದೆ.
 

ತಿರುವನಂತಪುರಂ(ಡಿ.21): ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ವಿರೋಧ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕೃಷಿ ಮಸೂದೆ ಆತಂಕಗಳನ್ನು ನಿವಾರಿಸುವ ಪ್ರಯತ್ನ ಮಾಡಿದ್ದರು. ಆಧರೆ ಈ ಪ್ರಯತ್ನ ಕೈಗೊಂಡಂತೆ ಕಾಣುತ್ತಿಲ್ಲ. ಕಾರಣ ಅತ್ತ ರೈತರ ಪ್ರತಿಭಟನೆ ತೀವ್ರಗೊಂಡರೆ, ಇತ್ತ ಕೇರಳ ಕೇಂದ್ರದ ಕೃಷಿ ಮಸೂದೆ ವಿರುದ್ಧ ನಿರ್ಣಯ ಅಂಗೀಕರಿಸಲು ಸಜ್ಜಾಗಿದೆ.

ನೂತನ ಕೃಷಿ ಮಸೂದೆ ಒಂದೇ ರಾತ್ರಿಯಲ್ಲಿ ಜಾರಿಗೆ ಬಂದಿಲ್ಲ; ರೈತರ ಹಾದಿ ತಪ್ಪಿಸಬೇಡಿ; ಮೋದಿ.

ಸೋಮವಾರ(ಡಿ.21) ಕರೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರದ ಕೃಷಿ ಮಸೂದೆ ವಿರುದ್ಧ ಬುಧವಾರ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಿದೆ. ಈ ವೇಳೆ ಕೇಂದ್ರದ ಕೃಷಿ ಮಸೂದೆ ವಿರುದ್ಧ ನಿರ್ಣಯ ಅಂಗೀಕರಿಸಲು ಕೇರಳ ಸರ್ಕಾರ ರೆಡಿಯಾಗಿದೆ. ಕೇರಳದಲ್ಲಿ ಆಡಳಿತಾರೂಢ LDF ಹಾಗೂ ಕಾಂಗ್ರೆಸ್ ನೇತೃತ್ವದ UDF ಕೇಂದ್ರದ ಕೃಷಿ ಕಾನೂನು ವಿರೋಧಿಸುತ್ತಿದೆ.

ಸಿಖ್ ಧರ್ಮ ಗುರು ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ರೈತ ಪ್ರತಿಭಟನೆಯ ಸ್ಫೋಟಕ ಮಾಹಿತಿ!.

ನಿಗದಿತ ಬಜೆಟ್ ಅಧಿವೇಶನಕ್ಕೂ ಮುನ್ನ ಕೇರಳ ವಿಶೇಷ ಕ್ಯಾಬಿನೆಟ್ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ಕೇರಳ ವಿವಾದಾತ್ಮಕ ಕೃಷಿ ಮಸೂದೆ ಕುರಿತು ಚರ್ಚೆ ಹಾಗೂ ತಿರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.

ವಿಶೇಷ ಅಧಿವೇಶನ ಕೃಷಿ  ಕಾನೂನು ಕುರಿತ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಇನ್ನು ಕೇರಳ ಬಜೆಟ್ ಅಧಿವೇಶನ ಜನವರಿ 8 ರಿಂದ ನಡೆಯಲಿದೆ ಎಂದು ಥಾಮಸ್ ಹೇಳಿದ್ದಾರೆ. 

click me!