Watch | ಇದೆಂಥ ಹುಚ್ಚಾಟ? ಮಲಗಿದ್ದವನ 'ಆ ಜಾಗಕ್ಕೆ' ಬೆಂಕಿಹಚ್ಚಿದ ಸ್ನೇಹಿತರು!

Published : Jan 26, 2025, 05:56 PM ISTUpdated : Jan 26, 2025, 05:59 PM IST
Watch | ಇದೆಂಥ ಹುಚ್ಚಾಟ? ಮಲಗಿದ್ದವನ 'ಆ ಜಾಗಕ್ಕೆ' ಬೆಂಕಿಹಚ್ಚಿದ ಸ್ನೇಹಿತರು!

ಸಾರಾಂಶ

ರೀಲ್ಸ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಪಡೆಯುವ ಹುಚ್ಚಿನಲ್ಲಿ ಜನರು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾರೆ. ಮಗುವನ್ನು ಅಪಾಯಕ್ಕೆ ಸಿಲುಕಿಸುವುದರಿಂದ ಹಿಡಿದು ಬೆಂಕಿಯೊಂದಿಗೆ ಆಟವಾಡುವವರೆಗೆ, ಈ ಪ್ರವೃತ್ತಿ ಆತಂಕಕಾರಿಯಾಗಿದೆ.

ರೀಲ್ಸ್‌, ಇನ್ಸ್‌ಟಾಗ್ರಾಮ್‌ಗಳಲ್ಲಿ ಜನರನ್ನ ಸೆಳೆಯಲು ಹೆಚ್ಚು ವೀಕ್ಷಣೆ ಪಡೆಯಲು ಇತ್ತೀಚೆಗೆ ಯುವಕ ಯುವತಿಯರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಕೆಲವರಂತೂ ಈ ಗೀಳಿನಿಂದ ಮಾನಸಿಕ ಅಸ್ವಸ್ಥರಾಗಿ ಹೋಗಿದ್ದಾರೆ. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹಾಳುಬಾವಿಯಲ್ಲಿ ಕಾಲು ಇಳಿಬಿಟ್ಟು, ಕಾಲಿಗೆ ಒಂದೂವರೆಗೆ ವರ್ಷದ ಮಗುವನ್ನ ನೇತಾಡಿಸಿದ್ದಾಳೆ. ಬಾವಿಗೆ ಬೀಳುವ ಭಯದಲ್ಲಿ ಮಗು ಕಾಲು ಬಿಗಿಹಿಡಿದು ನೇತಾಡುತ್ತಿದೆ ಇತ್ತ ಆ ಹೆಂಗಸು ಏನೇನೋ ಮಾತನಾಡುತ್ತಿದೆ. ಇನ್ನೊಬ್ಬ ಈ ದೃಶ್ಯ ವಿಡಿಯೋ ಮಾಡುತ್ತಾ ನಿಂತಿದ್ದಾನೆ. ಇವರಿಬ್ಬರಿಗೂ ಮಗುವಿಗೆ ತಾವೇನು ಮಾಡುತ್ತಿದ್ದೇವೆಂಬ ಅರಿವಿಲ್ಲದಷ್ಟು ಮನುಷ್ಯತ್ವ ಮರೆತ ರಾಕ್ಷಸರಂತೆ ವರ್ತಿಸಿದ್ದಾರೆ.

ಇದೊಂದೇ ಅಲ್ಲ, ರೀಲ್ಸ್ ಇನ್ಸ್‌ಟಾಗ್ರಾಂ ಸ್ಕ್ರೋ ಮಾಡಿದ್ರೆ ಇಂತಹವೇ ನೂರಾರು ವಿಡಿಯೋಗಳು ಸಿಗುತ್ತವೆ. ಬರ್ತಡೇ ಪಾರ್ಟಿ ವೇಳೆ ಕೇಕ್‌ನಲ್ಲಿ ಪಟಾಕಿ ಇಟ್ಟು ಸಿಡಿಸುವುದು, ಬೆಚ್ಚಿಬಿಳುಸುವುದು, ಅಶ್ಲೀಲವಾಗಿ ಕುಣಿಯುವುದು, ದೇಹ ಪ್ರದರ್ಶನ, ಫ್ರಾಂಕ್ ಹೆಸರಲ್ಲಿ ಇತರರಿಗೆ ತೊಂದರೆ ಕೊಡುವುದು, ಜನರನ್ನ ಮೂರ್ಖರನ್ನಾಗಿ ಮಾಡುವುದು ಇವೆಲ್ಲ ನೋಡಿರುತ್ತೀರಿ. 

ಇದನ್ನೂ ಓದಿ: Watch | ಶಸ್ತ್ರ ಚಿಕಿತ್ಸೆ ವೇಳೆ ಕೈಕೊಟ್ಟ ವಿದ್ಯುತ್; ಆಪರೇಷನ್ ಅರ್ಧಕ್ಕೆ ನಿಲ್ಲಿಸಿದ ವೈದ್ಯರು!

ತಂತ್ರಜ್ಞಾನವು ಹೆಚ್ಚಾದಂತೆ ನಕಾರಾತ್ಮಕ ಅಂಶಗಳು ಹೆ್ಚ್ಚಾಗುತ್ತಿರುವೆ. ಉದಾಹರಣೆಗೆ, ಸೆಲ್ಫಿ ಕ್ಯಾಮೆರಾಗಳು ಬಂದ ನಂತರ, ರೈಲ್ವೆ ಹಳಿಯ ಬಳಿ ಹತ್ತುವುದು, ವಿದ್ಯುತ್ ರೈಲಿನ ಮೇಲೆ ಹತ್ತುವುದು, ಪ್ರವಾಹದ ಮಧ್ಯೆ ಜಿಗಿದು ಪ್ರಾಣ ತೆಗೆದುಕೊಳ್ಳುವುದು ಮುಂತಾದ ಅಪಾಯಕಾರಿ ವಿಡಿಯೋ ಮಾಡುವುದು ಹೆಚ್ಚಾಗಿದೆ. ಅದರಲ್ಲೂ ಇಂಥ ಅಪಾಯಕಾರಿ ಕೆಲಸಗಳಲ್ಲಿ ಆಪ್ರಾಪ್ತ ಬಾಲಕರೇ ಹೆಚ್ಚಿದ್ದಾರೆ. ಇಂದು  ಚಿಕ್ಕವರಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸದ್ಯ ರೀಲ್‌ಗಳ ಕ್ರೇಜ್‌ನಲ್ಲಿದ್ದಾರೆ.

ಇದು ದಿನೇದಿನೆ ಅಪಾಯಕಾರಿಯಾಗಿ ಬೆಳೆಯುತ್ತಿದೆ.  ನೇಣು ಬಿಗಿದುಕೊಂಡು ವಿಡಿಯೋ ಮಾಡಿ ಕೆಲವರು ಸಾವನ್ನಪ್ಪಿದ್ದಾರೆ. ಇತ್ತೀಚೆಗಂತೂ ಆಯುಧಗಳೊಂದಿಗೆ ಪೊಲೀಸ್ ಠಾಣೆಯ ಬಾಗಿಲಲ್ಲಿ ನಿಂತಿರುವ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಕಳೆದ ವಾರ ತೂತುಕುಡಿ ಜಿಲ್ಲೆಯ ಸತಾಂಕುಳಂ ಬಳಿ ಯುವಕನೊಬ್ಬ ಕೊಳದ ನೀರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಧುಮುಕಿದ ವಿಡಿಯೋ ಬಿಡುಗಡೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆಯ ಮಹಾಪೂರವೇ ಹರಿದು ಬರಲಾರಂಭಿಸಿತು. ಈ ಘಟನೆಯಿಂದ ಯುವಕರಿಗೆ ಯಾವುದೇ ಹಾನಿಯಾಗದಿದ್ದರೂ, ಅಪಾಯಕಾರಿ ವಿಡಿಯೋ ರೆಕಾರ್ಡಿಂಗ್ಗಾಗಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಪೊಲೀಸರು ಬಂಧಿಸಿದರು.

ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

ಮಲಗಿದ್ದ ಯುವಕನ ಖಾಸಗಿ ಅಂಗಕ್ಕೆ ಬೆಂಕಿ:

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬೆಚ್ಚಿಬಿಳಿಸುವಂತಿದೆ. ವಿಡಿಯೋದಲ್ಲಿ ಯುವಕನೊಬ್ಬ ಮಲಗಿದ್ದಾನೆ. ಅಲ್ಲಿ ಆತನ ಸ್ನೇಹಿತರು ಯುವಕನ ಖಾಸಗಿ ಅಂಗಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಾಬರಿಗೊಂಡ ಯುವಕ ಅದನ್ನು ತಡೆಯಲು ಹರಸಾಹಸ ಪಡುತ್ತಿರುವ ದೃಶ್ಯಗಳು ಹಾಗೂ ಅದರ ಹಿಂದೆ ನಗುವಿನ ಸದ್ದು ಕೇಳಿಬರುತ್ತಿದೆ. ಆದರೆ  ವೀಕ್ಷಿಸುವವರಿಗೆ ರಕ್ತ ಕುದಿಯುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌