Canada Protest ಪ್ರತಿಭಟನೆ ಶಾಂತಿಯುತವಾಗಿ ಪರಿಹರಿಸುವುದು ಮೋದಿಯಿಂದ ತಿಳಿಯಿರಿ, ಕೆನಡಾ ಪ್ರಧಾನಿಗೆ ಪ್ರತಿಭಟನಾಕಾರರ ಸೂಚನೆ!

Published : Feb 16, 2022, 09:15 PM ISTUpdated : Feb 16, 2022, 09:17 PM IST
Canada Protest ಪ್ರತಿಭಟನೆ ಶಾಂತಿಯುತವಾಗಿ ಪರಿಹರಿಸುವುದು ಮೋದಿಯಿಂದ ತಿಳಿಯಿರಿ, ಕೆನಡಾ ಪ್ರಧಾನಿಗೆ ಪ್ರತಿಭಟನಾಕಾರರ ಸೂಚನೆ!

ಸಾರಾಂಶ

20 ದಿನ ದಾಟಿದೆ ಕೆನಾಡದಲ್ಲಿ ನಡೆಯುತ್ತಿರುವ ಪ್ರತಿಭಟನೆ ಲಸಿಕೆ ವಿರುದ್ಧ ಪ್ರತಿಭಟನೆ ಹತ್ತಿಕ್ಕಲು ತುರ್ತು ಪರಿಸ್ಥಿತಿ ಹೇರಿಕೆ ಮೋದಿಯಿಂದ ಕಲಿಯಿರಿ, ಪ್ರತಿಭಟನಾಕಾರರಿಂದ ಕೆನಾಡ ಪ್ರಧಾನಿಗೆ ಸಲಹೆ

ಒಟ್ಟಾವ(ಫೆ.16): ಲಸಿಕೆ ಕಡ್ಡಾಯ ವಿರೋಧಿಸಿ ಕೆನಾಡದಲ್ಲಿ(Canada Protest) ಬೃಹತ್ ಪ್ರತಿಭಟನೆ ನಡೆಯುತ್ತಿದೆ.  ಟ್ರಕ್ ಚಾಲಕರಿಂದ(Truck Divers)  ಆರಂಭಗೊಂಡ ಪ್ರತಿಭಟನೆ ಇದೀಗ ಸಂಪೂರ್ಣ ಕೆನಡಾ ಆವರಿಸಿಕೊಂಡಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ವೇಳೆ ಕೆನಾಡ ಪ್ರಧಾನಿ ಜಸ್ಟಿನ್ ಟ್ರಡೋ(justin trudeau) ನಾಪತ್ತೆಯಾಗಿದ್ದರು. ಇದೀಗ ಪ್ರತಿಭಟನೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೆ ಇದೀಗ ಕೆನಡಾ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ತುರ್ತು ಪರಿಸ್ಥಿತಿ ಹೇರಲಾಗಿದೆ. ಕೆನಾಡ ಪ್ರಧಾನಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಇದೇ ವೇಳೆ ಪ್ರತಿಭಟನೆಯನ್ನು ಶಾಂತಿಯುತವಾಗಿ, ಪ್ರಜಾಪ್ರಭುತ್ವ ರೀತಿಯಲ್ಲಿ ಪರಿಹರಿಸುವುದು ಹೇಗೆ ಎಂಬುದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯಿಂದ(India PM Narendra Modi) ತಿಳಿದುಕೊಳ್ಳಿ. ಸುಮ್ಮನೆ ಇತರ ದೇಶಕ್ಕೆ ಸಲಹೆ ನೀಡುವುದಲ್ಲ ಎಂದು ಕೆನಡಾ ಪ್ರತಿಭಟನಾಕಾರರು ಜಸ್ಟಿನ್ ಟ್ರುಡೋ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆ ಸದ್ದಗಡಿಸಲು ಇದುವರೆಗೂ ಯಾವುದೇ ಮಾತುಕತೆ ನಡೆಸಿಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನಾಕಾರರ ಮನವಿಯನ್ನು ಕೇಳಲೇ ಇಲ್ಲ. ಇದರ ಬದಲಾಗಿಲ್ಲ. ಜಸ್ಟಿನ ಟ್ರುಡೋ ನೇರವಾಗಿ ತುರ್ತು ಪರಿಸ್ಥಿತಿ ಹೇರಿಕೆ(National emergency) ಮಾಡಿ ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ. ಕೆನಡಾ ಸರ್ಕಾರ ಕಠೋರವಾದ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ನಡೆದ ರೈತ ಪ್ರತಿಭಟನೆ ವೇಳೆ ಹೇಗೆ ನಡೆದುಕೊಂಡಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಿ ಎಂದು ಕೆನಡಾ ಇಂಡಿಯಾ ಗ್ಲೋಬಲ್ ಫೋರಮ್ ಬ್ರಿಟಿಷ್ ಕೊಲಂಬಿಯಾ ಕೆನಡಾ ಪ್ರತಿಭಟನಾಕಾರರ ಒಕ್ಕೂಟ ಹೇಳಿದೆ.

ಖಲಿಸ್ತಾನಿಗಳನ್ನು ಬೆಂಬಲಿಸಿದ್ದ ಕೆನಡಾ ಪ್ರಧಾನಿಗೆ ತಿರುಗುಬಾಣ!

ಈ ಕುರಿತು ಟ್ವೀಟ್ ಮಾಡಿರುವ ಕೆನಡಾ ಇಂಡಿಯಾ ಗ್ಲೋಬಲ್ ಫೋರಮ್ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪ್ರಧಾನಿ ಮೋದಿಯಿಂದ ಯಾವೆಲ್ಲಾ ವಿಚಾರ ಕಲಿಯಬೇಕು ಅನ್ನೋದನ್ನು ಹೇಳಲಾಗಿದೆ. ನಮ್ಮ ಪ್ರೀಡಂ ಪ್ರತಿಭಟನೆಯನ್ನು ಹತ್ತಿಕ್ಕುವ ನಿರ್ಧಾರ ನಮಗೆ ತೀವ್ರ ನೋವುಂಟು ಮಾಡಿದೆ. ಈ ಸಂದರ್ಭದಲ್ಲಿ ನಾವು ಭಾರತದಲ್ಲಿ ನಡೆದ ರೈತ ಪ್ರತಿಭಟನೆಯನ್ನು ಉಲ್ಲೇಖಿಸುತ್ತಿದ್ದೇವೆ. ಸತತ ಹಾಗೂ ಸುದೀರ್ಘ ದಿನಗಳ ಕಾಲ ನಡೆದ ಈ ಪ್ರತಿಭಟನೆಯನ್ನು ಪ್ರಧಾನಿ ಮೋದಿ ಶಾಂತಿಯುತವಾಗಿ ಹಾಗೂ ಪ್ರಜಾಸತ್ಮಾತಕ ರೀತಿಯಲ್ಲಿ ಪರಿಹರಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಪ್ರತಿಭಟನೆಯನ್ನು ಹತ್ತಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

 

ಇದೇ ವೇಳೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಭಾರತ ಸರ್ಕಾರ ಸಲಹೆ ನೀಡಿದ್ದರು. ಪ್ರತಿಭಟನೆಯನ್ನು ಶಾಂತಿಯುತವಾಗಿ ಪರಿಹರಿಸಿ. ನಾವು ರೈತರ ಪರ ಇದ್ದೇವೆ ಎಂದಿದ್ದರು. ಇಷ್ಟೇ ಪ್ರತಿಭಟನೆಯನ್ನು ಯಾವ ರೀತಿ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದರು. ಆದರೆ ಅದು ಸಲಹೆ ನೀಡಿದ್ದ ಟ್ರುಡೋ ಇದೀಗ ತಾವು ಮಾಡುತ್ತಿರುವುದೇನು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

CoronaVirus: ಕೆನಡಾದಲ್ಲಿ ತುರ್ತುಪರಿಸ್ಥಿತಿ, ಹೋರಾಟಕ್ಕೆ ಕುಮ್ಮಕ್ಕು ಕೊಡ್ತಿರೋದ್ಯಾರು.?

ಈ ಸಂದರ್ಭದಲ್ಲಿ ಜಸ್ಟಿನ್ ಟ್ರುಡೋ ಭಾರತ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಅನುಸರಿಸಬೇಕು. ಪ್ರತಿಭಟನೆಯನ್ನು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಕೆನಡಾ ಇಂಡಿಯಾ ಗ್ಲೋಬಲ್ ಫೋರಮ್ ಪ್ರತಿಭಟನಾಕಾರರು ಸೂಚಿಸಿದ್ದಾರೆ.

ಪ್ರತಿಭಟನೆ ವಿವರ:
ಕೆನಡಾದಲ್ಲಿ ಲಸಿಕೆ ಕಡ್ಡಾಯ ಮಾಡಲಾಗಿದೆ. ಇದರಿಂದ ಟ್ರಕ್ ಚಾಲಕರು ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನೆ ಆರಂಭಗೊಂಡಿತು. ಕೆನಡಾ ಹಾಗೂ ಅಮೆರಿಕ ನಡುವಿನ ಗಡಿ ಮಾರ್ಗಗಳು, ವ್ಯಾಪಾರ ಸ್ಥಗಿತಗೊಂಡಿದೆ. ಹೀಗಾಗಿ ಅಮೆರಿಕ ಸಮಸ್ಯೆ ಬಗೆ ಹರಿಸಲು ಜಸ್ಟಿನ್ ಟ್ರುಡೋಗೆ ಸೂಚನೆ ನೀಡಿದೆ. ಟ್ರುಡೋ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಜಸ್ಟಿನ್ ಟ್ರುಡೋ ವಿವಾದಾತ್ಮಕ ನಿರ್ಧಾರ ಘೋಷಿಸಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ತುರ್ತು ಪರಿಸ್ಥಿತಿ ಹೇರುವುದಾಗಿ ಘೋಷಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್