
ಗುಜರಾತ್(ಫೆ.16): ವಿವಾಹೇತರ ಸಂಬಂಧವನ್ನು(extra-marital relationship) ಸಮಾಜ ಅನೈತಿಕ ಎಂದು ಪರಿಗಣಿಸುತ್ತಿದೆ. ಆದರೆ ಪೊಲೀಸ್‌ರನ್ನು(Police) ವಿವಾಹೇತರ ಸಂಬಂಧ ಕಾರಣ ನೀಡಿ ಕರ್ತವ್ಯದಿಂದ(Service) ವಜಾಗೊಳಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಪೊಲೀಸ್ ಸೇವಾ ನಿಯಮಗಳಲ್ಲಿ ಅನೈತಿಕ ಸಂಬಂಧವನ್ನು ದುಷ್ಕತ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ವ್ಯಬಿಚಾರ ಆರೋಪದಡಿ ವಜಾಗೊಂಡಿದ್ದ ಅಹಮ್ಮದಾಬಾದ್ ಪೊಲೀಸ್ ಪೇದೆಯನ್ನು ಮರು ನೇಮಕ ಮಾಡುವ ಕುರಿತ ಅರ್ಜಿ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್(Gujarat High Court) ಮಹತ್ವದ ಆದೇಶ ನೀಡಿದೆ. ಅರ್ಜಿದಾರರು ಅಶಿಸ್ತಿ ವರ್ತನೆ ಮಾಡಿರುವುದು ನಿಜ. ಆದರೆ ಈ ಅಶಿಸ್ತಿನನ್ನು ಸೇವಾ ದೃಷ್ಕತ್ಯ ಎಂದು ಪರಿಗಣಿಸಲು ಆಗುವುದಿಲ್ಲ. ಕಾರಣ ಇಲ್ಲಿ ವಿವಾಹೇತರ ಸಂಬಂಧ ಖಾಸಗಿ ವಿಚಾರ, ಇಷ್ಟೇ ಅಲ್ಲಿ ಇಲ್ಲಿ ಯಾವುದೇ ಬಲವಂತದ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಈ ಕಾರಣದಿಂದ ಪೊಲೀಸರನ್ನು ಕರ್ತವ್ಯದಿಂದ ವಜಾ ಮಾಡಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಜಸ್ಟೀಸ್ ಸಂಗೀತಾ ವಿಶೇನ್ ಹೇಳಿ್ದಾರೆ. ತಕ್ಷಣವೇ ವಜಾಗೊಳಿಸಿರುವ ಪೊಲೀಸ್ ಪೇದೆಯನ್ನು ತಕ್ಷಣ ಮರುನೇಮಕ ಮಾಡಬೇಕು. ಜೊತೆಗೆ ಶೇಕಡಾ 25 ರಷ್ಟು ವೇತನವನ್ನ ನೀಡಬೇಕು ಎಂದು ಗುಜರಾತ್ ಹೈಕೋರ್ಟ್ ಸೂಚಿಸಿದೆ.
Cheating Wife: ನಿದ್ರೆಯಲ್ಲಿ ಗೆಳೆಯನ ಹೆಸರು ಕನವರಿಸಿದ ಪತ್ನಿ, ಪತಿಯದು ಅಧೋಗತಿ
ಪ್ರಕರಣದ ವಿವರ:
ಅರ್ಜಿದಾರ ಪೊಲೀಸ್ ಪೇದೆ ಶಾಹಿಬಾಗ್‌ನಲ್ಲಿ ಕುಟುಂಬದ ಜೊತೆ ವಾಸವಾಗಿದ್ದರು. ಇದೇ ಕಾಲೋನಿಯಲ್ಲಿ ವಿಧವೆಯಾಗಿದ್ದ ಮಹಿಳೆ ಜೊತೆ ಪೊಲೀಸ್ ಪೇದೆ ವಿವಾಹೇತರ ಸಂಬಂಧ ಬೆಳೆಸಿದ್ದಾರೆ. ಪೊಲೀಸ್ ಪೇದೆಯ ಕುಟುಂಬದ ಅನುಮಾನ ಹೆಚ್ಚಾಯಿತು. ಹೀಗಾಗಿ ಸಿಸಿಟಿವಿ ಅಳವಡಿಸಲಾಗಿತ್ತು. ಈ ಸಿಸಿಟಿವಿಯಲ್ಲಿ ಪೊಲೀಸ್ ಪೇದೆಯ ವಿವಾಹೇತರ ಸಂಬಂಧ ಸೆರೆಯಾಗಿತ್ತು. 2012ರಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿರುವ ಪೊಲೀಸರೇ ನೈತಿಕತೆ, ಅಶಿಸ್ತು ತೋರಿದ್ದಾರೆ ಎಂಬ ಕಾರಣ ನೀಡಿ 2013ರಲ್ಲಿ ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. ಯಾವುದೇ ವಿಚಾರಣೆ ನಡೆಸದೆ, ಕೇವಲ ವರದಿಗಳ ಆರೋಪದಡಿಯಲ್ಲಿ ಕರ್ತವ್ಯದಿಂದ ವಜಾಗೊಳಿಸಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಕರ್ತವ್ಯದಿಂದ ವಜಾಗೊಳಿಸಿರುವ ಪೊಲೀಸ್ ಆದೇಶವನ್ನು ಹಿಂಪಡೆಯಬೇಕು ಎಂದು ಪೊಲೀಸ್ ಪೇದೆ ಕೋರ್ಟ್ ಮೆಟ್ಟಿಲೇರಿದ್ದರು. ಒಮ್ಮತದ ಸಂಬಂಧವಾಗಿತ್ತು. ಇಲ್ಲಿ ಯಾವುದೇ ಬಲವಂತ ನಡೆದಿಲ್ಲ ಎಂದು ಪೊಲೀಸ್ ಪೇದೆ ಅರ್ಜಿಯಲ್ಲಿ ಹೇಳಿದ್ದರು.
#Feelfree: ವಿವಾಹೇತರ ಸಂಬಂಧದ ಬಯಕೆ, ನಿಭಾಯಿಸೋದು ಹೇಗೆ?
ಇದೀಗ ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ ನೀಡುವ ಮೂಲಕ 10 ವರ್ಷಗಳ ಹಿಂದಿನ ಪ್ರಕರಣಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ಯಾವುದೇ ಕಾನೂನಾತ್ಮಕ ಕಾರಣಗಳಿಲ್ಲದೆ ಕರ್ತವ್ಯದಿಂದ ವಜಾಗೊಳಿಸುವುದು ಸೂಕ್ತವಲ್ಲ ಎಂದು ಹೈಕೋರ್ಟ್ ಹೇಳಿದೆ.
ವಕೀಲರ ಬಾರ್ ಅಸೋಸಿಯೇಶನ್‌ಗೆ 100 ತಂಪು ಪಾನಿಯ ವಿತರಿಸುವ ಶಿಕ್ಷೆ!
ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ವರ್ಚುವಲ್ ಆಗಿ ಅರ್ಜಿ ವಿಚಾರಣೆ ನಡೆಯುತ್ತಿದ್ದ ವೇಳೆ ಸಣ್ಣ ಘಟನೆಯೊಂದು ನಡೆದಿದೆ. ಜಡ್ಜ್, ಲಾಯರ್, ಪೊಲೀಸ್, ವಾದಿ ಪ್ರತಿವಾದಿ ವರ್ಚುವಲ್ ವಿಚಾರಣೆಯಲ್ಲಿ ಹಾಜರಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಬಾಯಾರಿಕೆಯಿಂದ ಕೋಕಾ ಕೋಲಾ ತಂಪು ಪಾನಿಯ ಕುಡಿದಿದ್ದಾರೆ. ಇದನ್ನು ಗಮಿನಿಸಿದ ನ್ಯಾಯಾಧೀಶರು, ತಕ್ಷಣವೇ ವಿಚಿತ್ರ ಸೂಚನೆ ನೀಡಿದ್ದಾರೆ. ಕೋಕಾ ಕೋಲಾ ಕುಡಿದ ಪೊಲೀಸ್ ಅಧಿಕಾರಿಗೆ ಸಣ್ಣ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ವಕೀಲರ ಬಾರ ಅಸೋಸಿಯೇಶನ್‌ಗೆ 100 ತಂಪು ಪಾನಿಯ ವಿತರಿಸಲು ಸೂಚಿಸಿದ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ